AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking: ಇಲ್ಲೊಬ್ಬ ವ್ಯಕ್ತಿ 20 ವರ್ಷಗಳಿಂದ ಪ್ರತಿನಿತ್ಯ 10 ಲೀಟರ್ ಪೆಪ್ಸಿ ಕುಡಿತಾನಂತೆ!

ಪಾನೀಯ ಪ್ರಿಯ ಇಂಗ್ಲೆಂಡ್​ನ ವ್ಯಕ್ತಿ 20 ವರ್ಷಗಳಿಂದ ದಿನಕ್ಕೆ 9-10 ಲೀಟರ್ ಪೆಪ್ಸಿ ಸೇವನೆ ಮಾಡುತ್ತಾ ಬರುತ್ತಿದ್ದಾರೆ. ಇದರ ಪರಿಣಾಮ ಅವರ ತೂಕ ಏರಿದ್ದು ಎಷ್ಟಕ್ಕೆ ಗೊತ್ತಾ? ಎಷ್ಟು ಖರ್ಚು ಮಾಡುತ್ತಿದ್ದ ಗೊತ್ತಾ? ಈ ಸುದ್ದಿ ಓದಿ.

Shocking: ಇಲ್ಲೊಬ್ಬ ವ್ಯಕ್ತಿ 20 ವರ್ಷಗಳಿಂದ ಪ್ರತಿನಿತ್ಯ 10 ಲೀಟರ್ ಪೆಪ್ಸಿ ಕುಡಿತಾನಂತೆ!
ಸಾಂಕೇತಿಕ ಚಿತ್ರ
TV9 Web
| Updated By: Rakesh Nayak Manchi|

Updated on:Jun 25, 2022 | 10:51 AM

Share

ದಿನಕ್ಕೆ ಮೂರ್ನಾಲ್ಕು ಲೀಟರ್ ನೀರು ಕುಡಿಯಲು ಹರಸಾಹಸ ಮಾಡುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ದಿನಕ್ಕೆ 10 ಲೀಟರ್ ಪೆಪ್ಸಿ (Pepsi) ಕೊಡಿತಾನಂತೆ ಎಂದು ಕೇಳಿದಾಗ ಯಾರಿಗೆ ತಾನೆ ಶಾಕ್ ಆಗಲ್ಲ ಹೇಳಿ? ಅಷ್ಟಕ್ಕೂ ಇಂಥ ಪಾನೀಯಗಳು ಆರೋಗ್ಯಕ್ಕೆ ಒಳ್ಳೆಯದೂ ಅಲ್ಲ, ಆದರೆ ಆಂಡಿ ಕ್ಯೂರಿ ಎಂಬ ಇಂಗ್ಲೆಂಡ್​ನ ವ್ಯಕ್ತಿ ಮಾತ್ರ ಇಂಥ ಪಾನೀಯಾಕ್ಕೆ ಎಡಿಕ್ಟ್ (Addict) ಆಗಿಬಿಟ್ಟಿದ್ದಾನೆ. ಹಾಗಿದ್ದರೆ ಆಂಡಿ ಕ್ಯೂರಿಗೆ ಆರೋಗ್ಯ ಸಮಸ್ಯೆ ಬಂದಿಲ್ವಾ? ಎಷ್ಟು ಖರ್ಚು ಮಾಡುತ್ತಿದ್ದಾ? ಈ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

ಟೆಸ್ಕೊ ಹೆಸರಿನ ಸೂಪರ್‌ಮಾರ್ಕೆಟ್‌ನಲ್ಲಿ ಕೆಲಸ ಮಾಡುವ 41 ವರ್ಷದ ಆಂಡಿ ಕ್ಯೂರಿ ಅವರಿಗೆ ತಂಪು ಪಾನೀಯಾ ಅಂದರೆ ಬಲು ಇಷ್ಟ. ಅದರಂತೆ ಪ್ರತಿದಿನ ಬೆಳಿಗ್ಗೆ ಒಂದು ಲೀಟರ್ ಫಿಜ್ಜಿ ಪಾನೀಯವನ್ನು ಕಡಿಯುತ್ತಿದ್ದರು. ನ್ಯೂಸ್‌ವೀಕ್‌ನ ಪ್ರಕಾರ, ಕ್ಯೂರಿ ಅವರು ಫಿಜ್ಜಿ ಪಾನೀಯಾವನ್ನು ದಿನಕ್ಕೆ 9 ಲೀಟರ್​ನಷ್ಟು ಕುಡಿಯುತ್ತಿದ್ದರು. ಈಗಾಗಲೇ ಅವರು 219,000 ಪೆಪ್ಸಿ ಕ್ಯಾನ್‌ಗಳಲ್ಲಿ ಸುಮಾರು 8,000 ಕೆಜಿ ಸಕ್ಕರೆಯನ್ನು ಹೀರಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಪಾನೀಯಾಕ್ಕಾಗಿ ವ್ಯಯಿಸುವ ಹಣ ಎಷ್ಟೆಂದು ಕೇಳಿದರೆ ಅಚ್ಚರಿಗೊಳ್ಳುವಿರಿ. 20 ವರ್ಷಗಳ ಕಾಲ ದಿನಕ್ಕೆ 30 ಕ್ಯಾನ್‌ಗಳ ಪೆಪ್ಸಿಯನ್ನು ಗುಜಲು ಮಾಡಲು ವರ್ಷಕ್ಕೆ ಸುಮಾರು 6,65,146 ರೂಪಾಯಿ ಖರ್ಚು ಮಾಡಿದ್ದಾರೆ.

ಇದನ್ನೂ ಓದಿ: Viral Video: ತಡವಾಗಿ ಬಂದ ಶಿಕ್ಷಕಿಗೆ ಚಪ್ಪಲಿಯಲ್ಲಿ ಥಳಿಸಿದ ಪ್ರಿನ್ಸಿಪಾಲ್; ಶಾಕಿಂಗ್ ವಿಡಿಯೋ ವೈರಲ್

“ನಾನು ಯಾವಾಗಲೂ ತಣ್ಣನೆಯ ಪೆಪ್ಸಿಯ ರುಚಿಯನ್ನು ಇಷ್ಟಪಡುತ್ತೇನೆ. ನಾನು ರಾತ್ರಿಯಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆ ವಿಪರೀತವಾಗಿ ಸಕ್ಕರೆಯನ್ನು ಯಾವಾಗಲೂ ಇಷ್ಟಪಡುತ್ತೇನೆ. ನಾನು ಪ್ರತಿದಿನ ನಾಲ್ಕು ಅಥವಾ ಐದು ಎರಡು ಲೀಟರ್ ಬಾಟಲ್ ಪೆಪ್ಸಿ ಸೇವಿಸುತ್ತೇನೆ”ಎಂದು ಆಂಡಿ ಕ್ಯೂರಿ ಹೇಳಿದ್ದಾರೆ.

ಪೆಪ್ಸಿಗೆ ಖರ್ಚು ಮಾಡುತ್ತಿರುವ ಅದೇ ಮೊತ್ತಕ್ಕೆ ಪ್ರತಿ ವರ್ಷ ಕಾರನ್ನು ಖರೀದಿಸಬಹುದಿತ್ತು ಎಂದು ಬಹಿರಂಗಪಡಿಸಿದ ಅವರು, “ನಾನು ಎಚ್ಚರವಾದ ತಕ್ಷಣ ಫ್ರಿಡ್ಜ್‌ ಬಳಿ ಹೋಗಿ ದೊಡ್ಡ ಗ್ಲಾಸ್ ಪೆಪ್ಸಿಯನ್ನು ಕುಡಿಯುತ್ತೇನೆ ಮತ್ತು ದಿನವಿಡೀ ಮುಂದುವರಿಸುತ್ತೇನೆ” ಎಂದಿದ್ದಾರೆ.

ಇದನ್ನೂ ಓದಿ: viral video: ಏನ್ ಗುರು ಎಷ್ಟು ಬಾಯಿ ಹಾಕಿದ್ರೂ ಮಾಂಸದ ತುಂಡು ಬಾಯ್ಗೇ ಬರ್ತಿಲ್ವಲ್ಲಾ! ಪಾಪ ಮಾರೆ ಸಾಕುನಾಯಿ

266 ಪೌಂಡ್‌ಗಳಿಗೆ ಏರಿದ ತೂಕ

ದೈನಂದಿನ ಪಾನೀಯಾದಿಂದಾಗಿ ತೂಕವು 266 ಪೌಂಡ್‌ಗಳಿಗೆ ಏರಿದ ನಂತರ ಕ್ಯೂರಿ ಅವರು ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದರು. ಅದರಂತೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ 28 ಪೌಂಡ್​ ತೂಕ ಕಳೆದುಕೊಂಡರು. ಆದರೆ ಪೆಪ್ಸಿ ಕುಡಿಯುವ ಚಟ ಮಾತ್ರ ಬಿಡಲು ಸಾಧ್ಯವಾಗಿಲ್ಲ. ಹೀಗಾಗಿ ಲಂಡನ್ ಮೂಲದ ಚಿಕಿತ್ಸಕ ಮತ್ತು ಸಂಮೋಹನಕಾರ ಡೇವಿಡ್ ಕಿಲ್ಮುರಿ ಅವರನ್ನು ಸಂಪರ್ಕಿಸಿದರು.

ನ್ಯೂಸ್‌ವೀಕ್‌ನ ಪ್ರಕಾರ, ಕ್ಯೂರಿ ಅವರು ಆಹಾರ ಸೇವನೆಯ ಅಸ್ವಸ್ಥತೆ ಹೊಂದಿದ್ದರು ಎಂದು ಗುರುತಿಸಲಾಗಿದೆ. ಆಶ್ಚರ್ಯಕರವಾಗಿ, ಕೇವಲ ಒಂದು ಆನ್‌ಲೈನ್ ಹಿಪ್ನೋಥೆರಪಿ ಕಾರ್ಯಗಾರದ ನಂತರ ಕ್ಯೂರಿ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಅದರಂತೆ ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಅವರು ನೀರು ಕುಡಿದಿದ್ದಾರೆ.

ಇದನ್ನೂ ಓದಿ: Viral Video: ದೇಹದ ಹೊರಗಲ್ಲ, ಒಳಗಿನ ಸೌಂದರ್ಯ ಹೆಚ್ಚಿಸಲು ಡವ್ ಸಾಬೂನು ತಿನ್ನುವ ಭೂಪ!

Published On - 10:50 am, Sat, 25 June 22