
ಭಾರತೀಯರ ಆಹಾರ ಪದ್ಧತಿ (food system) ಗೆ ಹೋಲಿಸಿದ್ರೆ ವಿದೇಶಿ ಆಹಾರ ಪದ್ಧತಿಯೂ ತುಂಬಾನೇ ವಿಭಿನ್ನ. ಆದರೆ ರುಚಿರುಚಿಯಾಗಿ ಅಡುಗೆ ಮಾಡಿ ಉಣಬಡಿಸುವುದರಲ್ಲಿ ಭಾರತೀಯ ಮಹಿಳೆಯರು ಎತ್ತಿದ ಕೈ. ಅಷ್ಟೇ ಯಾಕೆ, ಮನೆಗೆ ಯಾರು ಎಷ್ಟೋತ್ತಿಗೆಯೇ ಬರಲಿ, ಪ್ರೀತಿಯಿಂದ ಅಡುಗೆ ಮಾಡಿ ಮನೆಗೆ ಬಂದ ಅತಿಥಿಗಳನ್ನು ಖುಷಿ ಪಡಿಸುತ್ತಾರೆ. ಹೀಗಾಗಿ ಅತಿಥಿಗಳನ್ನು ಸತ್ಕಾರಿಸುವ ರೀತಿ, ಅಡುಗೆ ಉಣಬಡಿಸುವ ರೀತಿಯೇ ಹೇಳುತ್ತೆ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರ ಎಂತಹದ್ದು ಎಂದು. ಇದೀಗ ಅಮೇರಿಕಾ (America) ದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೂ ಅಲ್ಲಿನ ಕಟ್ಟಡ ಕಾರ್ಮಿಕರಿ (construction workers) ಗೆ ತಮ್ಮ ಕೈಯಾರೆ ಮಾಡಿದ ತಿನಿಸನ್ನು ನೀಡಿದ್ದು, ಈ ಮಹಿಳೆಯ ಕೈರುಚಿಗೆ ಫುಲ್ ಫಿದಾ ಆಗಿದ್ದಾರೆ. ಹೌದು ಕಟ್ಟಡ ಕಾರ್ಮಿಕರು ಬಿಸಿ ಬಿಸಿ ವಡೆಯನ್ನು ಚಟ್ನಿಯೊಂದಿಗೆ ಸವಿದು ಖುಷಿ ಪಟ್ಟಿದ್ದು, ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದೆ.
Brunt.india ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೂ ತಮ್ಮ ಮನೆಗೆ ಬಂದ ಸೀಲ್‌ಕೋಟಿಂಗ್ ಕಂಪನಿಯ ಕೆಲಸಗಾರರಿಗೆ ವಡೆ ಹಾಗೂ ಚಟ್ನಿಯನ್ನು ಸವಿಯಲು ನೀಡಿರುವುದನ್ನು ನೋಡಬಹುದು. ಇದನ್ನು ಕೈಯಾರೆ ಒಬ್ಬ ಕೆಲಸಗಾರನು ಧನ್ಯವಾದಗಳು, ಏನಿದು ಎಂದು ಕೇಳಿದ್ದಾನೆ. ಅದಕ್ಕೆ ಮಹಿಳೆಯೂ ಇದು ವಡಾ, ಸ್ವೀಟ್ ಇಲ್ಲ, ಸ್ಪೈಸಿಯಾಗಿದೆ ಎಂದು ಎಂದಿದ್ದಾಳೆ. ಆ ಬಳಿಕ ಇಬ್ಬರೂ ಕೂಡ ಡಾವನ್ನು ಚಟ್ನಿಯೊಂದಿಗೆ ಸವಿದು ಸ್ಪೈಸಿ ಸ್ಪೈಸಿ ಎನ್ನುವ ಮೂಲಕ ಭಾರತೀಯ ತಿನಿಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Video: ಬಾರ್‌ಕೋಡ್ ತೋರಿಸಿ ಪ್ರಯಾಣಿಕರಿಂದ ಟಿಪ್ ಪಡೆಯುತ್ತಿರುವ ಅಡುಗೆ ಸಿಬ್ಬಂದಿ, ವಿಡಿಯೋ ವೈರಲ್
ಈ ವಿಡಿಯೋವೊಂದು 31 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವಿಡಿಯೋಗೆ ಮೆಚ್ಚುಗೆಗಳು ವ್ಯಕ್ತವಾಗಿದೆ. ಬಳಕೆದಾರರು, ಈ ರೀತಿ ಉಪಚಾರ ಭಾರತದಲ್ಲಿ ಕಾಣಸಿಗುವುದು ಸರ್ವೇ ಸಾಮಾನ್ಯ ಎಂದಿದ್ದಾರೆ. ಇನ್ನೊಬ್ಬರು, ಅದ್ಭುತ ನನಗೆ ಈಗ ವಡಾ ಸವಿಯಬೇಕೆನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ವಿದೇಶದಲ್ಲಿ ನೆಲೆಸಿದ್ದರೂ ತಮ್ಮ ಆಚಾರ, ವಿಚಾರ ಸಂಸ್ಕೃತಿ ಹಾಗೂ ಅತಿಥಿಗಳನ್ನು ಸತ್ಕಾರಿಸುವ ರೀತಿಯನ್ನು ಮರೆಯುವುದಿಲ್ಲ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ