
ದುಡಿದು ತಿನ್ನುವ ಛಲವಿದ್ದರೆ ದೈಹಿಕ ನ್ಯೂನತೆ ಲೆಕ್ಕಕ್ಕೆ ಬರಲ್ಲ. ಅಂಗವೈಕಲ್ಯತೆ ಹೊಂದಿರುವ ವ್ಯಕ್ತಿಯೊಬ್ಬ ಇಂದಿನ ಯುವಕ ಯುವತಿಯರಿಗೆ ಮಾದರಿಯಾಗಿದ್ದಾನೆ. ವೈರಲ್ ವಿಡಿಯೋದಲ್ಲಿ ದೈಹಿಕ ನ್ಯೂನತೆ (physical disability) ಮೀರಿ ಶ್ರಮ ವಹಿಸಿ ದುಡಿಯುತ್ತಿದ್ದಾನೆ. ಈ ದೃಶ್ಯವು ಗುಂಡಿಯನ್ನು ಅಗೆಯುತ್ತಿರುವ ಈ ಕೂಲಿ ಕಾರ್ಮಿಕನ ಶ್ರಮವನ್ನು ಎತ್ತಿ ತೋರಿಸಿದೆ. ಈ ವಿಡಿಯೋ ಸದ್ಯ ಆನ್ಲೈನ್ ನಲ್ಲಿ ಚರ್ಚೆಗೆ ಕಾರಣವಾಗಿದೆ.
ಇಂಡಿಯಾ ಬ್ಲಾಕ್ ಬಸ್ಟರ್ (India Blockbuster) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ವಿಕಲಚೇತನ ವ್ಯಕ್ತಿಯೊಬ್ಬ ಆಳವಾದ ಗುಂಡಿಗಳನ್ನು ಅಗೆಯುತ್ತಿರುವುದನ್ನು ಕಾಣಬಹುದು. ಮೂರೊತ್ತಿನ ತುತ್ತಿಗಾಗಿ ಪ್ರಾಮಾಣಿಕವಾಗಿ ದುಡಿಯುವ ವ್ಯಕ್ತಿಯ ಶ್ರಮದ ಕೆಲಸವನ್ನು ನೀವಿಲ್ಲಿ ಕಾಣಬಹುದು.
ಇದನ್ನೂ ಓದಿ: ಗಾಯಗೊಂಡು ಕುಂಟುತ್ತಾ ನಡೆಯುತ್ತಿದ್ದ ಮಾಲಕಿಯನ್ನೇ ಅನುಕರಣೆ ಮಾಡಿದ ಗಜರಾಜ
ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದೇವರೇ ಈ ವ್ಯಕ್ತಿ ಆರೋಗ್ಯ ಹಾಗೂ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇನ್ನೊಬ್ಬರು, ನಿಮಗೊಂದು ಸಲಾಂ, ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆದು ಮಾಡಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ಮಾಡುವ ಬದಲು ಈ ವ್ಯಕ್ತಿಗೆ ಸಹಾಯ ಮಾಡಬಾರದೇ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ