Viral: ಇದು ಲೇಸ್ ಚಿಪ್ಸ್ ಆಮ್ಲೆಟ್ ಅಂತೆ, ನೀವೇನಾದ್ರೂ ಟ್ರೈ ಮಾಡ್ತೀರಾ 

ಇತ್ತೀಚಿಗಿನ ದಿನಗಳಲ್ಲಿ ವಿಯರ್ಡ್ ಫುಡ್ ಕಾಂಬಿನೇಷನ್ ಗಳ ಕುರಿತಾದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬನು  ಲೇಸ್ ಚಿಪ್ಸ್ ಆಮ್ಲೆಟ್ ತಯಾರಿಸಿದ್ದಾನೆ. ಲೇಸ್ ಪ್ಯಾಕೆಟ್ ಗೆ ಮೊಟ್ಟೆ ಹಾಕಿ ಆಮ್ಲೆಟ್ ಮಾಡಿ ಸವಿದಿದ್ದು, ಈ ಅಸಾಂಪ್ರದಾಯಿಕ ಖಾದ್ಯದ ತಯಾರಿಕೆಯ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Viral: ಇದು ಲೇಸ್ ಚಿಪ್ಸ್ ಆಮ್ಲೆಟ್ ಅಂತೆ, ನೀವೇನಾದ್ರೂ ಟ್ರೈ ಮಾಡ್ತೀರಾ 
ವೈರಲ್​ ವಿಡಿಯೋ
Edited By:

Updated on: Feb 24, 2025 | 9:57 AM

ಇತ್ತೀಚಿನ ದಿನಗಳಲ್ಲಿ ವಿಯರ್ಡ್ ಫುಡ್ ಕಾಂಬಿನೇಷನ್ ಟ್ರೆಂಡ್ ಆಗುತ್ತಿದೆ  ಒರಿಯೋ ಬಜ್ಜಿ, ಇಡ್ಲಿ ಸಾಂಬಾರ್ ಐಸ್ ಕ್ರೀಂ ರೋಲ್, ಗುಲಾಬ್ ಜಾಮೂನ್ ದೋಸೆ, ಬಿಯರ್ ಬಜ್ಜಿ ಹೀಗೆ ತರಹೇವಾರಿ ವಿಯರ್ಡ್ ಫುಡ್ ಕಾಂಬಿನೇಷನ್ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತದೆ. ಕೆಲವರು ಈ ವಿಚಿತ್ರ ಆಹಾರಗಳನ್ನು ತಿನ್ನಲು ಇಷ್ಟಪಟ್ಟರೆ, ಇನ್ನು ಕೆಲವರಿಗೆ ಇದನ್ನು ನೋಡಿಯೇ ವಾಕರಿಕೆ ಬರುತ್ತದೆ. ಇದೀಗ  ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಲೇಸ್ ಚಿಪ್ಸ್ ಆಮ್ಲೆಟ್ ತಯಾರಿಸಿದ್ದಾನೆ.
ಈ ವಿಡಿಯೋವನ್ನು pm star 77 ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಲೇಸ್ ಚಿಪ್ಸ್ ಆಮ್ಲೆಟ್ ರೆಸಿಪಿಯನ್ನು ನೋಡಬಹುದು. ಯುವಕನೊಬ್ಬ ಮೊದಲಿಗೆ ಒಂದು ಲೇಸ್ ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು, ಅದರೊಳಗಿನ ಚಿಪ್ಸ್ ಅನ್ನು ಚೆನ್ನಾಗಿ ಪುಡಿ ಮಾಡುವುದರೊಂದಿಗೆ  ವಿಡಿಯೋ ಪ್ರಾರಂಭವಾಗುತ್ತದೆ. ನಂತರದಲ್ಲಿ ಅದೇ ಲೇಸ್ ಪ್ಯಾಕೆಟ್ ಗೆ ಎರಡು ಮೊಟ್ಟೆಯನ್ನು ಒಡೆದು ಹಾಕುತ್ತಾನೆ. ಆ ಬಳಿಕ ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಂಡು ಅದಕ್ಕೆ ಸೇರಿಸಿಕೊಳ್ಳುತ್ತಾನೆ. ಕೊನೆಗೆ ರುಚಿಗೆ ತಕ್ಕಷ್ಟು ಉಪ್ಪು, ಅರಶಿನ ಹಾಗೂ ಖಾರದ ಪುಡಿಯನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳುತ್ತಾನೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ  ಮಿಶ್ರಣವನ್ನು ಪ್ಯಾನ್‌ನಲ್ಲಿ ಬೇಯಿಸುವ ಬದಲು, ಬೆಂಕಿಪೊಟ್ಟಣವನ್ನು ಬಳಸಿ ಪ್ಯಾಕೆಟ್ ಅನ್ನು ಮುಚ್ಚುತ್ತಾನೆ. ಒಂದು ಪ್ಯಾನ್ ನಲ್ಲಿ ನೀರು ಇಟ್ಟು, ಬಿಸಿಯಾಗುತ್ತಿದ್ದಂತೆ  ಈ ಪ್ಯಾಕೆಟನ್ನು ನೀರಿಗೆ ಹಾಕಿ ಬೇಯಿಸಿಕೊಳ್ಳುತ್ತಾನೆ. ಸ್ವಲ್ಪ ಸಮಯದ ಬಳಿಕ ಪ್ಯಾಕೆಟನ್ನು ತೆರೆದು, ಬೆಂದ ಆಮ್ಲೆಟ್ ಕತ್ತರಿಸಿ ತಿನ್ನುತ್ತಾನೆ.
ಇದನ್ನೂ ಓದಿ: ಮೀನಲ್ಲಾ ಅಣ್ಣಾ ಅದು ಮೊಸಳೆ, ಬದುಕಿದೆಯಾ ಬಡ ಜೀವವೇ!
ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ ಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರರು, ‘ ಇದು ಆರೋಗ್ಯಕ್ಕೆ ಹಾನಿಕಾರಕ ಎಂದಿದ್ದಾರೆ. ಇನ್ನೊಬ್ಬರು ಇದು ಕ್ಯಾನ್ಸರ್ ಟ್ರಿಕ್ಸ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಈ ಪ್ಲಾಸ್ಟಿಕ್ ಕವರ್ ಅಲ್ಲಿ ಅಡುಗೆ ಮಾಡಿ ತಿಂದ್ರೆ, ಕ್ಯಾನ್ಸರ್ ಬರುತ್ತೆ’ ಎಂದಿದ್ದಾರೆ. ಇನ್ನು ಕೆಲವರು ‘ಈ ರೆಸಿಪಿ ಚೆನ್ನಾಗಿದೆ, ಆದರೆ ಪ್ಲಾಸ್ಟಿಕ್ ಬಳಸಬೇಡಿ’ ಎಂದು ಹೇಳಿದ್ದಾರೆ.
ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ