Video: ವಿಮಾನ ಪತನಕ್ಕೂ ಮೊದಲು ಪ್ರಯಾಣಿಕರ ಕಿರುಚಾಟ, ಪ್ರಾರ್ಥನೆಯ ಕೂಗು; AI ಯಲ್ಲಿ ಕೊನೆಯ ಕ್ಷಣದ ದೃಶ್ಯ

ಅಹಮದಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹಲವಾರು ಕನಸುಗಳನ್ನು ಹೊತ್ತು ಬಾನೆತ್ತರದಲ್ಲಿ ಸಾಗುತ್ತಿದ್ದ ಅದೆಷ್ಟೋ ಮುಗ್ಧ ಜೀವಗಳು ಈ ಘೋರ ದುರಂತದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ವಿಮಾನ ಪತನಕ್ಕೂ ಮೊದಲು ವಿಮಾನದೊಳಗಿದ್ದವರ ಕೊನೆಯ ಕ್ಷಣ ಹೇಗಿತ್ತು ಎಂಬುದನ್ನು ತೋರಿಸುವ ಎಐ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಈ ದೃಶ್ಯವನ್ನು ನೋಡುಗರ ಕಣ್ಣಂಚಿನಲಿ ನೀರು ತರಿಸಿದೆ.

Video: ವಿಮಾನ ಪತನಕ್ಕೂ ಮೊದಲು ಪ್ರಯಾಣಿಕರ ಕಿರುಚಾಟ, ಪ್ರಾರ್ಥನೆಯ ಕೂಗು; AI ಯಲ್ಲಿ ಕೊನೆಯ ಕ್ಷಣದ ದೃಶ್ಯ
ವೈರಲ್‌ ವಿಡಿಯೋ
Image Credit source: bharathfx1/Instagram

Updated on: Jun 13, 2025 | 2:28 PM

ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ಪ್ರಯಾಣ ಆರಂಭಿಸಿದ್ದ ಏರ್‌ ಇಂಡಿಯಾ ವಿಮಾನವು ಟೇಕ್‌ ಆಫ್‌ ಆದ ಕೆಲವೇ ಹೊತ್ತಿನಲ್ಲಿ (Plane Crash) ಪತನಗೊಂಡ ಆಘಾತಕಾರಿ ಘಟನೆ ಗುರುವಾರ (ಮೇ. 12) ನಡೆದಿದೆ. ಹಲವಾರು ಕನಸುಗಳನ್ನು, ತಮ್ಮವರನ್ನು ಭೇಟಿಯಾಗುವ ಆಸೆಯನ್ನು ಹೊತ್ತು ಬಾನೆತ್ತರದಲ್ಲಿ ಹಾರುತ್ತಿದ್ದ ಮುಗ್ಧ ಜೀವಗಳು ಈ ದುರಂತದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ವಿಮಾನ ಪತನದ ಭೀಕರ ದೃಶ್ಯವನ್ನು ನೋಡಿದಾಗ ಎದೆ ಝಲ್‌ ಎನ್ನುತ್ತೆ, ಇನ್ನೂ ವಿಮಾನ ಪತನಕ್ಕೂ ಮೊದಲು ಸಾವು ಕಣ್ಣ ಮುಂದೆ ಬಂದಾಗ ವಿಮಾನದೊಳಗಿದ್ದ ಪ್ರಯಾಣಿಕರು ಹಾಗೂ ಪೈಲಟ್‌ಗಳ ಅಸಹಾಯಕ ಪರಿಸ್ಥಿತಿ ಹೇಗಿರಬೇಡ ಹೇಳಿ. ಹೀಗೆ ವಿಮಾನ ಪತನಕ್ಕೂ ಮೊದಲು ಕೊನೆಯ ಕ್ಷಣದಲ್ಲಿ ವಿಮಾನದೊಳಗೆ ಏನೆಲ್ಲಾ ನಡೆದಿರಬಹುದು ಎಂಬುದನ್ನು ತೋರಿಸುವ ಎಐ (AI Video) ವಿಡಿಯೋವೊಂದು ವೈರಲ್‌ ಆಗಿದ್ದು, ಈ ದೃಶ್ಯ ಕರುಳು ಹಿಂಡುವಂತಿದೆ.

ವಿಮಾನ ಪತನಕ್ಕೂ ಮೊದಲು ಫ್ಲೈಟ್‌ ಒಳಗೆ ಏನೆಲ್ಲಾ ನಡೆಯಿತು?

ವಿಮಾನ ಪತನಕ್ಕೂ ಮೊದಲು, ಸಾವು ಕಣ್ಣ ಮುಂದೆ ಬಂದಾಗ ವಿಮಾನದೊಳಗಿದ್ದ ಪೈಲಟ್‌, ಸಿಬ್ಬಂದಿಗಳು, ಪ್ರಯಾಣಿಕರು ಎಷ್ಟು ಕೂಗಾಡಿರಬೇಡ, ಪ್ರಾಣವನ್ನು ಉಳಿಸಿಕೊಡು ಎಂದು ದೇವರಲ್ಲಿ ಎಷ್ಟು ಪ್ರಾರ್ಥಿಸಿರಬೇಡ, ಅವರ ಅಸಹಾಯಕ ಪರಿಸ್ಥಿತಿ ಹೇಗಿರಬೇಡ ಹೇಳಿ. ಹೀಗೆ ಕೊನೆಯ ಕ್ಷಣದಲ್ಲಿ ವಿಮಾನದೊಳಗೆ ಏನೆಲ್ಲಾ ನಡೆದಿರಬಹುದು ಎಂಬುದನ್ನು ತೋರಿಸುವ ಎಐ ವಿಡಿಯೋವನ್ನು ಕಲಾವಿದರೊಬ್ಬರು ಸೃಷ್ಟಿಸಿದ್ದಾರೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ
ಪ್ರಾಮಾಣಿಕತೆಗೆ ಈ ಹಳ್ಳಿ ಹೆಸರುವಾಸಿ, ಇಲ್ಲಿ ಅಂಗಡಿಗಳಿಗೆ ಮಾಲೀಕರೇ ಇಲ್ಲ
ಮರದ ಬುಡದಿಂದ ಚಿಮ್ಮಿದ ನೀರು ಕಂಡು ಪೂಜೆ ಮಾಡಿದ ಸ್ಥಳೀಯರು

ಈ ವಿಡಿಯೋವನ್ನು bharathfx1 ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವಿಮಾನ ಪತನಕ್ಕೂ ಮೊದಲು ವಿಮಾನದೊಳಗೆ ಏನೆಲ್ಲಾ ನಡೆಯಿತು ಎಂಬ ದೃಶ್ಯವನ್ನು ಕಾಣಬಹುದು. ಪೈಲಟ್‌ ಕೊನೆಯ ಕ್ಷಣದಲ್ಲಿ ಮೇ ಡೇ ಮೇ ಡೇ ಎಂಬ ಸಂದೇಶವನ್ನು ರವಾಣಿಸಿದಾಗ ವಿಮಾನದೊಳಗೆ ಪ್ರಯಾಣಿಕರು ಕಿರುಚಾಡುತ್ತಾ, ಪ್ರಾಣ ಉಳಿಸು ದೇವ್ರೇ ಎಂದು ಭಯದಲ್ಲಿ ಕೈ ಮುಗಿಯುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ವಿಮಾನ ಅಪಘಾತದಲ್ಲಿ ಎಲ್ಲವೂ ಸುಟ್ಟು ಕರಕಲಾದರೂ ಭಗವದ್ಗೀತೆಗೆ ಏನು ಆಗಿಲ್ಲ ನೋಡಿ

ಮೇ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಮುಗ್ಧ ಜೀವಗಳ ಪರಿಸ್ಥಿತಿ ಹೇಗಿತ್ತೋʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದೃಶ್ಯವನ್ನು ಕಂಡು ನನ್ನ ಹೃದಯವೇ ಒಡೆದು ಹೋಯಿತುʼ ಎಂದು ಹೇಳಿದ್ಧಾರೆ. ಮತ್ತೊಬ್ಬ ಬಳಕೆದಾರರು ʼಬೇಸರವಾಯಿತು ಈ ದೃಶ್ಯ ಕಂಡುʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us