Viral Video: ಎಲ್ಲಾ ಮಕ್ಕಳಿಗೂ ಮಾದರಿ ಈ ಕಂದಮ್ಮ, ಅಮ್ಮನ ಜತೆಗೆ ಈ ಪುಟ್ಟಕ್ಕನ ಕೃಷಿ ಕೆಲಸ

| Updated By: ಅಕ್ಷಯ್​ ಪಲ್ಲಮಜಲು​​

Updated on: May 09, 2024 | 2:01 PM

ಪುಟ್ಟ ಮಕ್ಕಳಿಗೆ ತಂದೆ-ತಾಯಿ ಎಂದರೆ ಎಲ್ಲಿಲ್ಲದ ಪ್ರೀತಿ. ತಮ್ಮ ಕೈಲಾಗದಿದ್ದರೂ ಕೂಡಾ ಈ ಪುಟ್ಟ ಕಂದಮ್ಮಗಳು ಹೆತ್ತವರಿಗೆ ಸಹಾಯ ಮಾಡಲು ಸದಾಕಾಲ ಮುಂದಿರುತ್ತಾರೆ. ಇಂತಹದ್ದೇ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಪುಟ್ಟ ಹುಡುಗಿಯೊಂದು  ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ತನ್ನ ತಾಯಿಯ ಸಹಾಯಕ್ಕೆ ನಿಂತಿದೆ. ಈ ಹೃದಯಸ್ಪರ್ಶಿ   ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

Viral Video: ಎಲ್ಲಾ ಮಕ್ಕಳಿಗೂ ಮಾದರಿ ಈ ಕಂದಮ್ಮ, ಅಮ್ಮನ ಜತೆಗೆ ಈ ಪುಟ್ಟಕ್ಕನ ಕೃಷಿ ಕೆಲಸ
ವೈರಲ್​​ ವಿಡಿಯೋ
Follow us on

ಈಗಿನ ಕಾಲದಲ್ಲಿ  ದೊಡ್ಡವರಾದ ನಾವುಗಳು ಬಿಡಿ, ಪುಟ್ಟ ಪುಟ್ಟ ಮಕ್ಕಳು ಕೂಡಾ ಸ್ಮಾರ್ಟ್ ಫೋನ್‌ ಕೈಯಲ್ಲಿ ಹಿಡಿದು ಕಾಲ ಕಳೆಯುತ್ತಿರುತ್ತಾರೆ. ಬಿಡುವಿನ ಸಮಯದಲ್ಲಿ ಕೆಲವು ಮಕ್ಕಳು ಟಿವಿಯಲ್ಲಿ ಕಾರ್ಟೂನ್‌ಗಳನ್ನು ನೋಡುತ್ತಾ ಸಮಯ ಕಳೆದರೆ, ಇನ್ನೂ ಕೆಲವು ಮಕ್ಕಳು ಪಾಠದ ಜೊತೆ ಜೊತೆಗೆ ಮೊಬೈಲ್‌ನಲ್ಲಿ ಸಮಯ ಕಳೆಯುತ್ತಿರುತ್ತಾರೆ. ಆದ್ರೆ ಇಲ್ಲೊಂದು ಪುಟ್ಟ ಬಾಲಕಿ ರಜಾ ದಿನದಲ್ಲಿ ಮೊಬೈಲ್‌, ಟಿವಿ ನೋಡುತ್ತಾ ಸಮಯ ಕಳೆಯದೆ ಹೊಲದ ಕಡೆಗೆ ಹೋಗಿ ತನ್ನ ತಾಯಿಯ ಕೃಷಿ ಕೆಲಸಕ್ಕೆ ಸಹಾಯವಾಗಿ ನಿಂತಿದ್ದಾಳೆ. ಈ ಮುದ್ದಾದ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಕುರಿತ ವಿಡಿಯೋವೊಂದನ್ನು @Viral Post Kannada ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇಂತಹ ಮಕ್ಕಳನ್ನು ಪಡೆಯಲು ತಂದೆ ತಾಯಿ ತುಂಬಾನೇ ಪುಣ್ಯ ಮಾಡಿರಬೇಕು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


ವೈರಲ್‌ ವಿಡಿಯೋದಲ್ಲಿ ಪುಟ್ಟ ಕಂದಮ್ಮ ತನ್ನ ಅಮ್ಮನ ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಸುಮಾರು 5 ವರ್ಷ ವಯಸ್ಸಿನ ಪುಟ್ಟ ಬಾಲೆ ತನ್ನ ಬಿಡುವಿನ ಸಮಯದಲ್ಲಿ ಮೊಬೈಲ್‌ ಅಥವಾ ಟಿವಿ ನೋಡುತ್ತಾ ಸಮಯ ಕಳೆಯದೆ, ಹೊಲಕ್ಕೆ ಬಂದು ತಾಯಿಯ ಕೃಷಿ ಕೆಲಸಕ್ಕೆ ಸಹಾಯ ಮಾಡಿದೆ. ಒಂದೆಡೆ ತಾಯಿ ಬೆಳೆಗಳ ನಡುವಿನ ಕಳೆಗಳನ್ನು ಕಿತ್ತರೆ, ಈ ಮಗು ನಗುನಗುತ್ತಲೇ ಆ ಕಿತ್ತ ಕಳೆಗಳನ್ನು ಅತ್ತಕಡೆ ಬಿಸಾಡಿ ಬರುವ ಕೆಲಸವನ್ನು ಮಾಡಿದೆ.

ಇದನ್ನೂ ಓದಿ: ಪ್ರತಿನಿತ್ಯ ಆತನ ಬರುವಿಕೆಗಾಗಿ ಕಾಯುವ ಶ್ವಾನ: ಇದು ಲೋಕೋ ಪೈಲಟ್ ಮತ್ತು ಬೀದಿನಾಯಿಯ ಸುಂದರ ಸ್ನೇಹ

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಇಂತಹ ಜೀವನ ಪಾಠವನ್ನು ಕಲಿಸಿಕೊಡಬೇಕೆಂದು ಎಂದು ಹೇಳುತ್ತಾ ನೆಟ್ಟಿಗರು ಈ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ