Artificial Intelligence: ಕೃತಕ ಬುದ್ಧಿಮತ್ತೆಯು (AI) ಕಲಾವಿದರ ಕಲ್ಪನೆಗೆ ಹೊಸ ಗರಿಗಳನ್ನು ಮೂಡಿಸುತ್ತಲೇ ಇದೆ. ಟ್ರೆಂಡಿಂಗ್ ವಿಷಯಗಳ ಮೇಲೆ ತಮ್ಮ ಕಲ್ಪನೆಯನ್ನು ಹರಿಬಿಡುವ ರೀತಿ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತಿರುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ ಬಾರ್ಬಿ ಎಐ ಸೀರೀಸ್ ಇದಕ್ಕೆ ಉತ್ತಮ ಉದಾಹರಣೆ. ಇದೀಗ ವೈರಲ್ ಆಗಿರುವ ಈ ಫೋಟೋಗಳನ್ನು ನೋಡಿ. ಮುಂಬೈನ ಕಟ್ಟಡಗಳು ಆಕಾಶದಲ್ಲಿ ಹಾರಾಡುತ್ತಿವೆ. Mumbai Surreal Estate ಎಂಬ ಶೀರ್ಷಿಕೆಯಲ್ಲಿ ಕಲಾವಿದ ಪ್ರತೀಕ ಅರೋರಾ ಇನ್ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಬೈನಲ್ಲಿ ಜಾಗ ಸಾಕಾಗದೆ ಜನರು ಇನ್ನು ಆಕಾಶದಲ್ಲಿಯೂ ಮನೆ ಕಟ್ಟಕೊಳ್ಳಲಾರಂಭಿಸಿದರೆ? ಎಂದು ತಮಾಷೆ ಮಾಡುತ್ತಿದ್ದಾರೆ ನೆಟ್ಟಿಗರು.
ಇದನ್ನೂ ಓದಿ : Viral Video: ತನ್ನ ಮದುವೆಯಾಯಿತು ಎಂದು ಈತ ಯಾರಿಗೆಲ್ಲ ಹೇಳುತ್ತಿದ್ದಾನೆ, ಈತನ ಸ್ನೇಹಿತರು ಯಾರೆಲ್ಲ ನೋಡಿ
ಒಂದು ವಾರದ ಹಿಂದೆ ಪೋಸ್ಟ್ ಮಾಡಿದ ಈ ಹೈಪರ್ ರಿಯಲಿಸ್ಟಿಕ್ ಚಿತ್ರಗಳನ್ನು ಅನೇಕರು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ಧಾರೆ. ನಿಮ್ಮ ಮೆದುಳನ್ನು ಪ್ರೀತಿಸುತ್ತಿದ್ದೇನೆ ಎಂದಿದ್ದಾರೆ ಒಬ್ಬರು. ಕ್ಲೌಡ್ 9 ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ಕಲ್ಪನೆಯು ಮುಂದೊಮ್ಮೆ ನಿಜವಾದರೆ? ಎಂದು ಕೇಳಿದ್ದಾರೆ ಮತ್ತೊಬ್ಬರು.
ಭಾರತದಲ್ಲಿ ಮುಂಬೈ ಪ್ರಮುಖ ಆರ್ಥಿಕ ಕೇಂದ್ರವಾಗಿರುವುದರಿಂದ ವ್ಯಾಪಾರೋದ್ಯಮಕ್ಕಾಗಿ ಜನರು ಇಲ್ಲಿ ಬಂದು ನೆಲೆಸುತ್ತಾರೆ. ಸಹಜವಾಗಿ ವಸತಿಗಾಗಿ ಬೇಡಿಕೆ ಹೆಚ್ಚುತ್ತದೆ. ಅದು ಖರೀದಿಗೆ ಇರಬಹುದು ಬಾಡಿಗೆಗೂ ಇರಬಹುದು. ಚಿಕ್ಕಪುಟ್ಟ ಅಪಾರ್ಟ್ಮೆಂಟ್ಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ವಾಸವಿರಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಲಾವಿದರು ಹೀಗೆ ಯೋಚಿಸಿರುವ ಸಾಧ್ಯತೆ ಇದೆ.
ಇದನ್ನೂ ಓದಿ : Viral Video: ಪಾದ ಮುಟ್ಟಿದರೆ ಎದ್ದುನಿಂತು ಆಶೀರ್ವದಿಸುತ್ತಾನೆ ಈ ಕೊಲ್ಕತ್ತೆಯ ಗಣಪ
ಬ್ರೋಕರೇಜ್ ಫ್ರೀ? ಎಂದು ಕೇಳಿದ್ಧಾರೆ ಒಬ್ಬರು. ಓಹೋ ಈ ಸಲ ಪರಿಸ್ಥಿತಿ ನಿಮ್ಮ ಕೈಮೀರಿ ಹೋಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ಕಟ್ಟಡಗಳು ನಗರದ ತುಂಬಾ ತೇಲಿಕೊಂಡು ಚಲಿಸುತ್ತವೆಯೇ? ಎಂದು ಕೇಳಿದ್ದಾರೆ ಇನ್ನೊಬ್ಬರು. ಕೆಲದಿನಗಳ ಹಿಂದೆ ಯುವಕನೊಬ್ಬ ರಿಯಲ್ ಎಸ್ಟೇಟಿಗನಾಗಿ ಮುಂಬೈನ ಅತ್ಯಂತ ಇಕ್ಕಟ್ಟಾದ ಸಿಂಗಲ್ ಬೆಡ್ರೂಂ ಅಪಾರ್ಟ್ಮೆಂಟ್ ರೀಲ್ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:57 pm, Thu, 21 September 23