Viral: ಸ್ನೇಹಿತನ ಮದುವೆಗೆ ಗಿಫ್ಟ್​​ ನೀಡುವಾಗಲೇ ಪ್ರಾಣ ಬಿಟ್ಟ ಜೀವದ ಗೆಳೆಯ

ಇತ್ತೀಚಿಗೆ ಹೃದಯಾಘಾತದ ಪ್ರಕರಣಗಳು ತೀರಾ ಹೆಚ್ಚಾಗಿದೆ. ನಿನ್ನೆಯಷ್ಟೆ ಗುಜರಾತಿನಲ್ಲಿ ವ್ಯಕ್ತಿಯೊಬ್ಬರು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಸುದ್ದಿಯೊಂದು ಕೇಳಿ ಬಂದಿತ್ತು. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಸ್ನೇಹಿತನ ಮದುವೆಯ ಗೌಜಿ ಗಮ್ಮತ್ತಿನಲ್ಲಿರುವಾಗಲೇ ಯುವಕನೊಬ್ಬ ಹೃದಯಾಘಾತಕ್ಕೆ ತುತ್ತಾಗಿ, ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆಯ ದೃಶ್ಯಾವಳಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ. ಹಾರ್ಟ್‌ ಅಟ್ಯಾಕ್‌ಗೆ ತುತ್ತಾಗಿ ಸಾವನ್ನಪ್ಪುವವರ ಸುದ್ದಿಗಳು ಪ್ರತಿನಿತ್ಯ ಕೇಳಿ ಬರುತ್ತಿರುತ್ತಿದ್ದು, ಈಗಂತೂ ಮಕ್ಕಳು ಯುವಕರು, ವೃದ್ಧರು ಅನ್ನ ವ್ಯತ್ಯಾಸವಿಲ್ಲದೆ ಎಲ್ಲಾ ವಯೋಮಾನದವರೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ನಿನ್ನೆಯಷ್ಟೆ ಗುಜರಾತಿನಲ್ಲಿ ವ್ಯಕ್ತಿಯೊಬ್ಬರು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಸುದ್ದಿಯೊಂದು ಕೇಳಿ ಬಂದಿತ್ತು. ಇದೀಗ ಇಂತಹದ್ದೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ಸ್ನೇಹಿತನ ಮದುವೆಯ ಗೌಜಿ ಗಮ್ಮತ್ತಿನಲ್ಲಿರುವಾಗಲೇ ಯುವಕನೊಬ್ಬ ಹೃದಯಾಘಾತಕ್ಕೆ ತುತ್ತಾಗಿ, ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಈ ಘಟನೆ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಕೃಷ್ಣಗಿರಿ ಮಂಡಲದ ಪೆನುಮಾಡ ಗ್ರಾಮದಲ್ಲಿ ನಡೆದಿದ್ದು, ಬೆಂಗಳೂರಿನ ಅಮೆಜಾನ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವಂಶಿ ಎಂಬಾತ ಸ್ನೇಹಿತನ ಮದುವೆ ಸಮಾರಂಭದಲ್ಲಿ ಹೃದಯಾಘಾತಕ್ಕೆ ತುತ್ತಾಗಿ, ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮೂಲಗಳ ಪ್ರಕಾರ ವಂಶಿ ಮತ್ತು ಸ್ನೇಹಿತರು ಜೊತೆಗೂಡಿ ಮದುಮಗನಿಗೆ ಗಿಫ್ಟ್‌ ಕೊಟ್ಟು ಮೋಜುಮಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ವಂಶಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ವಿಶ್ವದ ಅತೀ ಎತ್ತರದ ಹಾಗೂ ಕುಬ್ಜ ಮಹಿಳೆಯರಿಬ್ಬರ ಮೊದಲ ಭೇಟಿ ಹೇಗಿತ್ತು ನೋಡಿ…

TheSiasatDaily ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವಂಶಿ ಎಂಬ ಯುವಕ ತನ್ನ ಸ್ನೇಹಿತರ ಜೊತೆಗೂಡಿ ಮದುವೆ ಮಂಟಪದಲ್ಲಿ ವರನಿಗೆ ಗಿಫ್ಟ್‌ ಕೊಟ್ಟು ಮಸ್ತಿ ಮಾಡುತ್ತಿದ್ದ ವೇಳೆ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದಂತಹ ಆಘಾತಕಾರಿ ದೃಶ್ಯವನ್ನು ಕಾಣಬಹುದು. ಈ ದೃಶ್ಯಾವಳಿ ನೋಡಿ ನೆಟ್ಟಿಗರು ಆಘಾತಗೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:46 pm, Fri, 22 November 24

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us