ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರಿಯರಾಗಿರುತ್ತಾರೆ. ಪ್ರೇರಣಾದಾಯಿ ಬರಹಗಳ ಜತೆಗೆ ಕುತೂಹಲಕರ ವಿಚಾರಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ. ಇದೇ ಕಾರಣದಿಂದ ಅವರಿಗೆ ಅಭಿಮಾನಿ ಬಳಗವೂ ಹಿರಿದಾಗಿದೆ. ಕೇವಲ ಟ್ವಿಟರ್ಒಂದರಲ್ಲೇ ಅವರಿಗೆ ಸುಮಾರು 90 ಲಕ್ಷ ಫಾಲೋವರ್ಗಳಿದ್ದಾರೆ. ಇತ್ತೀಚೆಗೆ ಆನಂದ್ ಮಹೀಂದ್ರಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಅದು ವೈರಲ್ ಆಗಿದೆ. ವಿಡಿಯೋದಲ್ಲಿ ಮೌಂಟ್ ಎವರೆಸ್ಟ್ನ ಶಿಖರದಿಂದ 360 ಡಿಗ್ರಿ ನೋಟ ಹೇಗಿದೆ ಎನ್ನುವುದನ್ನು ತೋರಿಸಲಾಗಿದೆ. ಇದಕ್ಕೆ ಕ್ಯಾಪ್ಶನ್ ನೀಡಿರುವ ಆನಂದ್ ಮಹೀಂದ್ರಾ ಬದುಕಿನ ಪಾಠ ಹೇಳಿದ್ದಾರೆ. ‘ಯಾವುದಾದರೂ ಕಠಿಣ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಕಾದರೆ ನೀವು ಎವರೆಸ್ಟ್ನ ಮೇಲಿದ್ದೀರಿ ಎಂದು ಭಾವಿಸಲು ಇದು ಸಹಾಯ ಮಾಡುತ್ತದೆ. ಯಾವುದೇ ಅಡೆತಡೆಯಿಲ್ಲದೆ ಜಗತ್ತಿನ ಕುರಿತು ನಿಮಗೆ ನೋಟ ಸಿಗುತ್ತದೆ. ಕಾರಣ, ನೀವು ಎಲ್ಲವುಗಳಿಗಿಂತ ಎತ್ತರದಲ್ಲಿರುತ್ತೀರಿ. ಇದರಿಂದ ದೊಡ್ಡದಾದ, ದೂರದೃಷ್ಟಿಯ ನೋಟ ನಿಮಗೆ ಸಿಗುತ್ತದೆ’’ ಎಂದಿದ್ದಾರೆ ಆನಂದ್ ಮಹೀಂದ್ರಾ.
ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೋ ಇಲ್ಲಿದೆ:
360 degree view from the top of Mount Everest. Sometimes, when you have to make hard decisions, it helps to imagine you’re on top of Everest with an unobstructed view of the world. Becomes easier to see the ‘big picture.’
pic.twitter.com/qciTw4L7j4— anand mahindra (@anandmahindra) April 5, 2022
ಆನಂದ್ ಮಹೀಂದ್ರಾ ಹಂಚಿಕೊಂಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಸುಮಾರು 41 ಸೆಕೆಂಡ್ಗಳ ಈ ವಿಡಿಯೋವನ್ನು 4.5 ಲಕ್ಷ ಜನರು ವೀಕ್ಷಿಸಿದ್ದಾರೆ. ಸುಮಾರು 28 ಸಾವಿರ ಜನರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.
ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಇಂತಹ ಕುತೂಹಲಕರ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ಸಮಯದ ಹಿಂದೆ ಮಿಜೋರಾಂನಲ್ಲಿ ಜನರು ಟ್ರಾಫಿಕ್ ನಿಯಮಗಳನ್ನು ಅನುಸರಿಸುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಕಿರಿದಾದ ರಸ್ತೆಯಲ್ಲಿ ಜನರು ಟ್ರಾಫಿಕ್ ಹೆಚ್ಚಿದ್ದರೂ, ಯಾವುದೇ ನಿಯಮ ಉಲ್ಲಂಘಿಸದೇ ಸಾವಕಾಶವಾಗಿ ಕಾಯುತ್ತಿರುವ ಚಿತ್ರ ಅದಾಗಿತ್ತು. ಇದನ್ನು ನೋಡಿ ಜನರು ಅಪಾರ ,ಮೆಚ್ಚುಗೆ ಸೂಚಿಸಿದ್ದರು.
ಇದನ್ನೂ ಓದಿ: ಬೇಸಿಗೆಯಲ್ಲಿ ನದಿ-ಸರೋವರದ ನೀರು ತಂಪಾಗಿರುತ್ತದೆ; ಚಳಿಗಾಲದಲ್ಲಿ ಬಿಸಿಯಾಗಿರುತ್ತದೆ; ಇದಕ್ಕೆ ಕಾರಣವೇನು?
ಹಿಂದೂ ಮುಸ್ಲಿಂ ಸಾಮರಸ್ಯದ ಕರಗ ಉತ್ಸವಕ್ಕೆ ಎದುರಾಗಲಿದೆಯಾ ಕಂಟಕ? ದರ್ಗಾ ಪ್ರವೇಶಿಸುತ್ತಾಳ ದ್ರೌಪಧಿಯಮ್ಮ
Published On - 10:05 am, Thu, 7 April 22