ಕೈಯಲ್ಲಿ ಹಣವಿದ್ದಾಗ ಅದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬಳಸುತ್ತಾರೆ. ಕೆಲವರಿಗೆ ಹಣವನ್ನು ದುಡಿಯುವುದು ಹೇಗೆಂಬ ಚಿಂತೆಯಾದರೆ ಇನ್ನು ಕೆಲವರಿಗೆ ಹಣ ಖರ್ಚು ಮಾಡುವುದು ಹೇಗೆಂಬ ಯೋಚನೆ. ಸಾಮಾಜಿಕ ಜಾಲತಾಣಗಳಲ್ಲಿ ಚಿನ್ನದ ಕಾರೊಂದರ ವಿಡಿಯೋ ಭಾರೀ ವೈರಲ್ ಆಗಿದೆ. ಚಿನ್ನದ ಫೆರಾರಿಯೊಂದು (Gold Ferrari Car) ರಸ್ತೆಗಳಲ್ಲಿ ಓಡಾಡುತ್ತಿರುವ ವಿಡಿಯೋವನ್ನು ಈಗಾಗಲೇ 2.10 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಉದ್ಯಮಿ ಆನಂದ್ ಮಹೀಂದ್ರಾ (Anand Mahindra), ನಿಮ್ಮ ಬಳಿ ಇರುವ ಹಣವನ್ನು ಯಾವ ರೀತಿ ಹಾಳು ಮಾಡಬಾರದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಆ ಕಾರಿನ ಮಾಲೀಕರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಕ್ರಿಯರಾಗಿರುವ ಆನಂದ್ ಮಹೀಂದ್ರಾ ಆಗಾಗ ಇಂತಹ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅನೇಕ ಸ್ಫೂರ್ತಿದಾಯಕ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಅವರು ತಮ್ಮ ಗಮನಕ್ಕೆ ಬಂದ ಕಷ್ಟದಲ್ಲಿರುವ ಅನೇಕರಿಗೆ ಸಹಾಯಹಸ್ತವನ್ನೂ ಚಾಚಿದ್ದಾರೆ. ಈ ಬಂಗಾರದ ಫೆರಾರಿ ಕಾರಿನ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ, ನೀವು ಶ್ರೀಮಂತರಾದ ಮಾತ್ರಕ್ಕೆ ನಿಮ್ಮ ಬಳಿ ಇರುವ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಬಾರದು. ಹಣವನ್ನು ಯಾವ ರೀತಿ ಬಳಸಬಾರದು ಎಂಬುದಕ್ಕೆ ಈ ವಿಡಿಯೋ ಒಂದು ಪಾಠವಾಗಿದೆ. ಆದರೂ ಇದನ್ನು ಅರ್ಥ ಮಾಡಿಕೊಳ್ಳದ ಜನರು ಯಾಕೆ ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಶೇರ್ ಮಾಡಿಕೊಂಡು ಅಚ್ಚರಿ ಪಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಯಾರಿಗೂ ಮಾದರಿಯಾಗಬಾರದು ಎಂಬ ನೀತಿಪಾಠವನ್ನು ಆನಂದ್ ಮಹೀಂದ್ರಾ ಹೇಳಿದ್ದಾರೆ.
I don’t know why this is going around on social media unless it is a lesson on how NOT to spend your money when you are wealthy… pic.twitter.com/0cpDRSZpnI
— anand mahindra (@anandmahindra) July 19, 2021
ಶುದ್ಧ ಚಿನ್ನದಿಂದ ಮಾಡಿರುವ ಫೆರಾರಿ ಕಾರಿನ ವಿಡಿಯೋ ಇದಾಗಿದೆ ಎನ್ನಲಾಗಿದೆ. ಆದರೂ ಇದು ನಿಜವಾಗಿಯೂ ಚಿನ್ನದ ಫೆರಾರಿಯಾ ಅಥವಾ ಚಿನ್ನದ ಬಣ್ಣದ ಕಾರಾ? ಎಂಬ ಅನುಮಾನ ನೆಟ್ಟಿಗರಲ್ಲಿ ಮೂಡಿದೆ. 54 ಸೆಕೆಂಡಿನ ಈ ವಿಡಿಯೋ ಕ್ಲಿಪ್‌ನಲ್ಲಿ ಇಬ್ಬರು ಖುಷಿಯಿಂದ ಚಿನ್ನದ ಫೆರಾರಿ ಕಾರಿನಲ್ಲಿ ತೆರಳುವ ವಿಡಿಯೋವಿದೆ. ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರ ಕಾರಿನ ವಿಡಿಯೋವಿದು. ಕಾರಿನ ಮೇಲ್ಭಾಗವನ್ನು ಬಟನ್ ಮೂಲಕ ತೆರೆದು ಈ ಕಾರನ್ನು ಸ್ಟಾರ್ಟ್ ಮಾಡಲಾಗುತ್ತದೆ. ರಸ್ತೆಯಲ್ಲಿ ವೇಗವಾಗಿ ಹೋಗುವ ಈ ಕಾರಿನ ವಿಡಿಯೋವನ್ನು ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸುಮಾರು 8 ಸಾವಿರ ಜನರು ಈ ವಿಡಿಯೋಗೆ ಲೈಕ್ ಒತ್ತಿದ್ದಾರೆ.
Hahaha! That’s right. I don’t understand what is achieved by doing this?
— Nikitaa Mehendiraatta (@Nikitaapoetry) July 19, 2021
ಹಲವು ನೆಟ್ಟಿಗರು ಆನಂದ್ ಮಹೀಂದ್ರಾ ಅವರ ಅಭಿಪ್ರಾಯಕ್ಕೆ ಮೆಚ್ಚುಗೆ ಸಲ್ಲಿಸಿದ್ದಾರೆ. ಈ ರೀತಿ ತಮ್ಮ ಬಳಿ ಹಣವಿದೆ ಎಂದು ತೋರಿಸಿಕೊಳ್ಳಲು ಚಿನ್ನದ ಕಾರಿನಲ್ಲಿ ಓಡಾಡಿ ಏನು ಸಾಧಿಸಿದಂತಾಗುತ್ತದೆ? ಆ ಹಣವನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿದರೆ ಒಂದಷ್ಟು ಜನರಿಗೆ ಜೀವನ ಕಟ್ಟಿಕೊಟ್ಟಂತಾಗುತ್ತದೆ ಎಂದು ಕೆಲವರು ರೀಟ್ವೀಟ್ ಮಾಡಿದ್ದಾರೆ.
Well Indian love gold and will wear it to show off however it takes! And this is no showoff. Many Indian rich have multiple assets and they use it/show off in India too. Because of the fear of getting a gold plated car scratched, they still keep it in their garages 🙂
— Kanad_Bhagi (@BhagiKanad) July 20, 2021
ಚಿನ್ನದ ಲೇಪನವಿರುವ ಕಾರನ್ನು ಹೊಂದಿದವರು ಇವರೇ ಮೊದಲನೇನಲ್ಲ. ಭಾರತೀಯರಲ್ಲಿ ಅನೇಕರು ಇಂತಹ ಕಾರನ್ನು ಹೊಂದಿದ್ದಾರೆ. ಆದರೆ, ಆ ಕಾರನ್ನು ರಸ್ತೆಗೆ ಇಳಿಸಿದರೆ ಸ್ಕ್ರಾಚ್ ಆಗಬಹುದು ಎಂಬ ಆತಂಕ ಇರುವುದರಿಂದ ಆ ಕಾರನ್ನು ತಮ್ಮ ಮನೆಯ ಗ್ಯಾರೇಜ್ ಅಥವಾ ಪಾರ್ಕಿಂಗ್ ಏರಿಯಾದಲ್ಲೇ ಇರಿಸುತ್ತಾರೆ. ಚಿನ್ನದ ಮೇಲೆ ಭಾರತೀಯರಿಗೆ ಒಂಥರಾ ಮೋಹ. ಅದೇ ಕಾರಣಕ್ಕೆ ಚಿನ್ನದ ಖುರ್ಚಿ, ಚಿನ್ನದ ತಟ್ಟೆ, ಚಿನ್ನದ ಕಮೋಡ್ ಕೂಡ ಬಳಸುವವರಿದ್ದಾರೆ ಎಂದು ಇನ್ನು ಕೆಲವರು ಟ್ವೀಟ್ ಮಾಡಿದ್ದಾರೆ.
All that glitters is not gold!! Many do car wraps in gold and other fancy colours. https://t.co/NsbhULC2Zk
— Neeraj Sharma (@Neeraj_Sharma_) July 19, 2021
ಇದು ಚಿನ್ನದ ಕಾರಲ್ಲ. ಗೋಲ್ಡ್ ಮತ್ತು ಫ್ಯಾನ್ಸಿ ಬಣ್ಣದ ಕಾರಿನ ಕ್ರೇಜ್ ಸಾಕಷ್ಟು ಜನರಿಗಿದೆ. ಅದೇ ರೀತಿ ಇದೂ ಕೂಡ ಫ್ಯಾನ್ಸಿ ಬಣ್ಣದ ಕಾರಷ್ಟೇ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ. ಒಟ್ಟಾರೆ, ಈ ಕಾರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವುದಂತೂ ಸತ್ಯ.
ಇದನ್ನೂ ಓದಿ: Viral Video: ಮದುವೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ವಧು; ಕಂಗಾಲಾಗಿ ಮಂಟಪದಿಂದ ಓಡಿಹೋದ ವರ!
(Anand Mahindra shares viral video of Indian man flaunting his Gold Ferrari Car What is the Fact)
Published On - 2:04 pm, Wed, 21 July 21