Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಚಿಕನ್‌ ಮೂಳೆ ಗಂಟಲಲ್ಲಿ ಸಿಲುಕಿ ಪರದಾಡಿದ ಮಹಿಳೆ; ನಾನ್‌ವೆಜ್‌ ಪ್ರಿಯರೇ ಬಿರಿಯಾನಿ ತಿನ್ನೋ ಮುನ್ನ ಜೋಪಾನ

ಬಿರಿಯಾನಿ ತಿನ್ನುವಾಗ ಗಂಟಲಲ್ಲಿ ಮೂಳೆ ಸಿಲುಕಿ, ಗಂಟಲಲ್ಲಿ ಮೀನು ಸಿಲುಕಿ ಪೇಚಿಗೆ ಸಿಲುಕಿದವರ ಸುದ್ದಿಯನ್ನು ಈ ಹಿಂದೆಯೂ ಕೇಳಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ಬಿರಿಯಾನಿಯಲ್ಲಿನ ಚಿಕನ್‌ ಮೂಳೆ ತಿನ್ನಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಿನ್ನುವಾಗ ಮೂಳೆ ಗಂಟಲಲ್ಲಿ ಸಿಲುಕಿದ್ದು, ಸತತ ಎಂಟು ಗಂಟೆಗಳ ಶಸ್ತ್ರ ಚಿಕಿತ್ಸೆಯ ಬಳಿಕ ವೈದ್ಯರು ಮೂಳೆಯನ್ನು ಹೊರ ತೆಗೆದಿದ್ದಾರೆ. ಈ ಸುದ್ದಿ ಇದೀಗ ಭಾರಿ ವೈರಲ್‌ ಆಗುತ್ತಿದೆ.

Viral: ಚಿಕನ್‌ ಮೂಳೆ ಗಂಟಲಲ್ಲಿ ಸಿಲುಕಿ ಪರದಾಡಿದ ಮಹಿಳೆ; ನಾನ್‌ವೆಜ್‌ ಪ್ರಿಯರೇ ಬಿರಿಯಾನಿ ತಿನ್ನೋ ಮುನ್ನ ಜೋಪಾನ
New Project (17)
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Mar 09, 2025 | 5:36 PM

ಮುಂಬೈ, ಮಾ. 09: ಯಾವುದೇ ಆಹಾರವನ್ನು ನಿಧಾನವಾಗಿ ಆರಾಮವಾಗಿ ಸವಿದು ತಿನ್ನಬೇಕು ಎಂದು ಹೇಳ್ತಾರೆ. ಹೀಗಿದ್ರೂ ಕೂಡಾ ಕೆಲವೊಬ್ರು ಗಬಗಬನೆ ಊಟ ಮಾಡ್ತಾರೆ. ಹೀಗೆ ಗಬಗಬನೆ ಆಹಾರ ತಿನ್ನಲು ಹೋಗಿ, ಆ ಆಹಾರ ಗಂಟಲಲ್ಲಿ ಸಿಲುಕಿ ಹಲವರು ಪೇಚಿಗೆ ಸಿಲುಕಿದ್ದಾರೆ. ಹೀಗೆ ಗಂಟಲಲ್ಲಿ ಮೀನು, ಚಿಕನ್‌ ಮೂಳೆ ಸಿಕ್ಕಿ ಸಂಕಷ್ಟಕ್ಕೆ ಸಿಲುಕಿದವರ ಸುದ್ದಿಗಳನ್ನು ಈ ಹಿಂದೆಯೂ ಕೇಳಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ಬಿರಿಯಾನಿಯಲ್ಲಿನ ಚಿಕನ್‌ ಮೂಳೆ ತಿನ್ನಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಿನ್ನುವಾಗ ಮೂಳೆ ಗಂಟಲಲ್ಲಿ ಸಿಲುಕಿದ್ದು, ಸತತ ಎಂಟು ಗಂಟೆಗಳ ಶಸ್ತ್ರ ಚಿಕಿತ್ಸೆಯ ಬಳಿಕ ವೈದ್ಯರು ಮೂಳೆಯನ್ನು ಹೊರ ತೆಗೆದಿದ್ದಾರೆ. ಈ ಸುದ್ದಿ ಇದೀಗ ಭಾರಿ ವೈರಲ್‌ ಆಗುತ್ತಿದೆ.

ಮುಂಬೈನ ಕುರ್ಲಾದ ಮಹಿಳೆಯೊಬ್ಬರು ಬಿರಿಯಾನಿ ಸವಿಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು ರೆಸ್ಟೋರೆಂಟ್‌ ಒಂದರಲ್ಲಿ ಬಿರಿಯಾನಿ ತಿನ್ನುವ ವೇಳೆ, ಚಿಕನ್‌ ಮೂಳೆ ಅವರ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಸತತ 8 ಗಂಟೆಗಳ ಶಸ್ತ್ರ ಚಿಕಿತ್ಸೆಯ ನಂತರ ವೈದ್ಯರು ಮಹಿಳೆಯ ಗಂಟಲಲ್ಲಿ ಸಿಲುಕಿದ್ದ 3.2 ಸೆಂ.ಮೀ ಉದ್ದದ ಮೂಳೆಯನ್ನು ಹೊರ ತೆಗೆದಿದ್ದಾರೆ.

34 ವರ್ಷದ ರೂಬಿ ತನ್ನ ಕುಟುಂಬದೊಂದಿಗೆ ಹೊರಗೆ ರೆಸ್ಟೋರೆಂಟ್‌ ಒಂದಕ್ಕೆ ಊಟ ಮಾಡಲು ಹೋಗಿದ್ದು, ಅಲ್ಲಿ ಅವರು ತಮ್ಮಿಷ್ಟದ ಚಿಕನ್‌ ಬಿರಿಯಾನಿ ಆರ್ಡರ್‌ ಮಾಡಿದ್ದಾರೆ. ಮತ್ತು ಬಿರಿಯಾನಿ ತಿನ್ನುವಾಗ ಚಿಕನ್‌ ಮೂಳೆ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದೆ. ಬಳಿಕ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಎದುರಾಯಿತು. ನಂತರ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಮೂಳೆ ಹೊರ ತೆಗೆದಿದ್ದಾರೆ. ಚಿಕನ್‌ ಬಿರಿಯಾನಿ ತಂದ ಸಂಕಷ್ಟದಿಂದ 8 ಲಕ್ಷ ರೂ. ಖರ್ಚಾಗಿದ್ದು, ಇನ್ನು ಮುಂದೆ ನಾನು ಬಿರಿಯಾನಿ ತಿನ್ನುವುದಿಲ್ಲ, ಜೊತೆಗೆ ಮನೆಯಲ್ಲಿ ಬಿರಿಯಾನಿ ಮಾಡುವುದು ಇಲ್ಲ ಎಂದು ರೂಬಿ ತಮ್ಮ ಪತಿಗೆ ಹೇಳಿದ್ದಾರೆ.

ಇದನ್ನೂ ಓದಿ: CISF ನಲ್ಲಿ 1100 ಕ್ಕೂ ಹೆಚ್ಚು ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ

ಫೆಬ್ರವರಿ 3 ರಂದು, ರೂಬಿ ಗಂಟಲು ನೋವಿನಿಂದಾಗಿ ಕ್ರಿಟಿಕಲ್ ಕೇರ್ ಆಸ್ಪತ್ರೆಗೆ ದಾಖಲಾದಾಗ ಎಕ್ಸ್-ರೇ ಸ್ಕ್ಯಾನ್ ಮಾಡಿದಾಗ ಆಕೆಯ ಕುತ್ತಿಗೆಯಲ್ಲಿ ವಿಚಿತ್ರ ವಸ್ತುವೊಂದು ಸಿಲುಕಿಕೊಂಡಿರುವುದು ಕಂಡುಬಂದಿದೆ. ಇದಾದ ನಂತರ, ವೈದ್ಯರು ರೂಬಿಯನ್ನು ಅಡ್ಮಿಟ್‌ ಆಗುವಂತೆ ಕೇಳಿದಾಗ, ಅವರು ಇದಕ್ಕೆ ನಿರಾಕರಿಸಿದ್ದಾರೆ. ಎರಡು ದಿನಗಳ ನಂತರ, ರೂಬಿ ಜ್ವರ, ಅಧಿಕ ರಕ್ತದೊತ್ತಡ ಮತ್ತು ಸೋಂಕಿನ ಕಾರಣದಿಂದ ಮತ್ತೆ ಆಸ್ಪತ್ರೆಗೆ ಬಂದಿದ್ದು, ಈ ಬಾರಿ ಎಂಡೋಸ್ಕೋಪಿ ಮತ್ತು ಸಿಟಿ ಸ್ಕ್ಯಾನ್ ಮಾಡಿದಾಗ ಅನ್ನನಾಳದಲ್ಲಿ ಏನೋ ಸಿಲುಕಿರುವುದನ್ನು ವೈದ್ಯರು ಗಮನಿಸುತ್ತಾರೆ. ನಂತರ ರೂಬಿಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದಾರೆ. ವೈದ್ಯರು ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಿದಾಗ, ಎರಡು ಗಂಟೆಗಳಲ್ಲಿ ಆಪರೇಷನ್‌ ಮುಗಿಯುತ್ತದೆ ಎಂದು ಭಾವಿಸಿದ್ದರು. ಆದರೆ ರೂಬಿಯ ಆಪರೇಷನ್‌ ಎಷ್ಟು ಕಷ್ಟಕರವಾಯಿತೆಂದರೆ ಗಂಟಲಲ್ಲಿ ಸಿಲುಕಿದ್ದ ಚಿಕನ್‌ ಮೂಳೆಯನ್ನು ಹೊರ ತೆಗೆಯಲು ಎಂಟು ಗಂಟೆಗಳು ಬೇಕಾಯಿತು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:35 pm, Sun, 9 March 25

ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ