ರೈಲಿನ ಕಿಟಕಿ ಬದಿ ಕುಳಿತಿದ್ದ ಯುವಕ ಚಳಿಯಿಂದ ಸಾವು; 300 ಕಿ.ಮಿ ಪ್ರಯಾಣಿಸುವವರೆಗೂ ಯಾರಿಗೂ ಗೊತ್ತೇಯಿಲ್ಲ

|

Updated on: Dec 20, 2023 | 11:09 AM

ರೈಲಿನ ಕಿಟಕಿಯ ಬಳಿಯ ಸೀಟಿನಲ್ಲಿ ಕುಳಿತಿದ್ದ ಯುವಕ ಚಳಿಯಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರೈಲು ಹತ್ತಿದಾಗಿನಿಂದ ಸಿಂಗಲ್​​ ಸೀಟಿನಲ್ಲಿ ಕಿವಿಗೆ ಇಯರ್​​​ ಫೋನ್​​ ಹಾಕಿ ಕುಳಿತಿದ್ದರಿಂದ ಆತ ಮಲಗಿರುವುದಾಗಿ ಇತರ ಪ್ರಯಾಣಿಕರು ತಿಳಿದುಕೊಂಡಿದ್ದರು. ಆದರೆ ಈತ ಸಾವನ್ನಪ್ಪಿರುವ ವಿಷಯ 300 ಕಿಲೋಮೀಟರ್ ದೂರ ಕ್ರಮಿಸಿದ ನಂತರ ಬೆಳಕಿಗೆ ಬಂದಿದೆ.

ರೈಲಿನ ಕಿಟಕಿ ಬದಿ ಕುಳಿತಿದ್ದ ಯುವಕ ಚಳಿಯಿಂದ ಸಾವು; 300 ಕಿ.ಮಿ ಪ್ರಯಾಣಿಸುವವರೆಗೂ ಯಾರಿಗೂ ಗೊತ್ತೇಯಿಲ್ಲ
ಸಾಂದರ್ಭಿಕ ಚಿತ್ರ
Image Credit source: Pinterest
Follow us on

ಮಧ್ಯಪ್ರದೇಶ: ಬೈತುಲ್ ಮೂಲದ ಯುವಕ ಕಾಮಯಾನಿ ಎಕ್ಸ್‌ಪ್ರೆಸ್‌ ರೈಲಿನ ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಳಿಯಿಂದ ಸ್ಥಳದಲ್ಲೇ ಸಾವನ್ನಪ್ಪಿರುವುದು ತಿಳಿದುಬಂದಿದೆ. ಆದರೆ ಆಘಾತಕಾರಿ ವಿಷಯವೆಂದರೆ ರೈಲಿನಲ್ಲಿದ್ದ ಇತರ ಪ್ರಯಾಣಿಕರಿಗೆ ಈ ಬಗ್ಗೆ ತಿಳಿದಿಲ್ಲ. ರೈಲು ಹತ್ತಿದಾಗಿನಿಂದ ಸಿಂಗಲ್​​ ಸೀಟಿನಲ್ಲಿ ಕಿವಿಗೆ ಇಯರ್​​​ ಫೋನ್​​ ಹಾಕಿ ಕುಳಿತಿದ್ದರಿಂದ ಆತ ಮಲಗಿರುವುದಾಗಿ ಇತರ ಪ್ರಯಾಣಿಕರು ತಿಳಿದುಕೊಂಡಿದ್ದಾರೆ.

300 ಕಿಲೋಮೀಟರ್ ಪ್ರಯಾಣದ ನಂತರ ಭಯಾನಕ ಸತ್ಯ ಬೆಳಕಿಗೆ:

ರೈಲು ಸುಮಾರು 303 ಕಿಲೋಮೀಟರ್ ದೂರವನ್ನು ಕ್ರಮಿಸಿದ ನಂತರ ಯುವಕ ಇನ್ನೂ ಕೂಡ ದೇಹದಲ್ಲಿ ಯಾವುದೇ ಚಲನೆಯಿಂದಲೇ ಮಲಗಿರುವುದರಿಂದ ಅದೇ ಕಂಪಾರ್ಟ್ ಮೆಂಟ್ ನಲ್ಲಿರುವ ಪ್ರಯಾಣಿಕರಿಗೆ ಅನುಮಾನ ಹುಟ್ಟಿಕೊಂಡಿದೆ. ಅನುಮಾನಗೊಂಡು ಪರಿಶೀಲಿಸಿದಾಗ ಆತ ಮೃತಪಟ್ಟಿರುವುದು ಜನರ ಗಮನಕ್ಕೆ ಬಂದಿದೆ. ಕೂಡಲೇ ರೈಲ್ವೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿ ನಂತರ ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ದಾಮೋಹ್ ನಿಲ್ದಾಣದಲ್ಲಿ ಯುವಕನ ಶವವನ್ನು ರೈಲಿನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವೇಳೆ ಕೆಲ ಘಂಟೆಗಳ ಮೊದಲೇ ಚಳಿಯಿಂದಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: 3000 ವರ್ಷಗಳಷ್ಟು ಹಳೆಯದಾದ ವಿಗ್ರಹದಲ್ಲಿ QR ಕೋಡ್ ಪತ್ತೆ; ಫೋಟೋ ವೈರಲ್​​

ಇದಾದ ನಂತರ ಯುವಕನ ಬಳಿ ಇದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಾವಿನ ಬಗ್ಗೆ ಆತನ ಮನೆಯವರಿಗೆ ಮಾಹಿತಿ ನೀಡಿ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಮೃತ ಯುವಕ ಎಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅದೇ ಕೆಲಸದ ನಿಮಿತ್ತ ಚನ್ನೇರಿಗೆ ಹೋಗಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವಾಪಸು ಬರುವಾಗ ರೈಲಿನಲ್ಲಿದ್ದಾಗ ಮನೆಯವರ ಜೊತೆ ಫೋನ್ ನಲ್ಲಿ ಮಾತನಾಡಿರುವುದಾಗಿ ತಿಳಿದುಬಂದಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:28 pm, Tue, 19 December 23