Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಟ್ರ್ಯಾಕಿಂಗ್ ಆ್ಯಪ್ ಬಳಸಿ ಮಗನ ಅಕ್ರಮ ಸಂಬಂಧ ಪತ್ತೆ ಮಾಡಿದ ತಾಯಿ

ಅಮೆರಿಕಾದ ತಾಯಿಯೊಬ್ಬಳು ತನ್ನ ಮಗನ ಅಕ್ರಮ ಸಂಬಂಧ ಪತ್ತೆ ಮಾಡಲು ಲೈಫ್ 360 ಎಂಬ ಅಪ್ಲಿಕೇಶನ್ ಬಳಸಿದ್ದಾರೆ. ಈ ಮೂಲಕ ಲೈಂಗಿಕ ಸಂಪರ್ಕ ಹೊಂದಿದ್ದ ಮಗನ ಇರುವಿಕೆಯನ್ನು ಪತ್ತೆ ಹಚ್ಚಿದ ಘಟನೆ ಅಮೇರಿಕಾದಲ್ಲಿ ನಡೆದಿದೆ. ತಾಯಿ ತನ್ನ 18 ವರ್ಷದ ಮಗ ಮತ್ತು 26 ವರ್ಷದ ಸೌತ್ ಮೆಕ್ಲೆನ್ಬರ್ಗ್ ಹೈಸ್ಕೂಲ್ ಶಿಕ್ಷಕಿ ಗೇಬ್ರಿಯೆಲಾ ಕಾರ್ಟಾಯಾ- ನ್ಯೂಫೆಲ್ಡ್ ಅವರನ್ನು ಕಾರಿನಲ್ಲಿರುವುದನ್ನು ಪತ್ತೆ ಮಾಡಿದ್ದಾರೆ. ವಿದ್ಯಾರ್ಥಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪದ ಮೇರೆಗೆ ಶಿಕ್ಷಕಿ ಜೈಲು ಪಾಲಾಗಿದ್ದಾಳೆ.

Viral News: ಟ್ರ್ಯಾಕಿಂಗ್ ಆ್ಯಪ್ ಬಳಸಿ ಮಗನ ಅಕ್ರಮ ಸಂಬಂಧ ಪತ್ತೆ ಮಾಡಿದ ತಾಯಿ
ವೈರಲ್​​ ಸುದ್ದಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 18, 2023 | 12:47 PM

ಅಮೆರಿಕಾದ ತಾಯಿಯೊಬ್ಬಳು ತನ್ನ ಮಗನ ಅಕ್ರಮ ಸಂಬಂಧ ಪತ್ತೆ ಮಾಡಲು ಲೈಫ್ 360 ಅಪ್ಲಿಕೇಶನ್​​​ನ್ನು ಬಳಸಿ ಮಗ ಲೈಂಗಿಕ ಸಂಪರ್ಕ ಹೊಂದಿರುವುದನ್ನು ಪತ್ತೆ ಹಚ್ಚಿದ ಘಟನೆ ಅಮೇರಿಕಾದಲ್ಲಿ ನಡೆದಿದೆ. ಈ ವಿಷಯ ಎಲ್ಲೆಡೆ ವೈರೆಲ್ ಆಗಿದ್ದು ಆ ಅಪ್ಲಿಕೇಶನ್ ಬಗ್ಗೆ ತಿಳಿದು ಕೊಳ್ಳಲು ಜನರು ಉತ್ಸುಕರಾಗಿದ್ದಾರೆ. ತನ್ನ ಮಗ ಅವನ ಶಿಕ್ಷಕಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಈ ಬಗ್ಗೆ ಅನುಮಾನಗೊಂಡ ತಾಯಿ 18 ವರ್ಷದ ಮಗ ಮತ್ತು 26 ವರ್ಷದ ಸೌತ್ ಮೆಕ್ಲೆನ್ಬರ್ಗ್ ಹೈಸ್ಕೂಲ್ ಶಿಕ್ಷಕಿ ಗೇಬ್ರಿಯೆಲಾ ಕಾರ್ಟಾಯಾ- ನ್ಯೂಫೆಲ್ಡ್ ಅವರನ್ನು ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸಿರುವುದನ್ನು ಕಂಡು ಹಿಡಿದಿದ್ದಾರೆ. ವಿದ್ಯಾರ್ಥಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಮೇರೆಗೆ ಶಿಕ್ಷಕಿ ಜೈಲು ಪಾಲಾಗಿದ್ದಾಳೆ.

ಏನಿದು ಅಪ್ಲಿಕೇಶನ್? ವಿಶೇಷತೆ ಏನು?

ಲೈಫ್ 360 ಅಪ್ಲಿಕೇಶನ್​​ನನ್ನು 2008ರಲ್ಲಿ ಪರಿಚಯಿಸಲಾಗಿದ್ದು, ಸಾಮಾಜಿಕ ನೆಟ್ವರ್ಕಿಂಗ್ ಅಪ್ಲಿಕೇಶನ್ ಇದಾಗಿದೆ, ಇದು ಸ್ಥಳ ಆಧಾರಿತ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ ಸ್ನೇಹಿತರು ಮತ್ತು ಕುಟುಂಬದವರ ಇರುವಿಕೆಯನ್ನು ಹಂಚಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ.

ಅದೇ ರೀತಿ ಈ ಅಪ್ಲಿಕೇಶನ್​​ನ್ನು ಅಧಿಸೂಚನೆಯನ್ನು ಬಳಸಿಕೊಂಡ ತಾಯಿ ಉದ್ಯಾನವನಕ್ಕೆ ಭೇಟಿ ನೀಡಿ ತನ್ನ ಮಗನ ರಾಸಲೀಲೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅವರು ಇರುವ ವಾಹನದ ಫೋಟೋಗಳನ್ನು ಸೆರೆ ಹಿಡಿದು ಆ ದೃಶ್ಯವನ್ನು ಸಂಬಂಧಪಟ್ಟ ಇಲಾಖೆಗೆ ನೀಡುವ ಮೂಲಕ ದೂರು ದಾಖಲಿಸಿದ್ದಾರೆ. ತರುವಾಯ, ಅವರು ಘಟನೆಯನ್ನು ಸ್ವ ವಿವರವಾಗಿ ವರದಿ ಮಾಡಿ, ಅಧಿಕಾರಿಗಳನ್ನು ಸಂಪರ್ಕಿಸಿ ಕಾನೂನು ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಿ ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಆ ತಾಯಿ ಷಾರ್ಲೆಟ್- ಮೆಕ್ಲೆನ್ಬರ್ಗ್ ಪೊಲೀಸರಿಗೆ ತಿಳಿಸಿರುವಂತೆ, ತನ್ನ ಮಗನ ಅನುಚಿತ ಸಂಬಂಧ ಮತ್ತು ಸುತ್ತ ಮುತ್ತು ಅವನ ಬಗ್ಗೆ ಬರುತ್ತಿದ್ದ ವದಂತಿಗಳನ್ನು ಗಮನಿಸಿ ಹಾಗೂ ಅವನು ಕಾಲೇಜಿಗೆ ಸ್ಕೂಲ್​​​ಗೆ ಹೋಗದೇ ಇರುವ ಬಗ್ಗೆ ಅನುಮಾನಗೊಂಡು ತಾಯಿ ಈ ರೀತಿ ಮಾಡಿದ್ದಾರೆ. ವಿಜ್ಞಾನ ತರಗತಿಯ ಶಿಕ್ಷಕಿಯಾಗಿರುವ ಕಾರ್ಟಾಯಾ- ನ್ಯೂಫೆಲ್ಡ್ ವಿದ್ಯಾರ್ಥಿಗಳನ್ನು ಹೀಗೆ ಬಳಸಿಕೊಳ್ಳುತ್ತಿದ್ದಾಳೆ. ಹದಿಹರೆಯದ ಮಕ್ಕಳನ್ನು ಆಕೆ ದಾರಿ ತಪ್ಪಿಸುತ್ತಿದ್ದಾಳೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಈ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಕರ್ಮ ಯಾರನ್ನೂ ಬಿಡಲ್ಲ: ಲಿಫ್ಟ್ ಒಳಗಡೆ ಮೂತ್ರ ವಿಸರ್ಜನೆ ಮಾಡಿದ ಬಾಲಕನ ಗತಿ ಏನಾಯ್ತು ನೋಡಿ?

ಮಾಹಿತಿಯ ಪ್ರಕಾರ, ಲೈಫ್ 360 ಸರಿಸುಮಾರು 50 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ಅಪ್ಲಿಕೇಶನ್ 300 ಮಿಲಿಯನ್ ಆದಾಯವನ್ನು ಗಳಿಸುತ್ತದೆ. ಇದು ಮಾರುಕಟ್ಟೆಯಲ್ಲಿ ಗಮನಾರ್ಹವಾದ ಬಳಕೆ ಹಾಗೂ ಪ್ರಚಾರವನ್ನು ಪಡೆದಿದೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ