Video: ವಿವಾಹೇತರ ಸಂಬಂಧ ಹೊಂದುವ ಕಾರ್ಪೊರೇಟ್ ಉದ್ಯೋಗಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಯುವತಿ
ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧ ಹೊಂಡುವವರ ಪ್ರಕರಣಗಳು ಹೆಚ್ಚಾಗುತ್ತಿವೆ. ಇದುವೇ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಕಾರಣವಾಗುತ್ತಿದೆ. ಆದರೆ ಯುವತಿಯೊಬ್ಬಳು ಈ ಕಾರ್ಪೊರೇಟ್ ಜಗತ್ತಿನಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚಾಗುತ್ತಿದೆ ಎಂದಿದ್ದಾಳೆ. ಯುವತಿಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಇಂದಿನ ಯುವಪೀಳಿಗೆಯೂ ದಾಂಪತ್ಯ ಜೀವನಕ್ಕೆ ನಿಷ್ಠಾವಂತರಾಗಿರುವುದು ತುಂಬಾನೇ ಕಡಿಮೆನೇ. ಕೆಲಸ ಮಾಡುವ ಸ್ಥಳಗಳಲ್ಲಿ ಸಂಬಂಧ ಹೊಂದಿ ಪತಿ ಅಥವಾ ಪತ್ನಿಗೆ ಮೋಸ ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈ ಕಾರ್ಪೋರೇಟ್ ಜಗತ್ತಿನಲ್ಲಿ (corporate world) ವಿವಾಹೇತರ ಸಂಬಂಧಗಳು ಕಾಮನ್ ಅಂತೆ. ವಿವಾಹೇತರ ಸಂಬಂಧದ ಬಗ್ಗೆ ಯುವತಿಯೊಬ್ಬಳು (young woman) ಖಾರವಾಗಿ ಮಾತನಾಡಿದ್ದಾಳೆ. ಈ ವೇಳೆ ಆಕೆ ಅಚ್ಚರಿಕಾರಿ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾಳೆ. ಈ ಕುರಿತಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ನಾನಾ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
venom ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಶೇ. 50 ರಷ್ಟು ಕಾರ್ಪೊರೇಟ್ ಉದ್ಯೋಗಿಗಳು ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಈ ಯುವತಿ ಹೇಳುತ್ತಿದ್ದಾರೆ. ಹಾಗಾದರೆ ಮದುವೆಯ ಅರ್ಥವೇನು? ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ
She is saying that 50 percent of corporate employees are having an extramarital affair.
What’s the point of marriage then? pic.twitter.com/dhGyzlZZkO
— ︎ ︎venom (@venom1s) January 27, 2026
ಈ ವಿಡಿಯೋದಲ್ಲಿ ಯುವತಿಯೂ ಕಾರ್ಪೊರೇಟ್ ಉದ್ಯೋಗದ ಸ್ಥಳಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ. ಆದರೂ ಜನರು ಏಕೆ ಮದುವೆಯಾಗುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಮದುವೆಯಾಗುವುದಕ್ಕೆ ಮುಖ್ಯ ಕಾರಣವೇ ಅವರಿಗೆ ತಮ್ಮ ಹೆತ್ತವರನ್ನು ನೋಡಿಕೊಳ್ಳಲು ಹಾಗೂ ಮಕ್ಕಳನ್ನು ಪಡೆಯಲು ಯಾರಾದರೂ ಬೇಕಾಗಿರುವುದು ಎಂದು ನೇರವಾಗಿಯೇ ಹೇಳಿದ್ದಾಳೆ. ನೀವು ಮಕ್ಕಳನ್ನು ದತ್ತು ತೆಗೆದುಕೊಳ್ಳಿ. ನಿಮ್ಮ ಪೋಷಕರನ್ನು ನೋಡಿಕೊಳ್ಳಲು ಕೆಲಸಗಾರರನ್ನು ನೇಮಿಸಿಕೊಳ್ಳಿ, ಬದಲಾಗಿ ಮದುವೆಯಾಗುವುದಲ್ಲ ಎಂದು ವಿವಾಹೇತರ ಸಂಬಂಧ ಹೊಂದುವವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾಳೆ.
ಇದನ್ನೂ ಓದಿ: 100 ರೂ. ಡಿಸ್ಕೌಂಟ್ಗಾಗಿ ಫ್ರೀ ಎಂಟರ್ಟೈನ್ಮೆಂಟ್’: ಛೀ.. ಈ ಯುವತಿಯರು ಮಾಡಿದ ಕೆಲಸ ನೋಡಿ
ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಕ್ರಮ ಸಂಬಂಧಗಳಿಂದ ಅದೆಷ್ಟೋ ಸಂಸಾರಗಳು ಹಾಳಾಗುತ್ತಿವೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ವಿವಾಹೇತರ ಸಂಬಂಧಗಳು 90% ಕ್ಕಿಂತ ಹೆಚ್ಚು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂದಿನ ಜನರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
