Viral Video: ಬೆಂಗಳೂರಿನ ಅಪಾರ್ಟ್‌ಮೆಂಟ್​​ನಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ, ಹೇಗಿದೆ ನೊಡಿ?   

ಹೆಚ್ಚುತ್ತಿರುವ ಬಿಸಿಲ ತಾಪ, ಕುಸಿಯುತ್ತಿರುವ ಅಂತರ್ಜಲ ಮಟ್ಟದಿಂದಾಗಿ ನೀರಿಗೆ ಹಾಹಾಕಾರ ಶುರವಾಗಿದೆ. ಅದರಲ್ಲೂ  ಈ ಬಾರಿಯ ಬೇಸಿಗೆಯಲ್ಲಿ ಬೆಂಗಳೂರು ನಗರ ತೀವ್ರ ಮಟ್ಟದ ನೀರಿನ ಅಭಾವವನ್ನು ಎದುರಿಸಿತ್ತು.   ಇದಕ್ಕೆ ಪರಿಹಾರ ಎಂಬಂತೆ ಇಲ್ಲೊಂದು ಅಪಾರ್ಟ್‌ಮೆಂಟ್‌ ಮಳೆ ನೀರು ಕೊಯ್ಲು ಪದ್ಧತಿಯ ಮೊರೆ ಹೋಗಿದ್ದು, ಜಲ ಮರುಪೂರಣಕ್ಕೆ ಬೃಹತ್‌ ಇಂಗು ಗುಂಡಿ ತೋಡಿದೆ. ಈ ಕುರಿತ ವಿಡಿಯೋವೊಂದದು ವೈರಲ್‌ ಆಗಿದೆ. 

Viral Video: ಬೆಂಗಳೂರಿನ ಅಪಾರ್ಟ್‌ಮೆಂಟ್​​ನಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ, ಹೇಗಿದೆ ನೊಡಿ?   
Edited By:

Updated on: Jun 06, 2024 | 3:53 PM

ದಿನದಿಂದ ದಿನಕ್ಕೆ ನಗರ ಪ್ರದೇಶ ಅತೀ ವೇಗವಾಗಿ ಬೇಳೆಯುತ್ತಿದ್ದು, ನೀರಿನ ಸಮಸ್ಯೆ ಸಹ ಉಲ್ಬಣಗೊಳ್ಳುತ್ತಿದೆ. ಅದರಲ್ಲೂ ಹೆಚ್ಚುತ್ತಿರುವ ಬಿಸಿಲ ತಾಪ, ಕುಸಿಯುತ್ತಿರುವ ಅಂತರ್ಜಲ ಮಟ್ಟದಿಂದಾಗಿ ನೀರಿಗೆ ಹಾಹಾಕಾರ ಶುರುವಾಗಿದೆ.  ಇಂತಹ ಪರಿಸ್ಥಿತಿಯಲ್ಲಿ  ಇಲ್ಲೊಂದು ಅಪಾರ್ಟ್‌ಮೆಂಟ್‌ ಮಳೆ ನೀರು ಪೋಲಾಗದಂತೆ ಮಳೆ ಕೊಯ್ಲು ಪದ್ದತಿಯನ್ನು ಅಳವಡಿಸಿದ್ದು, ಜಲ  ಮರುಪೂರಣಕ್ಕಾಗಿ  ಬೃಹತ್‌ ಬಾವಿಯೊಂದನ್ನು ನಿರ್ಮಾಣ ಮಾಡಿದೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ  ವೈರಲ್‌ ಆಗಿದೆ.

ಬೆಂಗಳೂರಿನಲ್ಲಿನ ದೊಮ್ಮಲೂರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಮಳೆಗಾಲದಲ್ಲಿ ಜಲಮರುಪೂರಣಕ್ಕಾಗಿ  ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಮೇಲ್ಛಾವಣಿಯಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಜಲ ಮರುಪೂರಣ ಮಾಡಲು ರೀಚಾರ್ಜ್‌ ಬಾವಿಯನ್ನು ನಿರ್ಮಾಣ ಮಾಡಿದೆ. ಈ ಇಂಗು ಬಾವಿಯನ್ನು ಮುನಿಯಪ್ಪ ಮತ್ತು ಅವರ ತಂಡದವರು ನಿರ್ಮಾಣ ಮಾಡಿದ್ದು, ಒಂದೊಳ್ಳೆ ಕಾರ್ಯ ಮಾಡಿದ್ದಕ್ಕಾಗಿ ಅಪಾರ್ಟ್‌ಮೆಂಟ್‌ ಸಂಘದ ವತಿಯಿಂದ ಮುನಿಯಪ್ಪ ಅವರಿಗೆ ಸನ್ಮಾನ ಕೂಡಾ ಮಾಡಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಶೇಷ ವಿಡಿಯೋವೊಂದನ್ನು zenraiman ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್‌ ವಿಡಿಯೋದಲ್ಲಿ ಜಲಪೂರಣಕ್ಕಾಗಿ ಅಪಾರ್ಟ್‌ಮೆಂಟ್‌ನಲ್ಲಿ ಬಾವಿ ತೋಡಿದಂತಹ ಮುನಿಯಪ್ಪ ಅವರಿಗೆ  ಅಲ್ಲಿನ ಜನರು ಶಾಲು ಹೊದಿಸಿ ಸನ್ಮಾನ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ರಾಜೀನಾಮೆಗೆ ಒತ್ತಾಯ ಹೆಚ್ಚಾಗುತ್ತಿದ್ದಂತೆ, ಮೊಬೈಲ್‌ ಸ್ವಿಚ್‌-ಆಫ್‌ ಮಾಡಿದ್ರಾ ಶಾಸಕ ಪ್ರದೀಪ್‌ ಈಶ್ವರ್? 

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 74 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮುನಿಯಪ್ಪ ಅವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ