Video: ಬರ್ಗರ್ ತಿನ್ನುತ್ತಿದ್ದ ವೇಳೆ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು, ಪ್ರಾಣಾಪಾಯದಿಂದ ಪಾರಾದ ಯೂಟ್ಯೂಬರ್ ಜೋಡಿ

ಬದುಕು ಎಂದರೆ ಹೀಗೆ ಅಲ್ಲವೇ, ಯಾರ ಬದುಕಿನಲ್ಲಿ ಯಾವಾಗ, ಏನು ನಡೆಯುತ್ತದೆ ಎಂದು ಹೇಳಲು ಅಸಾಧ್ಯ. ಆದರೆ ಈ ದೃಶ್ಯ ನೋಡಿದ ಮೇಲೆ ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ಕುಳಿತು ಆಹಾರ ಸೇವಿಸುವುದು ಎಷ್ಟು ಸೇಫ್ ಎಂದು ಅನಿಸಿದ್ರೂ ತಪ್ಪಿಲ್ಲ. ಹೋಟೆಲ್‌ನಲ್ಲಿ ಕುಳಿತು ಆಹಾರ ಸವಿಯುತ್ತಿದ್ದ ಯೂಟ್ಯೂಬರ್ ಜೋಡಿಯ ಕಣ್ಣ ಮುಂದೆ ಸಾವು ರಫ್ ಎಂದು ಹಾದು ಹೋದಂತೆ ಆಗಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬರ್ಗರ್ ತಿನ್ನುತ್ತಿದ್ದ ವೇಳೆ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು, ಪ್ರಾಣಾಪಾಯದಿಂದ ಪಾರಾದ ಯೂಟ್ಯೂಬರ್ ಜೋಡಿ
ವೈರಲ್‌ ವಿಡಿಯೋ
Image Credit source: Instagram

Updated on: Aug 21, 2025 | 5:07 PM

ಅಮೆರಿಕ, ಆಗಸ್ಟ್ 21: ಬದುಕು ನೀರಿನ ಮೇಲಿನ ಗುಳ್ಳೆಯ ಹಾಗೆ. ಇವತ್ತಿಂದ ವ್ಯಕ್ತಿಯೂ ನಾಳೆ ಇರುತ್ತಾನೋ ಅನ್ನೋದು ಬಿಡಿ, ಅರೇ ಘಳಿಗೆ ಇರುತ್ತಾನೋ ಎಂದು ಹೇಳುವುದು ಕಷ್ಟ. ಈ ಬದುಕು ಹೇಗೂ ಯೂಟರ್ನ್ ಹೊಡೆಯಬಹುದು. ಖುಷಿಯಲ್ಲಿದ್ದ ಕ್ಷಣದಲ್ಲಿ ಕಹಿ ಘಟನೆಗಳು ನಡೆದು, ಆ ಕ್ಷಣದ ಖುಷಿಯೇ ಹಾಳಾಗಬಹುದು. ಈ ಯೂಟ್ಯೂಬರ್ ಜೋಡಿಗೂ ಹಾಗೆಯೆ ಆಗಿದೆ. ರೆಸ್ಟೋರೆಂಟ್ ನಲ್ಲಿ (Restaurant) ಇಬ್ಬರೂ ಕುಳಿತು ಆಹಾರ ಸೇವಿಸುತ್ತಿದ್ದ ವೇಳೆ ಅವರ ಕಡೆಗೆ ಕಾರೊಂದು ನುಗ್ಗಿ ಬಂದಿದ್ದು, ಸಾವಿನ ದವಡೆಯಿಂದ ಪಾರಾಗಿದ್ದಾರೆ. ಈ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆಯೂ  ಅಮೆರಿಕದ ಟೆಕ್ಸಾಸ್‌ನ ಟೈಲರ್‌ನಲ್ಲಿ (America) ನಡೆದಿದೆ ಎನ್ನಲಾಗಿದೆ. ಈ ಭಯಾನಕ ದೃಶ್ಯದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ರೆಸ್ಟೋರೆಂಟ್‌ಗೆ ಡಿಕ್ಕಿ ಹೊಡೆದ ಕಾರು

ಇದನ್ನೂ ಓದಿ
ಪಾರ್ಸೆಲ್ ನೀಡಲು ಬಂದ ಪೋಸ್ಟ್ ಮ್ಯಾನ್ ಮಾಡಿದ ಕೆಲಸಕ್ಕೆ ವಿದೇಶಿ ಮಹಿಳೆ ಫಿದಾ
ಭಯದಲ್ಲಿ ಹಾವನ್ನೇ ಸಾಯಿಸಿ ಆಸ್ಪತ್ರೆಗೆ ಓಡೋಡಿ ಹೋದ ಯುವಕ
ವಿಡಿಯೋ: ಮಧ್ಯರಾತ್ರಿ ಎಟಿಎಂ ಕಳವು ಮಾಡ್ತಿದ್ದವನ ಹೆಡೆಮುರಿ ಕಟ್ಟಿದ ಪೊಲೀಸ್
ವೆಜ್ ಬಿರಿಯಾನಿಯಲ್ಲಿ ಪತ್ತೆಯಾಯ್ತು ಮೂಳೆ, ಇಲ್ಲಿದೆ ಅಸಲಿ ವಿಚಾರ

NinaUnrated ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು ಈ ಕ್ಷಣ ಮಾತ್ರ ನಮ್ಮದು. ನಾವು ಊಟ ಮಾಡುವಾಗ ಕಾರೊಂದು ಕಿಟಕಿಗೆ ಡಿಕ್ಕಿ ಹೊಡೆದಿದೆ. ಸಾವಿನ ಅನುಭವದ ಸಮೀಪದಲ್ಲಿತ್ತು ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ. ಫುಡ್ ವ್ಲಾಗರ್ಸ್ ನೀನಾ ಸ್ಯಾಂಟಿಯಾಗೊ ಮತ್ತು ಪ್ಯಾಟ್ರಿಕ್ ಬ್ಲಾಕ್‌ವುಡ್ ಫುಡ್‌ ವ್ಲಾಗ್‌ ಆಹಾರದ ಬಗ್ಗೆ ವಿಮರ್ಶೆ ನೀಡಲು ಈ ರೆಸ್ಟೋರೆಂಟ್‌ಗೆ ತೆರಳಿದ್ದ ಈ ಘಟನೆ ಸಂಭವಿಸಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ರೆಸ್ಟೋರೆಂಟ್‌ಗೆ ತೆರಳಿ ವಿವಿಧ ಬಗೆಯ ಆಹಾರ ಆರ್ಡರ್ ಮಾಡಿ ರುಚಿ ಸವಿಯುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಅವರು ಕುಳಿತಿದ್ದ ರೆಸ್ಟೋರೆಂಟ್‌ನ ಮುಂಭಾಗದ ಗೋಡೆಗೆ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗಾಜು ಪುಡಿಯಾಗಿದ್ದು, ಅಲ್ಲೇ ಕುಳಿತಿದ್ದ ನೀನಾ ಸ್ಯಾಂಟಿಯಾಗೊ ಮತ್ತು ಪ್ಯಾಟ್ರಿಕ್ ಬ್ಲಾಕ್‌ವುಡ್ ಒಂದು ಕ್ಷಣ ಭಯದಲ್ಲಿ ಬೆಚ್ಚಿ ಬಿದ್ದಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಕಿಟಕಿ ಪಕ್ಕ ಕುಳಿತಿದ್ದರಿಂದ ಈ ದಂಪತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.

ಇದನ್ನೂ ಓದಿ:Video: ರೆಸ್ಟೋರೆಂಟ್‌ನ ವೆಜ್ ಬಿರಿಯಾನಿಯಲ್ಲಿ ಪತ್ತೆಯಾಯ್ತು ಮೂಳೆ, ಇದರ ಅಸಲಿ ವಿಚಾರ ಬೇರೇನೇ ಇದೇ ನೋಡಿ

ಈ ವಿಡಿಯೋ ಹದಿನಾರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಎಲ್ಲವೂ ದೇವರ ಕೈಯಲ್ಲಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಈ ರೆಸ್ಟೋರೆಂಟ್ ಇರುವುದು ಎಲ್ಲಿ. ನನ್ನ ಮಾಜಿ ಪ್ರೇಯಸಿಯನ್ನು ಇಲ್ಲಿಗೊಮ್ಮೆ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ದೇವರ ದಯೆಯಿಂದ ಜೀವಕ್ಕೇನು ತೊಂದರೆಯಾಗಿಲ್ಲ, ಇದು ನಿಜವಾದ ಸವಾಲು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Thu, 21 August 25