ಮುಂಬೈ: ಹಲವಾರು ಪೂರ್ವ ವಿವಾಹ ಸಮಾರಂಭಗಳು ಮತ್ತು ಆಚರಣೆಗಳ ನಂತರ ಏಷ್ಯಾದ ಅತಿ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿನ್ನೆ ರಾತ್ರಿ ನಡೆದ ಅದ್ದೂರಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಈ ಅದ್ಧೂರಿ ಸಮಾರಂಭವನ್ನು ನಡೆಸಲಾಯಿತು. ಅವರ ಮದುವೆಯಲ್ಲಿ ರಾಜಕೀಯ, ಕ್ರೀಡೆ, ಸಿನಿಮಾ ಮತ್ತು ಉದ್ಯಮದ ಅನೇಕ ಗಣ್ಯರು ಭಾಗವಹಿಸಿದ್ದರು.
ಈ ವರ್ಷದ ಮಾರ್ಚ್ ಆರಂಭದಿಂದ ವಿವಾಹ ಪೂರ್ವದ ಸಮಾರಂಭಗಳ ಸರಣಿ ಆರಂಭವಾಗಿತ್ತು. ಶುಕ್ರವಾರ ಸಂಜೆ ಬಾರತ್ನೊಂದಿಗೆ ಅಂಬಾನಿ ದಂಪತಿ ಮದುವೆ ಮಂಟಪಕ್ಕೆ ಹೊರಟಿದ್ದರು. ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: Nita Ambani Dance: ಮದುವೆ ದಿಬ್ಬಣದ ವೇಳೆ ಡೋಲು ವಾದ್ಯದ ಶಬ್ದಕ್ಕೆ ಡ್ಯಾನ್ಸ್ ಮಾಡಿದ ನೀತಾ ಅಂಬಾನಿ
ತಮ್ಮ ವರಮಾಲಾ ಸಮಾರಂಭಕ್ಕಾಗಿ ರಾಧಿಕಾ ಮರ್ಚೆಂಟ್ ಸುಂದರವಾದ ಅಬು ಜಾನಿ ಸಂದೀಪ್ ಖೋಸ್ಲಾ ಲೆಹೆಂಗಾವನ್ನು ಧರಿಸಿದ್ದರು. ದಂತದ ಜರ್ದೋಜಿ ಕಟ್-ವರ್ಕ್, ಐದು ಮೀಟರ್ ಹೆಡ್ ವೆಲ್ ಮತ್ತು ಟಿಶ್ಯೂ ದುಪ್ಪಟ್ಟಾದೊಂದಿಗೆ ಈ ಘಾಗ್ರಾವನ್ನು ಡಿಸೈನ್ ಮಾಡಲಾಗಿತ್ತು. ವಜ್ರಗಳು ಮತ್ತು ಪಚ್ಚೆಗಳಿಂದ ಮಾಡಿದ ಸುಂದರವಾದ ಆಭರಣದೊಂದಿಗೆ ರಾಧಿಕಾ ಕಂಗೊಳಿಸಿದರು.
ಅನಂತ್ ಅಂಬಾನಿ ಅವರ ಬಾರಾತ್‌ನ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ನಟರಾದ ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ, ಅರ್ಜುನ್ ಕಪೂರ್, ಅನನ್ಯ ಪಾಂಡೆ, ಅನಿಲ್ ಕಪೂರ್ ಮತ್ತು ರಜನಿಕಾಂತ್ ಸೇರಿದಂತೆ ಇತರರು ಬಾರಾತ್‌ನಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿವೆ. ಕುಸ್ತಿಪಟು, ನಟ ಜಾನ್ ಸೀನಾ ಕೂಡ ಇತರ ಅತಿಥಿಗಳೊಂದಿಗೆ ಬಾರಾತ್‌ನಲ್ಲಿ ಧೋಲ್ ಬೀಟ್‌ಗಳಿಗೆ ನೃತ್ಯ ಮಾಡಿದ್ದಾರೆ.
Grand Mandap🥰 #RadhikaAnantWedding #RadhikaMerchantweding #AnantwedsRadhika #AnantAmbani #Reliance #AnantRadhikaWedding #AmbaniFamily #AmbaniWedding #Ambani #अनंतअंबानी #ARWeddingCelebrations pic.twitter.com/6rdWVestEK
— 𝐍𝐞𝐡𝐚 𝐊𝐚𝐬𝐡𝐲𝐚𝐩 (@NiyaNivriti) July 13, 2024
ವಿವಾಹದ ಮೊದಲು, ಅನಂತ್ ಅಂಬಾನಿ ಅವರು ತಮ್ಮ ಅಜ್ಜ ಧೀರೂಬಾಯಿ ಅಂಬಾನಿ ಅವರನ್ನು ನೆನಪಿನಲ್ಲಿ ಸಣ್ಣ ಪೂಜೆಯನ್ನು ಮಾಡಿದರು.
ಇದನ್ನೂ ಓದಿ: ಅನಂತ್ ಅಂಬಾನಿ ವಿವಾಹದಲ್ಲಿ ರಜನಿಕಾಂತ್ ಮಸ್ತ್ ಡ್ಯಾನ್ಸ್; ಯುವಕರೂ ನಾಚಬೇಕು
ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ವಿವಾಹದ ನಂತರ 3 ಕಾರ್ಯಕ್ರಮಗಳು ನಡೆಯಲಿವೆ. ಇಂದು (ಜುಲೈ 13) ‘ಶುಭ್ ಆಶೀರ್ವಾದ’, ‘ಮಂಗಲ್ ಉತ್ಸವ’ ನಡೆಯಲಿದೆ. ಜುಲೈ 14 ರಂದು ಮದುವೆಯ ಆರತಕ್ಷತೆ ಮತ್ತು ಜುಲೈ 15 ರಂದು ಮುಂಬೈನಲ್ಲಿ ಮತ್ತೊಂದು ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:37 am, Sat, 13 July 24