ನಮ್ಮ ದೇಹದ ಪ್ರತಿಯೊಂದು ಅಂಗವು ಕೂಡ ಮುಖ್ಯವಾಗಿದ್ದು ನಾಲಿಗೆಯು ಬಹಳ ಮುಖ್ಯ ಎಂದೇ ಹೇಳಬಹುದು. ಒಂದು ವೇಳೆ ನಿಮಗೆ ನಾಲಿಗೆ ಇಲ್ಲ ಎಂದುಕೊಳ್ಳಿ. ಮಾತನಾಡಲು, ಆಹಾರವನ್ನು ಹಿಂದೆ ಮುಂದೆ ತಳ್ಳಲು ಹೀಗೆ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ದೇಹದಲ್ಲಿನ ಮೂಳೆ ಇಲ್ಲದ ಏಕೈಕ ಅಂಗಾಂಗವಿದಾಗಿದ್ದು ಕೆಲವೊಮ್ಮೆ ಎಲುಬಿಲ್ಲದ ನಾಲಗೆ ಏನೇನೋ ಎಡವಟ್ಟುಗಳನ್ನು ಮಾಡಿಬಿಡುತ್ತದೆ. ಆದರೆ ಇಲ್ಲೊಬ್ಬಳು ತನ್ನ ಅಗಲವಾದ ನಾಲಿಗೆಯಿಂದಲೇ ವಿಶ್ವದಾಖಲೆ ಬರೆದಿದ್ದಾಳೆ.
ಅಗತ್ಯ ಅಂಗವಾಗಿರುವ ಈ ನಾಲಿಗೆಯೂ ಸರಿಸುಮಾರು 2 ರಿಂದ 2.5 ಇಂಚಿನಷ್ಟು ಅಗಲವಿರುತ್ತದೆ. ಆದರೆ ಈ ಮೂಳೆಯಿಲ್ಲದ ಅಂಗವು ಎರಡೂವರೆ ಇಂಚಿಗಿಂತಲೂ ಅಗಲವಾಗಿದ್ದರೆ ಹೇಗಿರಬಹುದು ಎಂದು ಒಮ್ಮೆಯಾದರೂ ಊಹಿಸಿದ್ದೀರಾ. ಒಂದು ಕ್ಷಣ ಈ ಬಗ್ಗೆ ಊಹೆ ಮಾಡಲು ಸಾಧ್ಯವಿಲ್ಲ. ಆದರೆ ಈ ಮಹಿಳೆಯ ನಾಲಿಗೆಯ ಸಾಮಾನ್ಯರ ನಾಲಿಗೆಗಿಂತ ಅಗಲವಾಗಿದೆ.
ಬ್ರಿಟ್ನಿ ಲ್ಯಾಕೋಯ್ ಎಂಬ ಈ ಮಹಿಳೆ ತನ್ನ ನಾಲಗೆಯ ಅಗಲದ ಅಳತೆಯ ನಾಲಿಗೆಯಿಂದಲೇ ವಿಶ್ವ ದಾಖಲೆ ಬರೆದಿದ್ದಾಳೆ. ಈ ಮಹಿಳೆಯ ನಾಲಿಗೆ ಬರೋಬ್ಬರಿ 3.11 ಇಂಚುಗಳಷ್ಟು ಅಗಲವಿದೆ. ಈಕೆಯ ನಾಲಿಗೆ ಕಂಡು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಿಬ್ಬಂದಿಗಳು ಬೆರಗಾಗಿದ್ದು, ವಿಶ್ವದಲ್ಲೇ ಅತಿ ಅಗಲವಾದ ನಾಲಿಗೆ ಹೊಂದಿರುವ ಮಹಿಳೆ ಎನ್ನುವ ಬಿರುದನ್ನು ಈಕೆಗೆ ನೀಡಿದ್ದಾರೆ.
Brittany Lacayo from the USA has been verified as having the world’s widest tongue at 7.90 cm (3.11 in) 😝 pic.twitter.com/32UqA7lj4U
— Guinness World Records (@GWR) August 15, 2024
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಅಗಲವಾದ ನಾಲಿಗೆಯನ್ನು ಹೊಂದಿರುವ ಮಹಿಳೆಯನ್ನು ಕಾಣಬಹುದು. ಪ್ರಾರಂಭದಲ್ಲಿ ತನ್ನ ನಾಲಿಗೆಯನ್ನು ಹೊರ ಹಾಕಿ ತೋರಿಸುತ್ತಿದ್ದಾಳೆ. ಆ ಬಳಿಕ ತನ್ನ ಬಗ್ಗೆ ಪರಿಚಯ ಮಾಡಿಕೊಂಡಿದ್ದು ಈ ವೇಳೆ ತನ್ನ ಹೆಸರು ಹಾಗೂ ನಾಲಗೆ ಎಷ್ಟು ಅಗಲವಿದೆ ಎಂದು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಕ್ಕಳ ಮೊಬೈಲ್ ಒಡೆದು ಹಾಕಿದ ಪೋಷಕರ ಸಂಘ
ಬ್ರಿಟ್ನಿ ಲ್ಯಾಕೋಯ್ ಹೇಳಿರುವಂತೆ ಆಕೆಯ ನಾಲಿಗೆಯು 7.90 ಸೆಂಟಿಮೀಟರ್ ಅಗಲವಿದೆಯಂತೆ. ಅಂದರೆ ಸರಿಸುಮಾರು 3.11 ಇಂಚುಗಳಷ್ಟಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ. ನೆತ್ತಿಗರೊಬ್ಬರು, ಆಕೆಯ ಈ ಗಿನ್ನಿಸ್ ರೆಕಾರ್ಡ್ ಹೊಗಳಿದರೆ, ಮತ್ತೊಬ್ಬರು, ‘ಇದೊಂದು ಸಿಲ್ಲಿ ರೆಕಾರ್ಡ್’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ