ಇಂದಿನ ಡಿಜಿಟಲ್ ಯುಗ. ಇಲ್ಲಿ ಯಾವುದಾರೂ ಒಂದು ಸಾಂಗ್ ಅಥವಾ ವಿಡಿಯೋ ವೈರಲ್ ಆದ್ರೆ ಸಾಕು, ಪ್ರತಿಯೊಬ್ಬರೂ ಅದೇ ಹಾಡಿಗೆ ರೀಲ್ಸ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇದಕ್ಕೆ ಕರಿಮಣಿ ಮಾಲೀಕ ಹಾಡು ಸೂಕ್ತ ನಿದರ್ಶನ ಅಂತಾನೇ ಹೇಳಬಹುದು. ಹೌದು ಓ ನಲ್ಲ… ನೀ… ನಲ್ಲ ಕರಿಮಣಿ ಮಾಲೀಕ ನೀ ನಲ್ಲ… ಹಾಡು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೆಂಡ್ ಕ್ರಿಯೇಟ್ ಮಾಡಿರುವ ಹಾಡು. ಇನ್ಸ್ಟಾಗ್ರಾಮ್, ಫೇಸ್ ಬುಕ್, ಯುಟ್ಯೂಬ್ ಎಲ್ಲಾ ರೀತಿಯ ಸಾಮಜಿಕ ಮಾಧ್ಯಮ ಫ್ಲಾಟ್ಫಾರ್ಮ್ ಗಳಲ್ಲೂ ಈ ಹಾಡಿನದ್ದೇ ಹವಾ. ಇತ್ತೀಚಿಗಂತೂ ಕರಿಮಣಿ ಮಾಲೀಕ ನೀ ನಲ್ಲ… ಹಾಗೂ ಕರಿಮಣಿ ಮಾಲೀಕ ರಾಹುಲ್ಲಾ ಹಾಡಿನ ರೀಲ್ಸ್ ವಿಡಿಯೋಗಳು ಮತ್ತು ಟ್ರೋಲ್, ಮೀಮ್ಸ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಈ ನಡುವೆ ಕರಿಮಣಿ ಮಾಲೀಕನ ಊರಿನ ಬಗ್ಗೆಯೂ ಟ್ರೋಲ್ ವಿಡಿಯೋಗಳು ಹರಿದಾಡುತ್ತಿದ್ದು, ಅಬ್ಬಬ್ಬಾ ಕೊನೆಗೂ ಸಿಕ್ಕೇ ಬಿಡ್ತಲ್ಲಾ ಕರಿಮಣಿ ಮಾಲೀಕನ ಊರು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಬಾನದಾರಿ ಮಿಮ್ಸ್ (@baanadaari_memes) ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ಕರಿಮಣಿ ಮಾಲೀಕನ ಊರು ಸಿಕ್ಬಿಡ್ತು” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಯಾವುದೋ ಒಂದು ಊರಿನ ರಸ್ತೆಯ ಪಕ್ಕದಲ್ಲಿರುವ ನಾಮಫಲಕದಲ್ಲಿ ಕರಿಮಣೀಲು ಎಂಬ ಹೆಸರನ್ನು ಬರೆದಿರುವುದನ್ನು ಕಾಣಬಹುದು. ʼಕರಿಮಣೇಲುʼ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಎಂಬ ಊರಿಗೆ ಸಮೀಪದಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ.
ಇದನ್ನೂ ಓದಿ: ಇಲ್ಲಿ ಪುರುಷರು ಕಡ್ಡಾಯವಾಗಿ ಎರಡು ಮದುವೆಯಾಗಲೇಬೇಕು! ʼನೋʼ ಅಂದ್ರೆ ಕಠಿಣ ಶಿಕ್ಷೆ
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಂತೂ ಇಂತೂ ಕರಿಮಣಿ ಮಾಲೀಕನ ಊರನ್ನು ಹುಡುಕಿದ್ರಲ್ಲಾʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕರಿಮಣೇಲು ಇದು ನಮ್ಮ ಗ್ರಾಮʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಮ್ ಜನ ಸಾಕ್ಷಿ ಎಲ್ಲಿದ್ರೂ ಬಿಡಲ್ಲ ಹುಡ್ಕಿ ಕೇಸ್ ಕ್ಲೋಸ್ ಮಾಡ್ತಾರೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಅಬ್ಬಬ್ಬಾ ಕೊನೆಗೂ ಸಿಕ್ತಲ್ಲಾ ಕರಿಮಣಿ ಮಾಲೀಕನ ಊರು ಎಂದು ತಮಾಷೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ