Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಾರ್ಲೇ-ಜಿ ಬಿಸ್ಕೆಟ್​​​ನಲ್ಲಿ ಮೂಡಿದ ಅಯೋಧ್ಯೆ ರಾಮ ಮಂದಿರ 

ರಾಮ ಮಂದಿರ ಉದ್ಘಾಟನೆಗೆ  ದಿನಗಣನೆ ಶುರುವಾಗಿದ್ದು, ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ. ಈ ನಡುವೆ ಅನೇಕ ರಾಮ ಭಕ್ತರು ತಮ್ಮದೇ ಆದ ರೀತಿಯಲ್ಲಿ ಭಕ್ತಿಯನ್ನು ತೋರ್ಪಡಿಸುತ್ತಿದ್ದಾರೆ. ಅದೇ ರೀತಿ  ಪಶ್ಚಿಮ ಬಂಗಾಳದ ದುರ್ಗಾಪುರ ನಗರದ  ಯುವಕನೊಬ್ಬ ಬರೋಬ್ಬರಿ  20 ಕೆ.ಜಿ ಪಾರ್ಲೆ-ಜಿ ಬಿಸ್ಕಿಟ್ ಬಳಸಿಕೊಂಡು ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿಕೃತಿಯನ್ನು ರಚಿಸಿದ್ದಾನೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

Viral Video: ಪಾರ್ಲೇ-ಜಿ ಬಿಸ್ಕೆಟ್​​​ನಲ್ಲಿ ಮೂಡಿದ ಅಯೋಧ್ಯೆ ರಾಮ ಮಂದಿರ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 17, 2024 | 11:58 AM

ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದ್ದು,  ಈ ಒಂದು ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ರಾಮ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ರಾಮ ಭಕ್ತರು ತಮ್ಮ ಭಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ತೋರ್ಪಡಿಸುತ್ತಿರುವ ಸುದ್ದಿಗಳು ಹರಿದಾಡುತ್ತಿವೆ.  ಕೆಲವು ರಾಮ ಭಕ್ತರು ತಮ್ಮ ಊರುಗಳಿಂದ ಪಾದಯಾತ್ರೆಯ ಮೂಲಕವೇ ಪ್ರಭು ಶ್ರೀರಾಮನ ದರ್ಶನಕ್ಕೆ ಹೊರಟಿದ್ದಾರೆ. ಹಾಗೂ ಇತ್ತೀಚಿಗೆ ರಾಮ ಭಕ್ತರೊಬ್ಬರು ರಾಮ ಮಂದಿರ ಪರಿಕಲ್ಪನೆಯಲ್ಲಿ ವಜ್ರದ ಹಾರವನ್ನು ತಯಾರಿಸಿ ಸುದ್ದಿಯಲ್ಲಿದ್ದರು. ಹಾಗೇನೇ ಮಹಿಳೆಯೊಬ್ಬರು ರಾಮ ಮಂದಿರ ಥೀಮ್ ಅಲ್ಲಿ ಕೇಕ್ ತಯಾರಿಸುವ ಮೂಲಕ ತಮ್ಮ ಭಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ತೋರ್ಪಡಿಸಿದ್ದರು.  ಅದೇ ರೀತಿ ಪಶ್ಚಿಮ ಬಂಗಾಳದ ಯವಕನೊಬ್ಬ ಇದೀಗ ಬರೋಬ್ಬರಿ 20 ಕೆ.ಜಿ ಗಳಷ್ಟು ಪಾರ್ಲೆ-ಜಿ ಬಿಸ್ಕೆಟ್ ಬಳಸಿಕೊಂಡು ಅದರಿಂದ  ಅದ್ಭುತವಾದ ರಾಮ ಮಂದಿರ ಪ್ರತಿಕೃತಿಯನ್ನು ರಚಿಸಿದ್ದಾನೆ.

ಪಶ್ಚಿಮ ಬಂಗಾಳದ ದುರ್ಗಾಪುರ ನಗರದ  ಯುವಕನಾದ  ಛೋಟಾನ್ ಘೋಷ್, ಪಾರ್ಲೆ-ಜಿ ಬಿಸ್ಕೆಟ್​​​ಗಳಿಂದ ರಾಮ ಮಂದಿರ ಪ್ರತಿಕೃತಿಯನ್ನು ರಚಿಸಿದ್ದು, ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ರಾಮ ಮಂದಿರ ಪ್ರತಿಕೃತಿಯನ್ನು ರಚಿಸಲು ಛೋಟಾನ್ ಘೋಷ್ ಬರೋಬ್ಬರಿ 20 ಕೆ.ಜಿ  ಪಾರ್ಲೆ ಜಿ ಬಿಸ್ಕಿಟ್ಗಳನ್ನು ಬಳಸಿದ್ದು,  4-4 ಅಡಿ ಎತ್ತರದ ಈ ರಾಮ ಮಂದಿರ ಪ್ರತಿಕೃತಿಯನ್ನು ರಚಿಸಲು ಛೋಟಾನ್ ಘೋಷ್ ಮತ್ತು ಆತನ ಸ್ನೇಹಿತರು ಐದು ದಿನಗಳನ್ನು ತೆಗೆದುಕೊಂಡರು.  ಅಲ್ಲದೆ ಈ ಪ್ರತಿಕೃತಿಯನ್ನು ರಚಿಸಲು  ಬಿಸ್ಕೆಟ್  ಜೊತೆಗೆ ಥರ್ಮಕೋಲ್, ಪ್ಲೈವುಡ್ ಮತ್ತು  ಗಮ್​​​​​ಗಳನ್ನು ಸಹ ಬಳಸಿದ್ದಾರೆ.

ಇದನ್ನೂ ಓದಿ: ತಲೆ ಕೆಳಗಾಗಿ ನಡೆಯುತ್ತಾ ಪ್ರಭು ಶ್ರೀರಾಮನ ದರ್ಶನಕ್ಕೆ ಅಯೋಧ್ಯೆಗೆ ಹೊರಟ ರಾಮಭಕ್ತ 

@durgapur_times ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 20 ಕೆ.ಜಿ ಬಿಸ್ಕೆಟ್​​​ಗಳನ್ನು ಬಳಸಿ ತಯಾರಿಸಿದಂತಹ ರಾಮ ಮಂದಿರ ಪ್ರತಿಕೃತಿ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಬರೋಬ್ಬರಿ 20 ಕೆ.ಜಿ ಪಾರ್ಲೆಜಿ ಬಿಸ್ಕೆಟ್ ಗಳನ್ನು ಬಳಸಿಕೊಂಡು  4-4 ಅಡಿ ಎತ್ತರದ ಅದ್ಭುತವಾದ ರಾಮ ಮಂದಿರ ಪ್ರತಿಕೃತಿಯನ್ನು ರಚಿಸುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು.

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 19 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2.6 ಮಿಲಿಯನ್ ಲೈಕ್ಸ್​​​​ಗಳನ್ನು ಪಡೆದುಕೊಂಡಿದೆ. ಹಾಗೂ ನೆಟ್ಟಿಗರು ಕಮೆಂಟ್ಸ್ ಮಾಡುವ ಮೂಲಕ ಈ ಯುವಕ ಪ್ರತಿಭೆಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಒಬ್ಬ ಬಳಕೆದಾರರು ʼಬಹಳ ಅದ್ಭುತವಾಗಿದೆ ರಾಮ ಮಂದಿರ ಪ್ರತಿಕೃತಿʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼವ್ಹಾವ್ ತುಂಬಾ ಚೆನ್ನಾಗಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ