Viral Video: ಟಿಪ್​ ಟಿಪ್ ಬರ್ಸಾ ಪಾನೀ; ಮಳೆಯಲ್ಲೇ ಬೆಲ್ಲಿ ಡ್ಯಾನ್ಸ್ ಮಾಡಿದ ಬೆಡಗಿ

Belly Dance : ಮಳೆಗಾಲದ ಹಾಡುಗಳ ಬಗ್ಗೆ ಯೋಚಿಸಿದಾಗ ರವೀನಾ ಟಂಡನ್​ ಮತ್ತು ಅಕ್ಷಯ್ ಕುಮಾರ್ ಅಭಿನಯಿಸಿದ ಟಿಪ್ ಟಿಪ್ ಬರ್ಸಾ ಪಾನೀ ಕೂಡ ನೆನಪಾಗುತ್ತದೆ. ಇಲ್ಲೊಬ್ಬ ಯುವತಿ ಈ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದು ಅತ್ಯಂತ ಆಕರ್ಷಕವಾಗಿದೆ. ನೆಟ್ಟಿಗರು ಈಕೆಯ ನೃತ್ಯಕೌಶಲಕ್ಕೆ ಫಿದಾ ಆಗುತ್ತಿದ್ದಾರೆ. ನೋಡಿ ನೀವೂ.

Viral Video: ಟಿಪ್​ ಟಿಪ್ ಬರ್ಸಾ ಪಾನೀ; ಮಳೆಯಲ್ಲೇ ಬೆಲ್ಲಿ ಡ್ಯಾನ್ಸ್ ಮಾಡಿದ ಬೆಡಗಿ
ಬೆಲ್ಲಿ ಡ್ಯಾನ್ಸ್​ ಮಾಡುತ್ತಿರುವ ಝಾಯೆಶ್ಶಾ

Updated on: Aug 11, 2023 | 5:47 PM

Mohra : 1994ರಲ್ಲಿ ಬಿಡುಗಡೆಯಾದ ‘ಮೊಹ್ರಾ’ ಸಿನೆಮಾದ ‘ಟಿಪ್​ ಟಿಪ್​ ಬರ್ಸಾ ಪಾನೀ’ ಹಾಡಿಗೆ ರವೀನಾ ಟಂಡನ್​ ಮತ್ತು ಅಕ್ಷಯ್​ ಕುಮಾರ್ (Akshay Kumar) ಅಭಿನಯಿಸಿದ್ದು ಇಷ್ಟು ವರ್ಷಗಳ ನಂತರವೂ ಕಣ್ಣಮುಂದೆಯೇ ಇದೆ. ಇದೀಗ ಇದೇ ಹಾಡಿಗೆ ಯುವತಿಯೊಬ್ಬಾಕೆ ಸುರಿಯುತ್ತಿರುವ ಮಳೆಯಲ್ಲಿ ಬೆಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ನೆಟ್ಟಿಗರಿಗೆ ಈಕೆಯ ನೃತ್ಯಭಂಗಿ, ಕೌಶಲ ಬೆರಗುಗೊಳಿಸುತ್ತಿದೆ. ಝಾಯೆಶ್ಶಾ ಎಂಬ ಕಲಾವಿದೆ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಹಾಡನ್ನು ಅಲ್ಕಾ ಯಾಜ್ಞಿಕ್ ಮತ್ತು ಉದಿತ್ ನಾರಾಯಣ ಹಾಡಿದ್ದಾರೆ.

ಇದನ್ನೂ ಓದಿ : Viral: ಜಪಾನ್; ವಿಶ್ವದ ಅತ್ಯಂತ ದುಬಾರಿ ಖಾದ್ಯ ಸುಶಿಯ ಬೆಲೆ ರೂ 2 ಲಕ್ಷ; ಏನೇನೆಲ್ಲಾ ಇದೆ ಇದರಲ್ಲಿ?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

6 ದಿನಗಳ ಹಿಂದೆ ಮಾಡಲಾದ ಈ ಪೋಸ್ಟ್​ ಅನ್ನು ಈತನಕ 1 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಅದ್ಭುತವಾದ ನೃತ್ಯ, ಬಳಕುಗಳು ಎಷ್ಟು ಸುಂದರ ಎಂದಿದ್ದಾರೆ ಒಬ್ಬರು. ನೀವು ನಿಮ್ಮ ನೃತ್ಯವನ್ನು ಹೀಗೆಯೇ ಅಭ್ಯಾಸ ಮಾಡಿ. ಖಂಡಿತ ನಿಮಗೆ ಯಶಸ್ಸು ಸಿಗುತ್ತದೆ ಎಂದಿದ್ದಾರೆ ಇನ್ನೊಬ್ಬರು.

ನಿಜಕ್ಕೂ ನೀವು ಚೆನ್ನಾಗಿ ನರ್ತಿಸುತ್ತೀರಿ, ದಯವಿಟ್ಟು ಆಗಾ ಬಾಯೀ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿ ಎಂದಿದ್ದಾರೆ ಮತ್ತೊಬ್ಬರು. ಮಳೆಯಲ್ಲಿ ನೀವು ನೃತ್ಯದಿಂದ ಬೆಂಕಿ ಹುಟ್ಟಿಸಿದ್ದೀರಿ ಎಂದು ಮಗದೊಬ್ಬರು ಹೇಳಿದ್ದಾರೆ. ಅನೇಕರು, ಅದ್ಭುತವಾಗಿ ನರ್ತಿಸುತ್ತೀರಿ, ನಿಮಗೆ ಒಳ್ಳೆಯ ಅವಕಾಶಗಲು ಸಿಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ : Viral: ವಿಶ್ವ ದಾಖಲೆ; ಈ ಚಹಾ ಕಿತ್ಲಿಯ ಬೆಲೆ ರೂ. 24 ಕೋಟಿ; ಇಲ್ಲಿದೆ ಇದರ ವೈಶಿಷ್ಟ್ಯ

ಇನ್​ಸ್ಟಾಗ್ರಾಮಿಗೆ ಸೀಮಿತವಾಗಬೇಡಿ, ಇನ್ನೂ ಉತ್ತಮ ಕ್ಯಾಮೆರಾ ಮತ್ತು ಬೆಳಕಿನಲ್ಲಿ ವಿಡಿಯೋ ಮಾಡಿ, ಒಳ್ಳೆಯದಾಗಲಿ ಎಂದಿದ್ದಾರೆ ಇನ್ನೂ ಒಬ್ಬರು. ಉಳಿದಂತೆ ಕೆಲ ಕೀಳುಮಟ್ಟದ ಅಭಿರುಚಿಯುಳ್ಳ ನೆಟ್ಟಿಗರು ಅಸಹ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಅವರಿಗೆ ಬೆಲ್ಲಿ ಡ್ಯಾನ್ಸ್​​ನ್ನು ಮಾಡಲು ಆಹ್ವಾನಿಸುವುದು ಉತ್ತಮ ಎನ್ನಿಸುತ್ತದೆ!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 5:47 pm, Fri, 11 August 23