AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಸ್ತೆ ಬದಿಯಲ್ಲಿ ಹಕ್ಕಿಗಳಿಗೆ ಆಹಾರ ಹಾಕಿ ಹಸಿವು ನೀಗಿಸಿದ ಯುವಕ

ನಿಸ್ವಾರ್ಥ ಭಾವದಿಂದ ಮೂಕ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿ ಅವುಗಳ ಹಸಿವನ್ನು ನೀಗಿಸುವ ವ್ಯಕ್ತಿಗಳ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ವಿಡಿಯೋ ವೈರಲ್ ಆಗಿದೆ. ಇಲ್ಲೊಬ್ಬ ಯುವಕನು ರಸ್ತೆ ಬದಿಯಲ್ಲಿ ದಿನನಿತ್ಯ ಹಕ್ಕಿಗಳಿಗೆ ಆಹಾರ ಹಾಕಿ ಪಕ್ಷಿಗಳ ಹಸಿವನ್ನು ನೀಗಿಸುತ್ತಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ರಸ್ತೆ ಬದಿಯಲ್ಲಿ ಹಕ್ಕಿಗಳಿಗೆ ಆಹಾರ ಹಾಕಿ ಹಸಿವು ನೀಗಿಸಿದ ಯುವಕ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Sep 02, 2026 | 11:05 AM

Share

ನಮ್ಮಲ್ಲಿ ಕೆಲವರು ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳ ಜತೆಗೆ ಒಂದೊಳ್ಳೆ ಸ್ನೇಹ ಬೆಳೆಸಿಕೊಂಡಿರುತ್ತಾರೆ. ದಾರಿಯಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಆಹಾರ ಹಾಕುವುದು, ಹೀಗೆ ಒಳ್ಳೆಯ ಕೆಲಸಗಳ ಮೂಲಕ ಗಮನ ಸೆಳೆಯುತ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಯುವಕನೊಬ್ಬ (young man) ಪ್ರತಿನಿತ್ಯ ರಸ್ತೆ ಬದಿಯಲ್ಲಿ ಪಕ್ಷಿಗಳಿಗೆ ಆಹಾರ ಹಾಕಿ ಹಸಿವು ನೀಗಿಸುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಯುವಕನ ಒಳ್ಳೆತನವನ್ನು ಮೆಚ್ಚಿಕೊಂಡಿದ್ದಾರೆ.

ಫ್ಲಿಕ್ಸ್. ಇಂಡಿಯನ್ (flix indian) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಯುವಕನ ಹೃದಯ ಶ್ರೀಮಂತಿಕೆ ಕಾಣಬಹುದು. ಈ ವಿಡಿಯೋದಲ್ಲಿ ಯುವಕನೊಬ್ಬ ಕೈಯಲ್ಲಿದ್ದ ಆಹಾರವನ್ನು ರಸ್ತೆ ಬದಿಯಲ್ಲಿ ಹಾಕುವುದನ್ನು ಕಾಣಬಹುದು. ಯುವಕನನ್ನೇ ಹಿಂಬಾಲಿಸಿಕೊಂಡು ಬಂದ ಪಕ್ಷಿಗಳ ಗುಂಪೊಂದು ಆಹಾರ ತಿಂದು ಹಸಿವು ನೀಗಿಸಿಕೊಂಡಿವೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಶ್ವಾನಕ್ಕೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ನಲವತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಶುದ್ಧ ಕಾಳಜಿ ಅಂದ್ರೆ ಇದ್ರೆ ಇರ್ಬೇಕು ಎಂದಿದ್ದಾರೆ. ಮತ್ತೊಬ್ಬರು, ಒಳ್ಳೆಯ ಕೆಲಸ, ದೇವರು ಒಳ್ಳೆಯದನ್ನೇ ಮಾಡಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಸ್ವಾರ್ಥ ಸೇವೆಯನ್ನು ದೇವರು ಮೆಚ್ಚುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್