
ಅಮೆರಿಕ, ಮಾ. 16: ಈ ಸಮಾಜದಲ್ಲಿ ನಂಬಲಸಾಧ್ಯವಾದಂತಹ ಅದೆಷ್ಟೋ ಘಟನೆಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಲಕ್ಷಣ (bizarre) ಘಟನೆಗಳ ಸುದ್ದಿಗಳನ್ನು ಕೇಳಿದಾಗ ಹಿಂಗೂ ನಡೆಯುತ್ತಾ ಎಂದು ಭಾಸವಾಗುತ್ತದೆ. ಇದೀಗ ಅಮೆರಿಕದಲ್ಲಿ (America) ಇಂತಹ ಅಪರೂಪದ ಹಾಗೂ ನಂಬಲಸಾಧ್ಯವಾದ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಗೆಳತಿಯೊಂದಿಗೆ (girlfriend) ಬೆಡ್‌ರೂಮ್‌ನಲ್ಲಿ ಮಲಗಿದ್ದ ವೇಳೆ ಪಿಟ್‌ಬುಲ್ (pitbull) ಶ್ವಾನದ (dog) ಗುಂಡೇಟಿಗೆ ತುತ್ತಾಗಿದ್ದಾನೆ. ಶ್ವಾನದ ತುಂಟತನದಿಂದ ಆಕಸ್ಮಿಕವಾಗಿ ಗುಂಡು (gun) ಹಾರಿದ್ದು, ಇದರಿಂದ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ವಿಚಿತ್ರ ಘಟನೆ ಅಮೆರಿಕದ ಟೆನ್ನೆಸ್ಸೀಯ ಮೆಂಫಿಸ್ ಎಂಬಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಪಿಟ್‌ಬುಲ್ ಶ್ವಾನದ ಗುಂಡೇಟಿಗೆ ತುತ್ತಾಗಿದ್ದಾನೆ. ಆತ ತನ್ನ ಗೆಳತಿಯೊಂದಿಗೆ ಬೆಡ್‌ರೂಮ್‌ನಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಓರಿಯೊ ಹೆಸರಿನ ಸಾಕು ನಾಯಿ ಆಕಸ್ಮಿಕವಾಗಿ ಗುಂಡು ಹಾರಿಸಿದೆ. ಈ ಗುಂಡು ಆ ವ್ಯಕ್ತಿಯ ತೊಡೆ ಭಾಗಕ್ಕೆ ತಗುಲಿದ್ದು, ಅದೃಷ್ಟವಶಾತ್ ಈ ಅನಾಹುತದಲ್ಲಿ ಯಾವುದೇ ಗಂಭೀರ ಹಾನಿಯಾಗಿಲ್ಲ.
Pet dog accidentally shoots owner in US
Jerald Kirkwood, the victim and owner of pet Pitbull ‘Oreo,’ revealed to police the shocking moment his dog jumped and unintentionally set off a firearm in his home in Tennessee, US.
Officers from the Memphis Police Department responded… pic.twitter.com/XRmL92JUvn
— Gulf Daily News (@GDNonline) March 12, 2025
ಜೆರಾಲ್ಡ್ ಕಿರ್ಕ್‌ವುಡ್ ಎಂಬ ವ್ಯಕ್ತಿ ತನ್ನ ಗೆಳತಿಯೊಂದಿಗೆ ಹಾಸಿಗೆಯಲ್ಲಿ ಮಲಗಿದ್ದಾಗ, ಗುಂಡು ತಗುಲಿದ್ದು, ಶ್ವಾನದ ತುಂಟತನದಿಂದ ಆಕಸ್ಮಿಕವಾಗಿ ಗುಂಡು ಹಾರಿದೆ ಎಂದು ಆತ ಹೇಳಿಕೊಂಡಿದ್ದಾನೆ. ಪಿಟ್‌ಬುಲ್ ಶ್ವಾನದ ಮುಂಗಾಲು ಟ್ರಿಗರ್ ಗಾರ್ಡ್‌ನಲ್ಲಿ ಸಿಲುಕಿಕೊಂಡಿದ್ದು, ಆ ಕಾಲು ಎಳೆದಾಗ ಬಂದೂಕಿನಿಂದ ಗುಂಡು ಹಾರಿದೆ. ಆ ಗುಂಡು ಸೀದಾ ಹೋಗಿ ಜೆರಾಲ್ಡ್ ಕಿರ್ಕ್‌ವುಡ್‌ನ ತೊಡೆಯನ್ನು ಸೀಳಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ʼಆ ವ್ಯಕ್ತಿ ತನ್ನ ಗೆಳತಿಯೊಂದಿಗೆ ಹಾಸಿಗೆಯಲ್ಲಿ ಮಲಗಿದ್ದಾಗ ತನ್ನ ಸಾಕುನಾಯಿ ಪಿಟ್‌ಬುಲ್ ಗುಂಡು ಹಾರಿಸಿದೆʼ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ವಿಚಿತ್ರ ಪ್ರಕರಣ ಅನೇಕರನ್ನು ದಿಗ್ಭ್ರಮೆಗೊಳಿಸಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:33 am, Mon, 17 March 25