ಮಹಿಳೆಯ ಜೀವ ಉಳಿಸಿದ ಏರ್ ಇಂಡಿಯಾ ಸಿಬ್ಬಂದಿ ಮತ್ತು ಪ್ರಯಾಣಿಕರು

| Updated By: ಶ್ರೀದೇವಿ ಕಳಸದ

Updated on: Dec 27, 2022 | 11:36 AM

Air India : ವಿಮಾನ ಪ್ರಯಾಣದ ವೇಳೆ ಆಕಸ್ಮಿಕವಾಗಿ ಕುಸಿದುಬಿದ್ದ ಮಹಿಳೆಯ ಪ್ರಾಣವನ್ನು ಏರ್​ ಇಂಡಿಯಾ ಸಿಬ್ಬಂದಿ ಮತ್ತು ಸಹಪ್ರಯಾಣಿಕರು ಹೇಗೆ ಸಾವಧಾನದಲ್ಲಿ ಕಾಪಾಡಿದರು ಎಂದು ವಿವರಿಸಿದ ಲಿಂಕ್ಡ್​ಇನ್​ ಪೋಸ್ಟ್​ ಇದೀಗ ವೈರಲ್ ಆಗಿದೆ.

ಮಹಿಳೆಯ ಜೀವ ಉಳಿಸಿದ ಏರ್ ಇಂಡಿಯಾ ಸಿಬ್ಬಂದಿ ಮತ್ತು ಪ್ರಯಾಣಿಕರು
ಪ್ರಾತಿನಿಧಿಕ ಚಿತ್ರ
Follow us on

Viral : ಏರ್​ ಇಂಡಿಯಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಅಕಸ್ಮಾತ್ ಆಗಿ ಕುಸಿದು ಬಿದ್ದಾಗ ಅವರನ್ನು ಪ್ರಾಣಾಪಾಯದಿಂದ ಉಳಿಸಲು ಏರ್​ ಇಂಡಿಯಾ ಸಿಬ್ಬಂದಿ ಮತ್ತು ಸಹಪ್ರಯಾಣಿಕರು ತುರ್ತಾಗಿ ಹೇಗೆ ತೊಡಗಿಕೊಂಡರು ಎಂಬುದನ್ನು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎರ್ಗೋ ಟೆಕ್ನಾಲಜಿ ಅಂಡ್​ ಸರ್ವೀಸಸ್​ನ ಉಪಾಧ್ಯಕ್ಷ ಧನಂಜಯ್ ದೇವಾಸ್ಪರ್ ಲಿಂಕ್ಡ್​ಇನ್​ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಡಿಸೆಂಬರ್ 22ರಂದು ಏರ್ ಇಂಡಿಯಾ 911 ವಿಮಾನವು ದುಬೈಗೆ ಹೊರಡಲು ಟೇಕ್​ ಆಫ್​ ಆಗಿ ಒಂದು ಗಂಟೆಯ ನಂತರ ಆಕಸ್ಮಿಕವಾಗಿ ಮಹಿಳೆಯೊಬ್ಬರು ಕುಸಿದು ಸೀಟಿನಿಂದ ಕೆಳಕ್ಕೆ ಬಿದ್ದುಬಿಟ್ಟರು. ಆಗ ಏರ್​ ಇಂಡಿಯಾ ಸಿಬ್ಬಂದಿ ತೇಜಸ್ ಮತ್ತು ಅನಿತಾ ಡಿಕ್ರೂಝ್ ಮಹಿಳೆಯ ನಿಗಾ ವಹಿಸುವುದರಲ್ಲಿ ಪ್ರವೃತ್ತರಾದರು.  ಪ್ರಯಾಣಿಕರಲ್ಲಿ ಶಾಂತತೆಯನ್ನು ಕಾಪಾಡಿಕೊಳ್ಳಲು ಮನವಿ ಮಾಡಿಕೊಳ್ಳುತ್ತಾ ಪ್ರಯಾಣಿಕರಲ್ಲಿ ಯಾರಾದರೂ ವೈದ್ಯರಿದ್ದಾರೆಯೇ ಎಂದು ಘೋಷಿಸಲಾಯಿತು.

ಇದನ್ನೂ ಓದಿ : ಬೆದರಿದ ಹರಿಣಿಯರು; ಕುಖ್ಯಾತ ಸರಣಿ ಹಂತಕ ಚಾರ್ಲ್ಸ್​ ಶೋಭರಾಜ ವಿಮಾನ ಪ್ರಯಾಣದ ಫೋಟೋ ವೈರಲ್

ಕುಸಿದು ಬಿದ್ದ ಮಹಿಳೆಯು ಪ್ರಜ್ಞೆ ಕಳೆದುಕೊಳ್ಳದಂತೆ ಅನಿತಾ ಅವರನ್ನು ಮಾತನಾಡಿಸುತ್ತಿದ್ದರು. ತೇಜಸ್​ ಸಕ್ಕರೆ ಮತ್ತು ನೀರಿನೊಂದಿಗೆ ಅಲ್ಲಿಗೆ ಬಂದು ಪ್ರಥಮೋಪಚಾರ ನಡೆಸಿದರು. ಈ ವೇಳೆ ಸಹಪ್ರಯಾಣಿಕರು ಯಾವುದೇ ರೀತಿಯ ಗಾಬರಿಗೆ ಒಳಗಾಗದೆ ಶಾಂತವಾಗಿ ಇದೆಲ್ಲವನ್ನೂ ಗಮನಿಸುತ್ತಿದ್ದರು. ಮೂವರು ಪ್ರಯಾಣಿಕರು ತಮ್ಮ ಆಸನಗಳನ್ನು ಆ ಮಹಿಳೆಗೆ ಬಿಟ್ಟುಕೊಟ್ಟರು. ಆ ಆಸನಗಳ ಮೇಲೆ ಮಲಗಿದ ಮಹಿಳೆ ಕ್ರಮೇಣ ಸುಧಾರಿಸಿಕೊಂಡರು. ವಿಮಾನದಿಂದ ಇಳಿದ ತಕ್ಷಣ ವೈದ್ಯರು ನಿಮ್ಮನ್ನು ಪರಿಶೀಲಿಸುತ್ತಾರೆ ಎಂದು ಅನಿತಾ ಆ ಮಹಿಳೆಗೆ ತಿಳಿಸಿದರು.

ಇಂಥ ತುರ್ತು ಸಂದರ್ಭವನ್ನು ಸಿಬ್ಬಂದಿ ಮತ್ತು ಪ್ರಯಾಣಿಕರು ಸಮಾಧಾನದಿಂದ ನಿರ್ವಹಿಸಿದ ರೀತಿ ನಿಜಕ್ಕೂ ಶ್ಲಾಘನೀಯ ಎಂದು ಈ ಪೋಸ್ಟ್ ಬರೆದಿದ್ದಾರೆ ಧನಂಜಯ್ ದೇವಾಸ್ಪರ್.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ