ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯಾದರೂ ಅದು ಸಖತ್ ವೈರಲ್ ಆಗುತ್ತದೆ. ಇದೀಗ ಬಹುಭಾಷ ನಟಿ ನಿವೇತಾ ಪೇತುರಾಜ್ ಅವರಿಗೆ ಸಂಬಂಧಪಟ್ಟ ವಿಡಿಯೋವೊಂದು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿ ನಿವೇತಾ ಟಾಲಿವುಡ್ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರು. ತಮಿಳಿನ ʼಒರು ನಾಳ್ ಕೂತುʼ ಚಿತ್ರದ ಮೂಲಕ ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟ ಇವರಿಗೆ ತೆಲುಗಿನ ʼಮೆಂಟಲ್ ಮಡಿಲೋʼ ಚಿತ್ರ ಸಾಕಷ್ಟು ಹೆಸರನ್ನು ತಂದುಕೊಟ್ಟಿತು. ತಮಿಳು, ತೆಲುಗು ಸಿನೆಮಾಗಳಲ್ಲಿ ಮಿಂಚಿದ ನಿವೇದಾ ಇತ್ತೀಚಿಗೆ ಯಾವುದೇ ಹೊಸ ಸಿನೆಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಇದೀಗ ಈ ಸುಂದರಿಗೆ ಸಂಬಂಧಿಸಿ ವಿಡಿಯೋವೊಂದು ವೈರಲ್ ಆಗಿದ್ದು, ನಟಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದು ಮಾತ್ರವಲ್ಲದೆ ಈ ದೃಶ್ಯವನ್ನು ವಿಡಿಯೋ ಚಿತ್ರಕರಣ ಮಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವೈರಲ್ ವಿಡಿಯೋವನ್ನು ಕಾರ್ತಿಕ್ (@Karthikkk_7) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ನಟಿ ನಿವೇತಾ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿರುವ ದೃಶ್ಯವನ್ನು ಕಾಣಬಹುದು. ಪೊಲೀಸರು ನಿವೇತಾ ಅವರ ಕಾರನ್ನು ತಡೆದು ಟ್ರಂಕ್ ತೆರೆಯುವಂತೆ ಹೇಳಿದ್ದಾರೆ. ಡಾಕ್ಯುಮೆಂಟ್‌ಗಳೆಲ್ಲಾ ಸರಿಯಾಗಿವೆ, ದಯವಿಟ್ಟು ಅರ್ಥಮಾಡಿಕೊಳ್ಳಿ ನಾನು ಟ್ರಂಕ್ ತೆರೆಯಲ್ಲ. ಎಂದು ಹೇಳುತ್ತಾರೆ. ಪೊಲೀಸರು ಮತ್ತು ನಿವೇತಾ ಅವರ ನಡುವಿನ ವಾಗ್ವಾದದ ದೃಶ್ಯವನ್ನು ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಗೂ ಆ ಸಂದರ್ಭದಲ್ಲಿ ನಟಿ ತರಾಟೆಗೆ ತೆಗೆದುಕೊಳ್ಳುತ್ತಾರೆ.
ಇದನ್ನೂ ಓದಿ: ರೈಲ್ವೆ ನಿಲ್ದಾಣ ಆಯ್ತೂ.. ಇದೀಗ ಏರ್‌ಪೋರ್ಟ್‌ನಲ್ಲೂ ಶುರುವಾಯಿತು ಈಕೆಯ ರೀಲ್ಸ್ ಹುಚ್ಚಾಟ
Actress #NivethaPethuraj argued and hesitated to open backside trunk of the car and scolded the recorded person…
Her expressions made Policemen to doubt on herself…#Tollywood #NivethaPethuraj #Police pic.twitter.com/49W6DNPcdL
— Anchor_Karthik (@Karthikkkk_7) May 29, 2024
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಪೊಲೀಸರು ಕಾಲಿಗೆ ಕ್ರಾಕ್ಸ್ ಧರಿಸಿದ್ದ ಕಾರಣ ನೆಟ್ಟಿಗರು ಇದೆಲ್ಲಾ ಪಬ್ಲಿಸಿಟಿ ಸ್ಟಂಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹೀಗಿದ್ದರೂ ನಟಿ ಈ ವಿಡಿಯೋದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ