Viral: ಅಬ್ಬಬ್ಬಾ ಈ ಮಕ್ಳಿಗೆ ಭಯವೇ ಇಲ್ವಾ… ಸತ್ತ ಹೆಬ್ಬಾವನ್ನು ಹಿಡಿದು ಸ್ಕಿಪ್ಪಿಂಗ್‌ ಆಡಿದ ಪೋರರು

ಜೀವಂತ ಹಾವು ಬಿಡಿ, ಬಹಳಷ್ಟು ಜನ ಸತ್ತ ಹಾವು ಕಂಡ್ರು ಕೂಡಾ ಎದ್ನೋ ಬಿದ್ನೋ ಅಂತ ಓಡಿ ಹೋಗ್ತಾರೆ. ಅಂತದ್ರಲ್ಲಿ ಇಲ್ಲೊಂದಷ್ಟು ಮಕ್ಕಳು ಸತ್ತ ಹಾವನ್ನೇ ಹಗ್ಗ ಮಾಡಿಕೊಂಡು ಸ್ಕಿಪ್ಪಿಂಗ್‌ ಆಡಿದ್ದಾರೆ. ಸತ್ತು ಹೋಗಿದ್ದಂತಹ ದೈತ್ಯ ಗಾತ್ರದ ಹೆಬ್ಬಾವನ್ನು ಕೈಯಲ್ಲಿ ಹಿಡಿದುಕೊಂಡು ಪುಟ್ಟ ಪೋರರು ಸ್ಕಿಪ್ಪಿಂಗ್‌ ಆಡಿದ್ದು, ಈ ಕುರಿತ ಆಘಾತಕಾರಿ ವಿಡಿಯೋ ಇದೀಗ ವೈರಲ್‌ ಆಗಿದೆ.

Viral: ಅಬ್ಬಬ್ಬಾ ಈ ಮಕ್ಳಿಗೆ ಭಯವೇ ಇಲ್ವಾ… ಸತ್ತ ಹೆಬ್ಬಾವನ್ನು ಹಿಡಿದು ಸ್ಕಿಪ್ಪಿಂಗ್‌ ಆಡಿದ ಪೋರರು
ವೈರಲ್​​ ವಿಡಿಯೋ
Edited By:

Updated on: Mar 10, 2025 | 12:40 PM

ಆಸ್ಟ್ರೇಲಿಯಾ, ಮಾ. 10: ಹಾವುಗಳೆಂದರೆ (Snakes) ಯಾರಿಗೆ ತಾನೇ ಭಯವಿಲ್ಲ ಹೇಳಿ. ಜೀವಂತ ಹಾವು ಬಿಡಿ ಹೆಚ್ಚಿನವರು ಸತ್ತ ಹಾವನ್ನು ಕಂಡರೂ ಬೆಚ್ಚಿ ಬಿದ್ದು ಎದ್ನೋ ಬಿದ್ನೋ ಅಂತ ಅಲ್ಲಿಂದ ಓಡಿ ಹೋಗ್ತಾರೆ. ಅದರಲ್ಲೂ ಮಕ್ಕಳಂತೂ ಹಾವುಗಳನ್ನು ಕಂಡ್ರೆ ಜಾಸ್ತಿಯೇ ಭಯ ಪಡ್ತಾರೆ. ಆದ್ರೆ ಇಲ್ಲೊಂದಷ್ಟು ಮಕ್ಕಳು ಯಾವುದೇ ಭಯವಿಲ್ಲದೆ ಹಾವನ್ನೇ ಹಗ್ಗ ಮಾಡಿಕೊಂಡು ಸ್ಕಿಪ್ಪಿಂಗ್‌ ಆಡಿದ್ದಾರೆ. ಹೌದು ಸತ್ತು ಹೋದಂತಹ ದೈತ್ಯ ಹೆಬ್ಬಾವನ್ನು ಕೈಯಲ್ಲಿ ಹಿಡಿದುಕೊಂಡು ಸ್ಕಿಪ್ಪಿಂಗ್‌ ಆಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದ್ದು, ಪುಟ್ಟ ಪೋರರ ಭಂಡ ಧೈರ್ಯವನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ಆಸ್ಟ್ರೇಲಿಯಾದ ವೂರಾಬಿಂಡಾ ಎಂಬಲ್ಲಿ ಒಂದಷ್ಟು ಮಕ್ಕಳು ಯಾವುದೇ ಭಯವಿಲ್ಲದೆ ನಿರ್ಭೀತಿಯಿಂದ ಸತ್ತ ಹಾವನ್ನು ಹಗ್ಗದಂತೆ ಕೈಯಲ್ಲಿ ಹಿಡಿದುಕೊಂಡು ಸ್ಕಿಪ್ಪಿಂಗ್‌ ಆಡಿದ್ದಾರೆ. ಕಪ್ಪು ತಲೆಯ ವಿಶೇಷ ಹೆಬ್ಬಾವನ್ನು ಕೈಯಲ್ಲಿ ಹಿಡಿದು ಮಕ್ಕಳು ಹೀಗೆ ಆಟವಾಡಿದ್ದು, ಈ ದೃಶ್ಯ ವೈರಲ್‌ ಆಗುತ್ತಿದ್ದಂತೆ ಇಲ್ಲಿನ ಪರಿಸರ, ವಿಜ್ಞಾನ, ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ
ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಅಭಿಮಾನಿಗಳ ಮೇಲೆ ಲಾಠಿಚಾರ್ಜ್‌ ಮಾಡಿದ ಪೊಲೀಸ್
ಚಿಕನ್‌ ಮೂಳೆ ಗಂಟಲಲ್ಲಿ ಸಿಲುಕಿ ಪರದಾಡಿದ ಮಹಿಳೆ
ಹೊಟ್ಟೆ ಕಿಚ್ಚಿನಿಂದ ಸಹದ್ಯೋಗಿ ಕುಡಿಯುವ ನೀರಿಗೆ ವಿಷ ಹಾಕಿದ ಮಹಿಳೆ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು clowndownunder ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು, “ಸತ್ತ ಹೆಬ್ಬಾವನ್ನು ಸ್ಕಿಪ್ಪಿಂಗ್‌ ಹಗ್ಗವಾಗಿ ಬಳಸಿದ ಆಸ್ಟ್ರೇಲಿಯಾದ ಮಕ್ಕಳು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್‌ ಆಗುತ್ತಿರುವರ ವಿಡಿಯೋದಲ್ಲಿ ಒಂದಷ್ಟು ಬಾಲಕರು ಸತ್ತ ಹೆಬ್ಬಾವನ್ನು ಹಗ್ಗದಂತೆ ಕೈಯಲ್ಲಿ ಹಿಡಿದುಕೊಂಡು ಸ್ಕಿಪ್ಪಿಂಗ್‌ ಆಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಲಂಡನ್‌ ಬೀದಿಯಲ್ಲಿ ಬಾಲಿವುಡ್‌ ಹಾಡಿಗೆ ಜಬರ್ದಸ್ತ್‌ ಸ್ಟೆಪ್ಸ್‌ ಹಾಕಿದ ಯುವತಿ; ಹೇಗಿದೆ ನೋಡಿ ಚಿಂದಿ ಡ್ಯಾನ್ಸ್‌

ಮಾರ್ಚ್‌ 10 ರಂದು ಶೇರ್‌ ಮಾಡಲಾದ ಈ ವಿಡಿಯೋ 11 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಾವುಗಳನ್ನು ತಿನ್ನುವವರಿಗೆ ಅದರೊಂದಿಗೆ ಆಡುವುದು ಹೊಸದೇನಲ್ಲ ಬಿಡಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದರಲ್ಲಿ ತಪ್ಪೇನಿದೆʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅವರಿಗೆ ಇದು ತಮಾಷೆಯಾಗಿ ಬಿಟ್ಟಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ