
ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಹಾಗೂ ರಿಲಯನ್ಸ್ ಇಂಡಸ್ಟ್ರಿಯ (Reliance Industries) ನಿರ್ದೇಶಕ ಅನಂತ್ ಅಂಬಾನಿ (Anant Ambani) ತಮ್ಮ ಹುಟ್ಟು ಹಬ್ಬದಂದು ಶ್ರೀ ಕೃಷ್ಣನ ದರ್ಶನ ಪಡೆಯಲು ಜಾಮ್ ನಗರದಿಂದ (Jamnagar) ದ್ವಾರಕಾಕ್ಕೆ (Dwarka) ಪಾದಯಾತ್ರೆ (Padayatra) ಹೊರಟಿದ್ದಾರೆ. ಮಾರ್ಚ್ 27 ರಂದು ಜಾಮ್‌ನಗರದಿಂದ 141 ಕಿಲೋಮೀಟರ್ ದೂರದಲ್ಲಿರುವ ದ್ವಾರಕಾಗೆ ಪಾದಯಾತ್ರೆ ಹೊರಟಿರುವ ದೈವ ಭಕ್ತ ಅನಂತ್ ಅಂಬಾನಿ ಏಪ್ರಿಲ್ 10 ರಂದು ದ್ವಾರಕಾ ತಲುಪಲಿದ್ದಾರೆ. ಈ ಮಧ್ಯೆ ಅವರು ಕೋಳಿಗಳ (Chickens) ಹಿಂಡನ್ನು ರಕ್ಷಿಸುವ (rescue) ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಹೌದು ಪಾದಯಾತ್ರೆ ವೇಳೆ ಅನಂತ್ ಅಂಬಾನಿ ಟ್ರಕ್‌ನಲ್ಲಿ ತುಂಬಿದ್ದ ಕೋಳಿಗಳ ಹಿಂಡನ್ನು ದುಪ್ಪಟ್ಟು ಬೆಲೆಗೆ ಖರೀದಿಸುವ ಮೂಲಕ ಅವುಗಳನ್ನು ರಕ್ಷಣೆ ಮಾಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ.
ಪಾದಯಾತ್ರೆಯ ಸಮಯದಲ್ಲಿ ಅನಂತ್ ಅಂಬಾನಿಯವರ ಪ್ರಾಣಿ ಪ್ರೇಮ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹೌದು ಅಂಬಾನಿ ಪುತ್ರ ಪಾದಯಾತ್ರೆ ವೇಳೆ ದಾರಿ ಮಧ್ಯೆ ಟ್ರಕ್‌ನಲ್ಲಿ ತುಂಬಿದ್ದ ಕೋಳಿಗಳ ಹಿಂಡನ್ನು ರಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆ ಟ್ರಕ್‌ನಲ್ಲಿದ್ದ ಸುಮಾರು 250 ಕೋಳಿಗಳನ್ನು ದುಪ್ಪಟ್ಟು ಬೆಲೆ ಕೊಟ್ಟು ಖರೀದಿ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
varindertchawla ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, “ಕೇವಲ ನಂಬಿಕೆಯ ಪಾದಯಾತ್ರೆಯಲ್ಲ, ದಯೆಯ ಹಾದಿ, ಅನಂತ್ ಅಂಬಾನಿ ಭಾರತವನ್ನು ಪ್ರಾಣಿಗಳಿಗೆ ಉತ್ತಮ ಸ್ಥಳವನ್ನಾಗಿ ಮಾಡುತ್ತಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅನಂತ್ ಅಂಬಾನಿ ಕೈಯಲ್ಲಿ ಕೋಳಿ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುವದನ್ನು ತೋರಿಸಲಾಗಿದೆ. ಜೊತೆಗೆ ಈ ವಿಡಿಯೋದಲ್ಲಿ ಅವರು ತಮ್ಮ ತಂಡಕ್ಕೆ ಗುಜರಾತಿ ಭಾಷೆಯಲ್ಲಿ ಅವುಗಳನ್ನು ಉಳಿಸಿ, ಖರೀದಿಸಿ, ಆ ಮಾಲೀಕರಿಗೆ ಹಣ ನೀಡಿ, ಕೋಳಿಗಳನ್ನು ನಾವು ನೋಡಿಕೊಳ್ಳುತ್ತೇವೆ” ಎಂದು ಹೇಳುವುದನ್ನು ಕಾಣಬಹುದು.
ಇದನ್ನೂ ಓದಿ: ನನ್ನ ಗಂಡ ದೇವಸ್ಥಾನಕ್ಕೆ ಮಾತ್ರ ಹೋಗ್ತಾನೆ, ಆತನಿಗೆ ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲ; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಅನಂತ್ ಅಂಬಾನಿಯ ಪ್ರಾಣಿ ಪ್ರೇಮಕ್ಕೆ ನೆಟ್ಟಿಗರು ತಲೆ ಬಾಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:51 am, Wed, 2 April 25