ನಾವಿಂದು ತಂತ್ರಜ್ಞಾನದ ಯುಗದಲ್ಲಿದ್ದೇವೆ. ಆದರೆ ಹೊಸ ಹೊಸ ವಿಷಯಗಳಿಗೆ ತೆರಳುಕೊಳ್ಳುತ್ತಿದ್ದಂತೆ ಮೋಸ ಹೋಗುವುದೇ ಹೆಚ್ಚಾಗಿದೆ. ಹೌದು, ಇತ್ತೀಚೆಗಿನ ದಿನಗಳಲ್ಲಿ ತಂತ್ರಜ್ಞಾನದ ಜಗತ್ತಿನಲ್ಲಿ ಸೈಬರ್ ಅಪರಾಧವು ವೇಗವಾಗಿ ಹೆಚ್ಚುತ್ತಿವೆ. ಹೀಗಾಗಿ ಸೈಬರ್ ದರೋಡೆಕೋರರು ಹಣ ಪಡೆಯುವ ಮೂಲಕ ಜನರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನರು ಕೋಟಿಗಟ್ಟಲೇ ಹಣವನ್ನು ಕಳೆದುಕೊಂಡಿದ್ದಾರೆ. ಇದೀಗ ಈ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಪೊಲೀಸ್ ಇಲಾಖೆಯು ವಿಡಿಯೋವೊಂದನ್ನು ಹಂಚಿಕೊಂಡಿದೆ.
ಹೌದು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ, ‘ಒತ್ತಬೇಡಿ ಗೊತ್ತಿಲ್ಲದ ಲಿಂಕ್, ಅದು ಪಕ್ಕಾ ಮೋಸಗಾರರ ಟ್ರಿಕ್, ನಿಮ್ಮ ಮೊಬೈಲ್ ಆಗುತ್ತೆ ಹ್ಯಾಕ್, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಆಗುತ್ತೆ ಬ್ಲಾಂಕ್ !!’ ಎಂದು ಬರೆದುಕೊಳ್ಳಲಾಗಿದೆ.
ಒತ್ತಬೇಡಿ ಗೊತ್ತಿಲ್ಲದ ಲಿಂಕ್,
ಅದು ಪಕ್ಕಾ ಮೋಸಗಾರರ ಟ್ರಿಕ್,
ನಿಮ್ಮ ಮೊಬೈಲ್ ಆಗುತ್ತೆ ಹ್ಯಾಕ್,
ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಆಗುತ್ತೆ ಬ್ಲಾಂಕ್ !!#Dial_1930@DgpKarnataka @CybercrimeCID pic.twitter.com/Ug0bA4p0kO— ಕರ್ನಾಟಕ ರಾಜ್ಯ ಪೊಲೀಸ್ Karnataka State Police (@KarnatakaCops) July 12, 2024
ಈ ವಿಡಿಯೋದಲ್ಲಿ ಎರಡು ಪ್ರಾಣಿಗಳು ಇರುವುದನ್ನು ಕಾಣಬಹುದು. ಇವು ಇಬ್ಬರು ಸ್ನೇಹಿತರಾಗಿದ್ದು, ಅವರಲ್ಲಿ ಒಂದು ಈ ಲಿಂಕ್ ಒತ್ತಿದ್ದರೆ ಹಣ ಡಬ್ಬಲ್ ಆಗುತ್ತಿದೆ ಎಂದು ಹೇಳುವುದನ್ನು ಕೇಳಬಹುದು. ನೀನು ಬಾ ಲಿಂಕ್ ಕ್ಲಿಕ್ ಮಾಡೋಣ ಎನ್ನುತ್ತಾನೆ. ಆಗ ಇನ್ನೊಬ್ಬನು ಬೇಡ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸುತ್ತಾನೆ. ಆದರೆ ಕೊನೆಗೆ ಸ್ನೇಹಿತನ ಮಾತನ್ನು ಕೇಳದೇ ಲಿಂಕ್ ಅನ್ನು ಕ್ಲೀಕ್ ಮಾಡಿ ಆಗ ಹಣ ಕಳೆದುಕೊಳ್ಳುವುದು ಈ ವಿಡಿಯೋದಲ್ಲಿರುವುದನ್ನು ನೋಡಬಹುದು.
ಇದನ್ನೂ ಓದಿ: 18 ದಿನದ ಮಗುವನ್ನು 1.5 ಲಕ್ಷ ರೂ.ಗೆ ಮಾರಾಟ ಮಾಡಿದ ತಂದೆ
ಈ ವಿಡಿಯೋವು ಹತ್ತೊಂಭತ್ತು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದ್ದು, ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ‘ಆನ್ಲೈನ್ ವಂಚಕರನ್ನು ಹಿಡಿದು ಶಿಕ್ಷೆ ಕೊಡಲು ಅಸಾಧ್ಯ ಸರ್ಕಾರ ಮತ್ತು ಸೈಬರ್ ಇಲಾಖೆಗೆ ವಂಚಕರು ಎಲ್ಲೆ ದೇಶ ವಿದೇಶದಲ್ಲಿ ಕುಳಿತರು ಹಿಡಿದು ಶಿಕ್ಷೆ ನೀಡಬೇಕು, ಆನ್ಲೈನ್ ವಂಚಕರಿಗೆ ಸರ್ಕಾರ ಮತ್ತು ಸೈಬರ್ ಇಲಾಖೆಗೆ ಭಯ ಎನಿಸುತ್ತದೆ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧಾರ ಮಾಡುತ್ತಿಲ್ಲ,!!!…’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಒಳ್ಳೆಯ ಸಂದೇಶ ತಿಳಿಸಿದ್ದರೆ ಸರ್ ಧನ್ಯವಾದಗಳು’ ಎಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Sat, 13 July 24