AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲು ಖರೀದಿಸಿದ್ದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾದ 7 ವರ್ಷದ ಹಳೆಯ ಕಾರು; ಇಲ್ಲಿದೆ ಅಚ್ಚರಿಯ ಘಟನೆ

Viral News: ವಾಹನಗಳು ಹಳೆಯದಾದಷ್ಟೂ ಕಡಿಮೆ ಬೆಲೆಬಾಳುತ್ತವೆ. ಆದರೆ ಅಚ್ಚರಿಯ ಪ್ರಕರಣವೊಂದರಲ್ಲಿ ಮೂಲ ಬೆಲೆಗಿಂತ ಹೆಚ್ಚಿನ ಬೆಲೆಗೆ 7 ವರ್ಷದ ಹಳೆಯ ಕಾರನ್ನು ಮಾರಾಟ ಮಾಡಲಾಗಿದೆ!

ಮೊದಲು ಖರೀದಿಸಿದ್ದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾದ 7 ವರ್ಷದ ಹಳೆಯ ಕಾರು; ಇಲ್ಲಿದೆ ಅಚ್ಚರಿಯ ಘಟನೆ
ಪ್ರಾತಿನಿಧಿಕ ಚಿತ್ರ
TV9 Web
| Updated By: shivaprasad.hs|

Updated on: Feb 13, 2022 | 11:44 AM

Share

ವಸ್ತುಗಳನ್ನು ಖರೀದಿಸುವುದು, ಮಾರಾಟ ಮಾಡುವುದು ಒಂದು ಕಲೆ. ಹಲವರಿಗೆ ಇದೇ ಒಂದು ಉದ್ಯಮ ಕೂಡ. ಅದರಲ್ಲೂ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಮಾರಾಟ ಮಾಡುವುದು ಒಂದು ಕಲೆ. ಆದರೆ ವಾಹನಗಳಿಗೆ ವರ್ಷ ಕಳೆದಷ್ಟೂ ಬೆಲೆ ಕಡಿಮೆಯಾಗುತ್ತದೆ. ಇಲ್ಲೊಂದು ಅಚ್ಚರಿಯ ಪ್ರಕರಣದಲ್ಲಿ ಅದಕ್ಕೆ ಅಪವಾದವೆನ್ನುವ ವಿಶೇಷ ವಿದ್ಯಮಾನವೊಂದು ವರದಿಯಾಗಿದೆ. ಹೌದು. ಓರ್ವ ವ್ಯಕ್ತಿ ತಮ್ಮ ಹಳೆಯ ಕಾರನ್ನು ಮೂಲ ಬೆಲೆಗಿಂತ ಅಧಿಕ ಮೊತ್ತಕ್ಕೆ ಬೇರೆಯವರಿಗೆ ಮಾರಿದ್ದಾರೆ. ಈ ಪ್ರಕರಣ ಸದ್ಯ ಸಖತ್ ಸುದ್ದಿಯಾಗಿದ್ದು, ವೈರಲ್ (Viral) ಆಗಿದೆ. ಮಾಧ್ಯಮವೊಂದು ಈ ಪ್ರಕರಣದ ಕುರಿತು ವರದಿ ಮಾಡಿದೆ. ಸೀನ್ ಹೋಲಿಸ್ಟರ್ ಎಂಬ ವ್ಯಕ್ತಿ 7 ವರ್ಷಗಳ ಹಿಂದೆ ಹೋಂಡಾ ಕಾರನ್ನು ಖರೀದಿಸಿದ್ದರು. ಇದೀಗ ಸ್ಟಾರ್ಟಪ್ ಕಂಪನಿಯೊಂದಕ್ಕೆ (Startup Company) ಅವರು ತಾವು ಮೊದಲು ಖರೀದಿಸಿದ್ದಕ್ಕಿಂತ ಅಧಿಕ ಮೊತ್ತಕ್ಕೆ ಕಾರನ್ನು ಮಾರಾಟ ಮಾಡಿದ್ದಾರೆ. 2014ರ ಡಿಸೆಂಬರ್​ನಲ್ಲಿ ಅವರು $ 20,814.80 (ಸುಮಾರು ರೂ. 15.74 ಲಕ್ಷ) ನೀಡಿ ಹೋಂಡಾ ಫಿಟ್ ಕಾರನ್ನು ಖರೀದಿಸಿದ್ದರು. ಇದೀಗ ಕಾರನ್ನು ಕಾರ್ವಾನಾ ಎಂಬ ಸ್ಟಾರ್ಟಪ್ ಕಂಪನಿಯು 2021ರ ಡಿಸೆಂಬರ್‌ನಲ್ಲಿ 20,905 ಡಾಲರ್​ಗೆ (ಸುಮಾರು ರೂ. 15.81 ಲಕ್ಷ) ಮಾರಾಟ ಮಾಡಿದ್ದಾರೆ.

ಏಳು ವರ್ಷ ಹಳೆಯದಾಗಿದ್ದರೂ ಕಾರು ಯೋಗ್ಯ ಸ್ಥಿತಿಯಲ್ಲಿದೆ ಎಂದು ಸೀನ್ ಹೋಲಿಸ್ಟರ್ ಹೇಳಿದ್ದಾರೆ. ಅಪಘಾತಗಳಾಗದೇ, ಕಾರು ಸುಸ್ಥಿಯಲ್ಲಿದೆ. ಮೈಲೇಜ್ ಕೂಡ ಉತ್ತಮವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ‘‘ಬಳಸಿದ ಕಾರುಗಳು ತಮ್ಮ ಮೂಲ ಬೆಲೆಗಿಂತ ಹೆಚ್ಚಿನ ಬೆಲೆಗೆ ಎಂದಿಗೂ ಮಾರಾಟವಾಗುವುದಿಲ್ಲ. ಆದರೆ ಇದು ಅದಕ್ಕೆ ಅಪವಾದ’’ ಎಂದಿದ್ದಾರೆ ಹೋಲಿಸ್ಟರ್.

ವಿಶೇಷವೆಂದರೆ ಕಾರನ್ನು ಖರೀದಿಸಿರುವ ಸ್ಟಾರ್ಟಪ್ ಕಂಪನಿ, ಕಾರನ್ನು ಹೆಚ್ಚು ಪರಾಮರ್ಶಿಸದೇ ಹಣ ಪಾವತಿಸಲು ಒಪ್ಪಿಕೊಂಡಿತ್ತು. ಅಲ್ಲದೇ ಆನ್​ಲೈನ್​ನಲ್ಲಿ ಚೆಕ್ ಕೂಡ ಬಂದಿತ್ತು. ಮಾತನಾಡಿದ ಕೆಲವೇ ದಿನಕ್ಕೆ ಅಂದರೆ ಡಿಸೆಂಬರ್ 14ರಂದು ಸ್ಟಾರ್ಟಪ್ ಕಂಪನಿಯ ಏಜೆಂಟ್ ಆಗಮಿಸಿದ್ದರು ಎಂದು ಹೋಲಿಸ್ಟರ್ ಮಾಹಿತಿ ನೀಡಿದ್ದಾರೆ.

ಏಜೆಂಟ್ ಕಾರನ್ನು ಖರೀದಿಸಲು ಆಗಮಿಸಿದಾಗ ಕೂಡ ಹೆಚ್ಚಿನ ಪರಾಮರ್ಶೆ ನಡೆಸಲಿಲ್ಲವಂತೆ. ಯಾವುದೇ ಪ್ರಶ್ನೆ ಕೇಳದೇ, ಚೆಕ್​ಗೆ ಸಹಿ ಮಾಡಿ ಹೋಲಿಸ್ಟರ್​​ಗೆ ನೀಡಿದರಂತೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹೋಲಿಸ್ಟರ್ ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದರಂತೆ. ಸ್ಟಾರ್ಟಪ್ ನೀಡಿದ ಚೆಕ್​ನ ಹಣ ಕ್ರಿಸ್​ಮಸ್​ಗೂ ಹಿಂದಿನ ದಿನ ಹೋಲಿಸ್ಟರ್ ಖಾತೆಗೆ ಜಮಾವಣೆಯಾಗಿತ್ತು. ಈ ಮೂಲಕ 2022ರ ಕ್ರಿಸ್​ಮಸ್​ನ್ನು 7 ವರ್ಷಗಳ ಹಳೆಯ ಕಾರನ್ನು ಮೂಲಬೆಲೆಗಿಂತ ಹೆಚ್ಚಿನದಕ್ಕೆ ಮಾರಾಟ ಮಾಡಿ ಭರ್ಜರಿಯಾಗಿ ಅವರು ಆಚರಿಸಿದ್ದರು.

ಇದನ್ನೂ ಓದಿ:

₹ 200 ಕೋಟಿ ಮೌಲ್ಯದ 2 ಲಕ್ಷ ಕೆಜಿ ಗಾಂಜಾಕ್ಕೆ ಬೆಂಕಿ ಹಚ್ಚಿ ನಾಶ ಮಾಡಿದ ಆಂಧ್ರಪ್ರದೇಶ ಪೊಲೀಸ್; ವಿಡಿಯೊ ನೋಡಿ

ಟೀಕಿಸುವ ಭರದಲ್ಲಿ ತಪ್ಪು ಮಾಡಬೇಡಿ; ಶಶಿ ತರೂರ್​ ಇಂಗ್ಲಿಷ್​​ ತಿದ್ದಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ