Nandi Hills: ಇಂದಿನಿಂದ ಬೆಂಗಳೂರಿನಿಂದ ನಂದಿ ಹಿಲ್ಸ್​ಗೆ ಇಂದಿನಿಂದ ಎಲೆಕ್ಟ್ರಿಕ್ ರೈಲು ಸಂಚಾರ

ಬೆಂಗಳೂರು ನಿವಾಸಿಗಳಿಗೆ ಸಂತಸದ ಸುದ್ದಿ. ಡಿಸೆಂಬರ್ 11, ಸೋಮವಾರದಿಂದ ಎಲೆಕ್ಟ್ರಿಕ್ ರೈಲಿನ ಮೂಲಕ ನಗರದಿಂದ 60 ಕಿಮೀ ದೂರದಲ್ಲಿರುವ ಜನಪ್ರಿಯ ವಾರಾಂತ್ಯದ ತಾಣವಾದ ನಂದಿ ಹಿಲ್ಸ್‌ಗೆ ಪ್ರಯಾಣಿಸಬಹುದು. ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಮೆಮು) ರೈಲುಗಳನ್ನು ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ .

Nandi Hills: ಇಂದಿನಿಂದ ಬೆಂಗಳೂರಿನಿಂದ ನಂದಿ ಹಿಲ್ಸ್​ಗೆ ಇಂದಿನಿಂದ ಎಲೆಕ್ಟ್ರಿಕ್ ರೈಲು ಸಂಚಾರ
ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಇಂದಿನಿಂದ ರೈಲು ಸಂಚಾರ
Follow us
TV9 Web
| Updated By: Rakesh Nayak Manchi

Updated on:Dec 11, 2023 | 10:53 AM

ಬೆಂಗಳೂರು, ಡಿ.11: ನಗರದ (Bengaluru) ನಿವಾಸಿಗಳಿಗೆ ಸಂತಸದ ಸುದ್ದಿ ಇದು. ಅವರು ಈಗ ಡಿಸೆಂಬರ್ 11, ಸೋಮವಾರದಿಂದ ಎಲೆಕ್ಟ್ರಿಕ್ ರೈಲಿನ ಮೂಲಕ ನಗರದಿಂದ 60 ಕಿಮೀ ದೂರದಲ್ಲಿರುವ ಜನಪ್ರಿಯ ವಾರಾಂತ್ಯದ ತಾಣವಾದ ನಂದಿ ಹಿಲ್ಸ್‌ಗೆ (Nandi Hills) ಪ್ರಯಾಣಿಸಬಹುದು. ಮನಿ ಕಂಟ್ರೋಲ್ ಪ್ರಕಟಿಸಿದ ವರದಿಯ ಪ್ರಕಾರ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (MEMU) ರೈಲುಗಳನ್ನು ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ರೈಲು ಸಂಖ್ಯೆ 06593/06594 ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ, ರೈಲು ಸಂಖ್ಯೆ 06531/06532 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್ ಮತ್ತು ರೈಲು ಸಂಖ್ಯೆ 06535/06538 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರದ ನಡುವೆ ಸಂಚರಿಸಲಿವೆ.

ಪ್ರಸ್ತುತ, 16549/16550 ಸಂಖ್ಯೆಯ ರೈಲು ಕೆಎಸ್‌ಆರ್ ಬೆಂಗಳೂರು – ಕೋಲಾರ- ಕೆಎಸ್‌ಆರ್ ಬೆಂಗಳೂರು ಡೆಮು ಮತ್ತು ರೈಲು ಸಂಖ್ಯೆ 06387/06388 ಕೆಎಸ್‌ಆರ್ ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ ಡೀಸೆಲ್ ಮಲ್ಟಿಪಲ್ ಯುನಿಟ್ (ಡೆಮು) ನಂದಿ ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತವೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟದ ನಂದಿ ವಿಗ್ರಹಕ್ಕೆ ಮಹಾಭಿಷೇಕ, ಫೋಟೋಸ್ ಇಲ್ಲಿದೆ

ಮನಿ ಕಂಟ್ರೋಲ್‌ ಜೊತೆ ಮಾತನಾಡಿದ ನಂದಿ ಬೆಟ್ಟದಲ್ಲಿ ನೆಲೆಸಿರುವ ಇತಿಹಾಸ ಪ್ರೇಮಿ ಸಿದ್ಧಾರ್ಥ್ ರಾಜಾ, ನಂದಿ ಬೆಟ್ಟದ ತಳದಲ್ಲಿರುವ ಭೋಗನಂದೀಶ್ವರ ದೇವಸ್ಥಾನವು ನಂದಿ ನಿಲ್ದಾಣದಿಂದ ಸರಿಸುಮಾರು 1.4 ಕಿಮೀ ದೂರದಲ್ಲಿದೆ. ನಂದಿ ಬೆಟ್ಟದ ತುದಿಯನ್ನು ತಲುಪಲು ನೀವು ಹೆಚ್ಚುವರಿ 15-18 ಕಿಮೀ ಪ್ರಯಾಣಿಸಬೇಕಾಗುತ್ತದೆ. ನೈರುತ್ಯ ರೈಲ್ವೆಯು ಪ್ರಯಾಣದ ಸಮಯವನ್ನು ಕಡಿಮೆ ಮಾಡುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಬೆಟ್ಟಹಲಸೂರು ಈ ರೈಲುಗಳು ನಿಲ್ಲಬೇಕಾದ ಮಧ್ಯಂತರ ನಿಲ್ದಾಣಗಳಲ್ಲಿ ಒಂದಾಗಿದೆ. ಆದಾಗ್ಯೂ, SWR ಈ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡುತ್ತಿಲ್ಲ. ಏಕೆಂದರೆ ಯಾವುದೇ ಏಜೆಂಟ್‌ಗಳು ನಿಲುಗಡೆ ನಿಲ್ದಾಣಗಳಲ್ಲಿ ಸಿಬ್ಬಂದಿಗೆ ತಿಂಗಳಿಗೆ 1,500 ರೂ. ಕನಿಷ್ಠ ವೇತನದಲ್ಲಿ ಕೆಲಸ ಮಾಡಲು ಸಿದ್ಧರಿಲ್ಲ ಎಂದು ರೈಲು ಕಾರ್ಯಕರ್ತ ರಾಜ್‌ಕುಮಾರ್ ದುಗರ್ ಹೇಳಿದ್ದಾಗಿ ವರದಿ ಮಾಡಿದೆ.

ಈ ಹಿಂದೆ, ಬೆಂಗಳೂರು, ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರವನ್ನು ಸಂಪರ್ಕಿಸುವ 108 ವರ್ಷಗಳ ಹಳೆಯ ಪಾರಂಪರಿಕ ರೈಲು ಮಾರ್ಗದಲ್ಲಿ SWR ಒಂದು ದಿನದ ಪ್ರವಾಸ ಪ್ಯಾಕೇಜ್ ಅನ್ನು ಏರ್ಪಡಿಸಿತ್ತು. ಯೋಜನೆಗಳು ದೇವನಹಳ್ಳಿ ಕೋಟೆಗೆ ಭೇಟಿ ನೀಡುವುದು, ಚಿಕ್ಕಬಳ್ಳಾಪುರದ ಆದಿಯೋಗಿ ಮತ್ತು ನಂದಿ ಬೆಟ್ಟಗಳಲ್ಲಿ ಸೂರ್ಯೋದಯ ವೀಕ್ಷಣೆ ಸೇರಿದಂತೆ ಇತರೆ ಐತಿಹಾಸಿಕ ಸ್ಥಳಗಳಿಗೆ ಈ ಪ್ಯಾಕೇಜ್ ನೀಡಲಾಗಿತ್ತು ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

1915 ರಲ್ಲಿ ಮೈಸೂರಿನ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಅವರ ಅವಧಿಯಲ್ಲಿ ಖಾಸಗಿ ಉದ್ಯಮದಿಂದ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಸ್ಥಾಪಿಸಲಾದ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರದವರೆಗಿನ ರೈಲು ಮಾರ್ಗವು ರಾಷ್ಟ್ರದಲ್ಲಿ ಮೊದಲನೆಯದ್ದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 am, Mon, 11 December 23