Viral Video: ಲಿಫ್ಟ್ ನಲ್ಲಿ ಹೋಗುವಾಗ ನೀವು ಸಹ ಈ ತಪ್ಪನ್ನು ಮಾಡುತ್ತೀರಾ?ವಿಡಿಯೋ ಒಮ್ಮೆ ನೋಡಿ

| Updated By: ಅಕ್ಷತಾ ವರ್ಕಾಡಿ

Updated on: Mar 24, 2024 | 4:36 PM

ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ಲಿಫ್ಟ್ ನಿಲ್ಲಿಸಲು ಡೋರ್ ಮಧ್ಯೆ ಕೈ ಇಟ್ಟ ಸಂದರ್ಭದಲ್ಲಿ ಲಿಫ್ಟ್ ಡೋರ್ ಇದ್ದಕ್ಕಿದ್ದಂತೆ ಕ್ಲೋಸ್ ಆದ ಪರಿಣಾಮ ಆ ವ್ಯಕ್ತಿಯ ಕೈ ತುಂಡಾಗಿ ಕೆಳಗೆ ಬಿದ್ದಿದೆ. ಇದು ಫೇಕ್ ವಿಡಿಯೋ, ಇದು ವಾಸ್ತವಕ್ಕೆ ಹತ್ತಿರವಿಲ್ಲದಿದ್ದರೂ, ಇಂತಹ ತಪ್ಪುಗಳನ್ನು ಮಾಡಬಾರದು ಎಂದು ಜನರಿಗೆ ಉತ್ತಮ ಪಾಠ ಕಲಿಸುವಂತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Viral Video: ಲಿಫ್ಟ್ ನಲ್ಲಿ ಹೋಗುವಾಗ ನೀವು ಸಹ ಈ ತಪ್ಪನ್ನು ಮಾಡುತ್ತೀರಾ?ವಿಡಿಯೋ ಒಮ್ಮೆ ನೋಡಿ
Follow us on

ಇದು ಆಧುನಿಕ ಯುಗ. ಹೊಸ ಹೊಸ ಟೆಕ್ನಾಲಜಿಗಳನ್ನು ಸಂಶೋಧಕರು ಅನ್ವೇಷಿಸುತ್ತಾ ಇರುತ್ತಾರೆ. ಜನರ ಕೆಲಸಗಳನ್ನು ಸುಲಭಗೊಳಿಸುವ ಹಲವಾರು ತಂತ್ರಜ್ಞಾನಗಳು ಇವೆ. ಅದರಲ್ಲಿ ಲಿಫ್ಟ್ ಕೂಡಾ ಒಂದು. ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಲಿಫ್ಟ್ ಗಳು ಸರ್ವೇ ಸಾಮಾನ್ಯವಾಗಿ ಇದ್ದೇ ಇರುತ್ತಾರೆ. ಜನರು ಆಫೀಸಿಗೆ ಅಥವಾ ಶಾಪಿಂಗ್ ಹೋದಾಗ ಮೆಟ್ಟಿಲುಗಳನ್ನು ಬಳಸೋ ಬದಲು ಲಿಫ್ಟ್ ಗಳನ್ನೇ ಬಳಸುತ್ತಾರೆ. ಇನ್ನೂ ಕೆಲವರು ಲಿಫ್ಟ್ ಒಳಗೆ ಹೋದ ಬಳಿಕ ಯಾರಾದ್ರೂ ಅರ್ಜೆಂಟ್ ಆಗಿ ದೂರದಿಂದ ಲಿಫ್ಟ್ ಹತ್ತಲು ಓಡುತ್ತಾ ಬಂದರೆ ಲಿಫ್ಟ್ ಡೋರ್ ಮಧ್ಯೆ ಕೈ ಅಥವಾ ಕಾಲಿಟ್ಟು ಲಿಫ್ಟ್ ಅನ್ನು ತಡೆದು ನಿಲ್ಲಿಸುತ್ತಾರೆ. ಈ ರೀತಿಯ ತಪ್ಪು ಕೆಲಸವನ್ನು ನೀವು ಸಹ ಮಾಡುತ್ತಿದ್ದರೆ, ದಯವಿಟ್ಟು ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಯಾರೋ ಲಿಫ್ಟ್ ಏರಲು ಬರುತ್ತಿದ್ದಾರೆ ಎಂದು ಡೋರ್ ಮಧ್ಯೆ ಕೈಯಿಟ್ಟು ಲಿಫ್ಟ್ ನಿಲ್ಲಿಸಲು ಹೋಗಿ ಆ ವ್ಯಕ್ತಿ ತನ್ನ ಒಂದು ಕೈಯನ್ನೇ ಕಳೆದುಕೊಂಡಿದ್ದಾರೆ. ಈ ವಿಡಿಯೋವನ್ನು @TriShool_Achuk ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, , “ದಯವಿಟ್ಟು ಲಿಫ್ಟ್ ಅನ್ನು ನಿಲ್ಲಿಸಲು ನಿಮ್ಮ ಕೈ ಅಥವಾ ಕಾಲನ್ನು ಡೋರ್ ಮಧ್ಯದಲ್ಲಿ ಇಡಬೇಡಿ, ಸೆನ್ಸರ್ ಕೆಲಸ ಮಾಡದಿದ್ದರೆ ದೊಡ್ಡ ಅಪಾಘಾತ ಸಂಭವಿಸಬಹುದು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಯಾವುದೋ ಬಿಲ್ಡಿಂಗ್ ಒಂದರಲ್ಲಿ ವ್ಯಕ್ತಿಯೊಬ್ಬರು ಲಿಫ್ಟ್ ಡೋರ್ ಓಪನ್ ಆಗುತ್ತಿದ್ದಂತೆ ಲಿಫ್ಟ್ ಒಳಗೆ ಪ್ರವೇಶಿಸುವುದನ್ನು ಕಾಣಹುದು. ಲಿಫ್ಟ್ ಒಳಗೆ ಪ್ರವೇಶಿಸುತ್ತಿದ್ದಂತೆ, ಇನ್ಯಾರೋ ಲಿಫ್ಟ್ ಏರಲು ಬರುತ್ತಿರುವುದನ್ನು ಕಂಡ ಆ ವ್ಯಕ್ತಿ ಲಿಫ್ಟ್ ನಿಲ್ಲಿಸಲು ಡೋರ್ ಮಧ್ಯೆ ಕೈ ಇಡುತ್ತಾರೆ. ಆ ಸಂದರ್ಭದಲ್ಲಿ ಸೆನ್ಸರ್ ಕಾರ್ಯನಿರ್ವಹಿಸದ ಕಾರಣ, ಆ ವ್ಯಕ್ತಿಯ ಕೈ ಸಮೇತ ಲಿಫ್ಟ್ ಡೋರ್ ಕ್ಲೋಸ್ ಆಗಿ ಲಿಫ್ಟ್ ಮೇಲಕ್ಕೆ ಚಲಿಸಲು ಪ್ರಾರಂಭಿಸುತ್ತದೆ. ಪರಿಣಾಮವಾಗಿ ಆ ವ್ಯಕ್ತಿಯ ಕೈ ತುಂಡಾಗಿ ಕೆಳಗೆ ಬೀಳುತ್ತದೆ. ಇದನ್ನು ಕಂಡಂತಹ ಮಹಿಳೆಯೊಬ್ಬದು ಸಹಾಯಕ್ಕಾಗಿ ಕಿರಿಚಾಡುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ನವ ದಂಪತಿ ವಿರುದ್ಧ ಎಫ್‌ಐಆರ್ ದಾಖಲು

ಮಾರ್ಚ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಆರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಹಲವರು ಯಾರಾದರೂ ಲಿಫ್ಟ್ ಮಧ್ಯೆ ಕೈಯಿಟ್ಟಾಗ ಲಿಫ್ಟ್ ಡೋರ್ ಕ್ಲೋಸ್ ಆಗೊಲ್ಲ, ಇದು ನಕಲಿ ವಿಡಿಯೋವೆಂದು ಹೇಳಿದ್ದಾರೆ. ಇನ್ನೂ ಕೆಲವರು ವಿಡಿಯೋ ನಕಲಿಯಾಗಿದ್ದರೂ ಜನರಿಗೆ ಈ ತಪ್ಪುಗಳನ್ನು ಮಾಡದಂತೆ ಉತ್ತಮ ಪಾಠ ಕಲಿಸುವಂತಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ