Viral: ಬಿಸಿ ಕಾಫಿ ಬಿದ್ದು ಸುಟ್ಟು ಹೋದ ತೊಡೆ ಭಾಗ; ಸಂತ್ರಸ್ತನಿಗೆ 415 ಕೋಟಿ ರೂ. ಪರಿಹಾರ ನೀಡುವಂತೆ ಸ್ಟಾರ್‌ಬಕ್ಸ್‌ಗೆ ಆದೇಶ ನೀಡಿದ ಕೋರ್ಟ್‌

| Updated By: ಅಕ್ಷತಾ ವರ್ಕಾಡಿ

Updated on: Mar 16, 2025 | 3:31 PM

ಸ್ಟಾರ್‌ಬಕ್ಸ್‌ನ ಬಿಸಿ ಕಾಫಿ ತೊಡೆ ಭಾಗದ ಮೇಲೆ ಬಿದ್ದ ಗಂಭೀರ ಗಾಯಗೊಂಡಿದ್ದ ಡ್ರೈವರ್‌ಗೆ 50 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 415 ಕೋಟಿ ರೂ. ಪರಿಹಾರ ನೀಡಬೇಕೆಂದು ಸ್ಟಾರ್‌ಬಕ್ಸ್‌ಗೆ ಆದೇಶ ನೀಡಿದೆ. ಕಾಫಿ ಮುಚ್ಚಳವನ್ನು ಸರಿಯಾಗಿ ಮುಚ್ಚದೆ ಕೊಟ್ಟಿದ್ದರಿಂದ ಬಿಸಿ ಕಾಫಿ ತೊಡೆ ಮೇಲೆ ಬಿದ್ದಿದ್ದು, ಇದರಿಂದ ಆ ವ್ಯಕ್ತಿಯ ಜನನಾಂಗಕ್ಕೂ ಗಾಯಗಳಾಗಿದ್ದವು. 2020 ರಲ್ಲಿ ಈ ಕೇಸ್‌ ಕೋರ್ಟ್‌ ಮೆಟ್ಟಿಲೇರಿದ್ದು, ಇದೀಗ ನ್ಯಾಯಾಲಯ ಸಂತ್ರಸ್ತನಿಗೆ ಪರಿಹಾರ ನೀಡಬೇಕೆಂದು ಆದೇಶಿಸಿದೆ.

Viral: ಬಿಸಿ ಕಾಫಿ ಬಿದ್ದು ಸುಟ್ಟು ಹೋದ ತೊಡೆ ಭಾಗ; ಸಂತ್ರಸ್ತನಿಗೆ 415 ಕೋಟಿ ರೂ.  ಪರಿಹಾರ ನೀಡುವಂತೆ ಸ್ಟಾರ್‌ಬಕ್ಸ್‌ಗೆ ಆದೇಶ ನೀಡಿದ ಕೋರ್ಟ್‌
Starbucks Fined Rs 415 Crore
Follow us on

ಅಮೆರಿಕ, ಮಾ. 16; ಕೆಲವೊಂದು ಬಾರಿ ಗೊತ್ತಿಲ್ಲದೆ ಮಾಡೋ ಸಣ್ಣ ತಪ್ಪಿಗೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈ ಮಾತಿಗೆ ನಿದರ್ಶನದಂತಿರುವ ಘಟನೆಯೊಂದು ಇದೀಗ ನಡೆದಿದ್ದು, ಗೊತ್ತಿಲ್ಲದೆ ಆದಂತಹ ತಪ್ಪಿಗೆ ಸ್ಟಾರ್‌ಬಕ್ಸ್‌ (Starbuks) ಕಾಫಿ ಸಂಸ್ಥೆ ದೊಡ್ಡ ಮೊತ್ತದ ಬೆಲೆ ತೆರಬೇಕಾಗಿದೆ. ಹೌದು ಸ್ಟಾರ್‌ಬಕ್ಸ್‌ನ ಬಿಸಿ (Hot) ಕಾಫಿ (coffee) ತೊಡೆ ಭಾಗದ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಗೆ 50 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 415 ಕೋಟಿ ರೂ. ಪರಿಹಾರ (compensation) ನೀಡಬೇಕೆಂದು ಸ್ಟಾರ್‌ಬಕ್ಸ್‌ಗೆ ಕೋರ್ಟ್ (court) ಆದೇಶ ನೀಡಿದೆ. ಕಾಫಿ ಮುಚ್ಚಳವನ್ನು ಸರಿಯಾಗಿ ಮುಚ್ಚದೆ ಕೊಟ್ಟಿದ್ದರಿಂದ ಬಿಸಿ ಕಾಫಿ ತೊಡೆ ಮೇಲೆ ಬಿದ್ದಿದ್ದು, ಪರಿಣಾಮ ಆ ವ್ಯಕ್ತಿಯ ಜನನಾಂಗಕ್ಕೂ ಗಾಯಗಳಾಗಿದ್ದವು. 2020 ರಲ್ಲಿ ಈ ಕೇಸ್‌ ಕೋರ್ಟ್‌ ಮೆಟ್ಟಿಲೇರಿದ್ದು, ಇದೀಗ ನ್ಯಾಯಾಲಯ ಸಂತ್ರಸ್ತನಿಗೆ ಪರಿಹಾರ ನೀಡಬೇಕೆಂದು ಆದೇಶಿಸಿದೆ.

ಈ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾ ನಗರದಲ್ಲಿ ನಡೆದಿದ್ದು, ಸ್ಟಾರ್‌ಬಕ್ಸ್‌ನ ಬಿಸಿ ಕಾಫಿ ತೊಡೆ ಭಾಗದ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಗೆ 50 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 415 ಕೋಟಿ ರೂ. ಪರಿಹಾರ ನೀಡಬೇಕೆಂದು ಸ್ಟಾರ್‌ಬಕ್ಸ್‌ ಕಂಪೆನಿಗೆ ಕೋರ್ಟ್ ಆದೇಶ ನೀಡಿದೆ.

ಏನಿದು ಘಟನೆ?

ಡೆಲಿವರಿ ವಾಹನದ ಚಾಲಕ ಲಾಸ್ ಏಂಜಲೀಸ್‌ನ ಸ್ಟಾರ್‌ಬಕ್ಸ್ ಔಟ್‌ಲೆಟ್‌ನಲ್ಲಿ ಕಾಫಿ ಖರೀದಿಸಿದ್ದರು. ಆದರೆ ಕಾಫಿ ಕಪ್‌ನ ಮುಚ್ಚಳವನ್ನು ಸರಿಯಾಗಿ ಮುಚ್ಚದೆ ಕೊಟ್ಟಿದ್ದರಿಂದ ಬಿಸಿ ಕಾಫಿ ಚಾಲಕನ ತೊಡೆ ಭಾಗದ ಮೇಲೆ ಬಿದ್ದಿದೆ. ಪರಿಣಾಮ ತೊಡೆ ಭಾಗ ಸುಟ್ಟು ಹೋಗಿದ್ದವು ಅಷ್ಟೇ ಅಲ್ಲದೆ ಅವರ ಜನನಾಂಗಕ್ಕೂ ಗಾಯಗಳಾಗಿದ್ದವು. ಕಾಫಿ ಕಪ್‌ ಸರಿಯಾಗಿ ಮುಚ್ಚದೆ ನಿರ್ಲಕ್ಷ್ಯ ತೋರಿದ ಸ್ಟಾರ್‌ಬಕ್ಸ್‌ ವಿರುದ್ಧ ಡ್ರೈವರ್‌ ಮೈಕಲ್‌ ಗಾರ್ಸಿಯಾ 2020 ರಲ್ಲಿ ಕ್ಯಾಲಿಫೋರ್ನಿಯಾ ಸುಪೀರಿಯರ್‌ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು.

ಇದನ್ನೂ ಓದಿ
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ಮಾಧ್ಯಮ ವರದಿಗಳ ಪ್ರಕಾರ, ಗಾರ್ಸಿಯಾ ಅವರ ವಕೀಲ ಮೈಕೆಲ್ ಪಾರ್ಕರ್ ಅವರು ʼತಮ್ಮ ಕಕ್ಷಿದಾರ ಗಾರ್ಸಿಯಾ ಆರ್ಡರ್ ಮಾಡಿದ್ದ ಕಾಫಿಯನ್ನು ಸ್ಟಾರ್‌ಬಕ್ಸ್‌ ನೀಡಿದಾಗ, ಅದರ ಮುಚ್ಚಳವನ್ನು ಸರಿಯಾಗಿ ಮುಚ್ಚಿರಲಿಲ್ಲ ಎಂದು ಆರೋಪಿಸಿದ್ದಾರೆ. ಇದರಿಂದಾಗಿ ಬಿಸಿ ಕಾಫಿ ಗಾರ್ಸಿಯಾ ಮೇಲೆ ಚೆಲ್ಲಿತು. ಇದು ಗಾರ್ಸಿಯಾಗೆ ದೈಹಿಕ ನೋವನ್ನು ಮಾತ್ರವಲ್ಲದೆ ಮಾನಸಿಕ ನೋವನ್ನೂ ಉಂಟುಮಾಡಿತು ವಾದಿಸಿದ್ದಾರೆ. ಆರೋಪ, ಪ್ರತ್ಯಾರೋಪವನ್ನು ಆಲಿಸಿದ ಬಳಿಕ ಇದೀಗ ಕೋರ್ಟ್ ಸ್ಟಾರ್‌ಬಕ್ಸ್‌ಗೆ ಸಂತ್ರಸ್ತ ಮೈಕೆಲ್ ಗಾರ್ಸಿಯಾ ಅವರಿಗೆ 50 ಮಿಲಿಯನ್ ಡಾಲರ್‌ ಅಂದರೆ ಸುಮಾರು 415 ಕೋಟಿ ರೂ. ಪರಿಹಾರ ಹಣವನ್ನು ಪಾವತಿಸಲು ಆದೇಶಿಸಿದೆ.

ಇದನ್ನೂ ಓದಿ: ಹನಿಮೂನ್ ನಲ್ಲಿದ್ದಾಗ ಹಡಗು ಮುಳುಗಡೆ, ಒಂದೇ ಒಂದು ಲೈಫ್ ಜಾಕೆಟ್‌ನಿಂದ ಬದುಕುಳಿದ ಬ್ರೆಜಿಲಿಯನ್ ದಂಪತಿಗಳು

ಕಂಪನಿ ಏನು ಹೇಳಿದೆ?:

ನ್ಯಾಯಾಲಯದ ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಸ್ಟಾರ್‌ಬಕ್ಸ್ ಹೇಳಿದೆ. “ನಾವು ಗಾರ್ಸಿಯಾ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ, ಆದರೆ ಈ ಅವಘಡಕ್ಕೆ ನಾವೇ ಕಾರಣರು ಎಂಬ ತೀರ್ಪುಗಾರರ ತೀರ್ಪನ್ನು ನಾವು ಒಪ್ಪುವುದಿಲ್ಲ, ಪರಿಹಾರ ಹಣದ ಮೊತ್ತ ತುಂಬಾ ಹೆಚ್ಚಾಗಿದೆ ಎಂದು ನಾವು ಭಾವಿಸುತ್ತೇವೆ, ಕಂಪನಿಯು ತನ್ನ ಅಂಗಡಿಗಳಲ್ಲಿ ಬಿಸಿ ಪಾನೀಯಗಳ ನಿರ್ವಹಣೆ ಸೇರಿದಂತೆ ಅತ್ಯುನ್ನತ ಸುರಕ್ಷತಾ ಮಾನದಂಡಗಳಿಗೆ ಯಾವಾಗಲೂ ಬದ್ಧವಾಗಿದೆ” ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ