ಆಹ್ವಾನವಿಲ್ಲದೆ ಮದುವೆಯೂಟಕ್ಕೆ ಬಂದ ಎಂಬಿಎ ವಿದ್ಯಾರ್ಥಿಗೆ ಪಾತ್ರೆ ತೊಳೆಯುವ ಶಿಕ್ಷೆ

| Updated By: ಶ್ರೀದೇವಿ ಕಳಸದ

Updated on: Dec 02, 2022 | 3:06 PM

Madhya Pradesh : ‘ಎಂಬಿಎ ಓದುತ್ತಿರುವ ನಿನಗೆ ಪೋಷಕರು ಹಣ ಕಳಿಸುವುದಿಲ್ಲವೆ?; ‘ಅತಿಥಿ ದೇವೋ ಭವ’ ಎಂದು ಸಾರುತ್ತಲೇ ಇರುವ ಸಂಸ್ಕಾರವಂತ ದೇಶ ನಮ್ಮದು. ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆಯ ವಿಡಿಯೋ ಇಲ್ಲಿದೆ.

ಆಹ್ವಾನವಿಲ್ಲದೆ ಮದುವೆಯೂಟಕ್ಕೆ ಬಂದ ಎಂಬಿಎ ವಿದ್ಯಾರ್ಥಿಗೆ ಪಾತ್ರೆ ತೊಳೆಯುವ ಶಿಕ್ಷೆ
ತಟ್ಟೆ ತೊಳೆಯುತತಿರುವ ಎಂಬಿಎ ವಿದ್ಯಾರ್ಥಿ
Follow us on

Viral Video : ಮದುವೆ ಎಂದಮೇಲೆ ಅದು ಖಾಸಗಿ ಕಾರ್ಯಕ್ರಮ. ಆಹ್ವಾನಿತರಿಗೆ ಮಾತ್ರ ಎನ್ನುವುದು ಅಲಿಖಿತ ನಿಯಮ. ಆದರೆ ಆಹ್ವಾನವಿರದಿದ್ದರೂ ಮದುವೆಗೆ ಬಂದವರಿಗೆ ಉಪಚರಿಸಬೇಕಾದ ಕರ್ತವ್ಯ ಮತ್ತು ವಿನಮ್ರತೆ ಆಯಾ ಕುಟುಂಬದವರಿಗೆ ಇರಬೇಕು. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಆಹ್ವಾನವಿರದಿದ್ದರೂ ಊಟಕ್ಕೆ ಬಂದ ಈ ಎಂಬಿಎ ವಿದ್ಯಾರ್ಥಿಗೆ ಮದುವೆಮನೆಯವರು ಶಿಕ್ಷೆ ವಿಧಿಸಿದ್ದಾರೆ. ಯಾವ ಶಿಕ್ಷೆ ಎಂದು ನೀವೇ ಈ ವಿಡಿಯೋದಲ್ಲಿ ನೋಡಿ.

ಈತ ಎಂಬಿಎ ವಿದ್ಯಾರ್ಥಿ. ಉಚಿತವಾಗಿ ಊಟ ಸಿಗುತ್ತದೆ ಎಂಬ ಕಾರಣಕ್ಕೆ ಆಹ್ವಾನವಿಲ್ಲದೆಯೇ ಬಂದಿದ್ದಾನೆ ಎಂದು ಮದುವೆಮನೆಯವರು ಪಾತ್ರೆ ತೊಳೆಯುವ ಶಿಕ್ಷೆ ನೀಡಿದ್ದಾರೆ. ವಿದ್ಯಾರ್ಥಿಯ ಮುಖವನ್ನು ಮರೆಮಾಚಲಾಗಿದೆ. ಹೀಗೆ ಮದುವೆಮನೆಗೆ ನುಗ್ಗಿ ಉಚಿತವಾಗಿ ಊಟ ಮಾಡಬಯಸಿದರೆ ಏನು ಶಿಕ್ಷೆ ಎನ್ನುವುದು ನಿನಗೆ ಗೊತ್ತೇ? ಎಂದು ವಿಡಿಯೋ ಮಾಡುವ ವ್ಯಕ್ತಿ ಕೇಳುತ್ತಾನೆ. ನಂತರ ನಿಮ್ಮ ಮನೆಯಲ್ಲಿ ಹೇಗೆ ಸ್ವಚ್ಛವಾಗಿ ಪಾತ್ರೆ ತೊಳೆಯುತ್ತೀಯೋ ಹಾಗೇ ತೊಳಿ ಎಂದು ಹೇಳುತ್ತಾನೆ. ಆ ಪ್ರಕಾರ ವಿದ್ಯಾರ್ಥಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ.

ಈ ವಿದ್ಯಾರ್ಥಿ ಮೂಲತಃ ಜಬಲ್​ಪುರದವನು. ಎಂಬಿಎ ಓದಲು ಭೋಪಾಲ್​ಗೆ ಬಂದಿದ್ದಾನೆ. ‘ಎಂಬಿಎ ಓದುತ್ತಿರುವ ನಿನಗೆ ನಿಮ್ಮ ಪೋಷಕರು ಹಣ ಕಳಿಸುವುದಿಲ್ಲವೆ? ಹೀಗೆಲ್ಲ ಮಾಡಿ ಜಬಲ್​ಪುರಕ್ಕೆ ಕೆಟ್ಟ ಹೆಸರನ್ನು ತರುತ್ತೀರಿ’ ಎಂದು ವಿಡಿಯೋದಲ್ಲಿ ಈ ವ್ಯಕ್ತಿ ಹೇಳುತ್ತಾನೆ. ಅಷ್ಟಕ್ಕೆ ಬಿಡದೆ, ‘ಪಾತ್ರೆಗಳನ್ನೆಲ್ಲ ತೊಳೆದ ಮೇಲೆ ಏನನ್ನಿಸುತ್ತಿದೆ?’ ಎಂದು ಕೇಳಿದಾಗ ಆ ವಿದ್ಯಾರ್ಥಿ, ‘ಪುಕ್ಕಟೆಯಾಗಿ ಊಟ ಮಾಡಿದ್ದಕ್ಕೆ ಪ್ರತಿಯಾಗಿ ಈ ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾನೆ.

ಇದನ್ನೂ ನೋಡಿ : ಹಳ್ಳಿಮದುವೆಯ ಕಾರಂಜಿಯಲ್ಲಿ ತಟ್ಟೆಗಳನ್ನು ತೊಳೆದುಕೊಂಡ ಅತಿಥಿಗಳು

ಎಲ್ಲಿ ಹೋಯಿತು ನಿಮ್ಮ ಅತಿಥಿ ದೇವೋ ಭವ ಸ್ಲೋಗನ್​ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಒಂದು ಊಟಕ್ಕಾಗಿ ಇಷ್ಟು ದೊಡ್ಡ ಶಿಕ್ಷೆ ನೀಡುವುದೆ? ಇದು ಸರಿಯಲ್ಲ ಎನ್ನುತ್ತಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ, ಸಾರ್ವಜನಿಕ ಮತ್ತು ಖಾಸಗೀ ಕಾರ್ಯಕ್ರಮಗಳ ಬಗ್ಗೆ ಜನಕ್ಕೆ ತಿಳಿಯಬೇಕು ಎಂದಿದ್ದಾರೆ ಇನ್ನೂ ಕೆಲವರು. ಪಾಪ ಆ ಹುಡುಗ ಎಷ್ಟು ವಿನಮ್ರನಾಗಿದ್ದಾನೆ ಎಂದಿದ್ದಾರೆ ಹಲವರು. ಈ ವಿಡಿಯೋ ಮಾಡಿದವನನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದಿದ್ದಾರೆ ಸಾಕಷ್ಟು ಜನ.

ಎಷ್ಟೊಂದು ಜನ ತಟ್ಟೆಯಲ್ಲಿ ಊಟವನ್ನು ಬಿಡುತ್ತಾರೆ, ಅದು ನಿಮ್ಮ ಗಮನಕ್ಕೆ ಬರುವುದಿಲ್ಲ ಅಲ್ಲವಾ? ಈ ಹುಡುಗ ಊಟ ಮಾಡಿದ್ದಕ್ಕೆ ನಿಮ್ಮ ಬಳಿ ಕ್ಷಮೆ ಇಲ್ಲವಾ ಎಂದು ಕೇಳಿದ್ದಾರೆ ಕೆಲವರು. ಮಾನವೀಯತೆ ಎನ್ನುವುದು ಇದ್ದಿದ್ದರೆ ಈ ವಿಡಿಯೋ ಅಪ್​ಲೋಡ್ ಮಾಡುತ್ತಿರಲಿಲ್ಲ ನೀವು ಎಂದಿದ್ದಾರೆ ಒಬ್ಬರು.

ಈ ವಿದ್ಯಾರ್ಥಿ ತನಗಾದ ಅವಮಾನವನ್ನು ಜೀವನದಲ್ಲಿ ಮರೆಯಲು ಸಾಧ್ಯವೆ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:01 pm, Fri, 2 December 22