ತಲೆಸ್ನಾನದ ಈ ತಂತ್ರ ಹೇಗಿದೆ? ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ

| Updated By: ಶ್ರೀದೇವಿ ಕಳಸದ

Updated on: Nov 29, 2022 | 3:26 PM

Head Bath : ಬಡತನವನ್ನು ವಿಜೃಂಭಿಸುವುದನ್ನು ನಿಲ್ಲಿಸಿ ಸಾಕು ಎಂದು ಕೆಲವರು. ಅನಿವಾರ್ಯತೆ ಇದ್ದಲ್ಲಿಯೇ ಇಂಥ ತಂತ್ರಗಳು ಹುಟ್ಟಿಕೊಳ್ಳುವುದು ಅರೆ ವ್ಹಾ! ಎಂದು ಕೆಲವರು. ಈ ವಿಡಿಯೋ ನೋಡಿದ ನೀವು ಏನು ಹೇಳುತ್ತೀರಿ?

ತಲೆಸ್ನಾನದ ಈ ತಂತ್ರ ಹೇಗಿದೆ? ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ
ಹೇಗಿದೆ ಈ ತಂತ್ರ
Follow us on

Viral Video : ಅನಿವಾರ್ಯತೆಯೇ ಸಂಶೋಧನೆಯ ತಾಯಿ. ಎಲ್ಲವೂ ಅನುಕೂಲಕರವಾಗಿರುವಲ್ಲಿ ಮನುಷ್ಯ ಪ್ರಯತ್ನಗಳಿಗೆ ಜಾಗವಿರುವುದಿಲ್ಲ. ಆದ್ದರಿಂದ ಎಲ್ಲಿ ಕೊರತೆ ಇದೆಯೋ ಅಲ್ಲಿಯೇ ಹೊಸ ಅನ್ವೇಷಣೆಗೆ ಅವಕಾಶವಿರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ಮನುಷ್ಯ ತಲೆಸ್ನಾನಕ್ಕೆ ಹೊಸ ವಿಧಾನವನ್ನು ಕಂಡುಕೊಂಡಿದ್ದಾನೆ. ನೆಟ್ಟಿಗರು ಈ ವಿಡಿಯೋ ನೋಡಿ ಅಚ್ಚರಿಗೆ ಒಳಗಾಗಿದ್ದಾರೆ. ಬಡತನದಲ್ಲಿಯೇ ಪ್ರತಿಭೆ, ಅನ್ವೇಷಣೆ ಅರಳುತ್ತದೆ ಎಂದಿದ್ದಾರೆ.

ರೋಮಾ ಬಲ್ವಾನಿ ಎಂಬುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವ್ಯಕ್ತಿ ಡ್ರಮ್​ ಅನ್ನು ಬೆನ್ನಿಗೆ ಕಟ್ಟಿಕೊಂಡಿದ್ದಾನೆ. ತಲೆಗೆ ಸಾಬೂನು ಹಚ್ಚಿಕೊಂಡು ಉಜ್ಜಿಕೊಂಡ ನಂತರ ತಾನೇ ಬೆನ್ನು ಎತ್ತಿ ಡ್ರಮ್​ನೊಳಗಿನ ನೀರನ್ನು ಬಾಗಿಸಿಕೊಳ್ಳುತ್ತಾನೆ.

ಈ ವಿಡಿಯೋ ಅನ್ನೂ ಈಗಾಗಲೇ 15,700 ಜನರು ನೋಡಿದ್ದಾರೆ. ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ವಾಹ್ ಇದು ಅದ್ಭುತವಾಗಿದೆ ಎಂದಿದ್ದಾರೆ ಹಲವರು. ಇನ್ನೂ ಕೆಲವರು ಸಾಕು ನಿಲ್ಲಿಸಿ, ಬಡತನವನ್ನು ಇನ್ನೂ ಹೀಗೆ ವಿಜೃಂಭಿಸುವುದನ್ನು ಎಂದಿದ್ದಾರೆ. ತಲೆ ತೊಳೆದುಕೊಂಡ ನೀರನ್ನು ಬುಟ್ಟಿಯಲ್ಲಿ ಯಾಕೆ ಸಂಗ್ರಹಿಸುತ್ತಿದ್ದಾನೆ ಈತ? ಆ ಸಾಬೂನು ನೀರನ್ನು ಮುಂದೇನು ಮಾಡುತ್ತಾನೆ ಎಂದು ಕೇಳಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ