AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಭಿಕ್ಷೆ ಬೇಡುವ ಹುಡುಗಿಯ ಇಂಗ್ಲಿಷ್​​​ಗೆ ವಿದೇಶಿಗ ಫುಲ್ ಫಿದಾ, ವಿಡಿಯೋ ವೈರಲ್

ಇಂಗ್ಲಿಷ್ ಎಂದರೆ ಕೆಲವರಿಗೆ ಕಬ್ಬಿಣದ ಕಡಲೆ. ಆದರೆ ಬೀದಿ ಬದಿಯಲ್ಲಿ ಭಿಕ್ಷೆ ಬೇಡುವ ಬಾಲಕಿಯೊಬ್ಬಳು ವಿದೇಶಿಗನೊಂದಿಗೆ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಾನು ಶಾಲೆಗೆ ಹೋಗಿಲ್ಲ, ಭಿಕ್ಷಾಟನೆ ಮಾಡುವಾಗ ಇಂಗ್ಲಿಷ್ ಮಾತುಗಳನ್ನು ಕೇಳಿ ಕೇಳಿ ಕಲಿತಿರುವುದಾಗಿ ಆಕೆ ಹೇಳಿಕೊಂಡಿದ್ದು, ವಿದೇಶಿಗನು ಆಕೆಯ ಇಂಗ್ಲಿಷ್ ಮಾತನಾಡುವ ರೀತಿಗೆ ಫಿದಾ ಆಗಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Video : ಭಿಕ್ಷೆ ಬೇಡುವ ಹುಡುಗಿಯ ಇಂಗ್ಲಿಷ್​​​ಗೆ ವಿದೇಶಿಗ ಫುಲ್ ಫಿದಾ, ವಿಡಿಯೋ ವೈರಲ್
ವೈರಲ್​​ ವಿಡಿಯೋ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 14, 2024 | 11:58 AM

ಕೆಲವರಿಗೆ ಇಂಗ್ಲಿಷ್ ಎಂದರೆ ಅಷ್ಟಕಷ್ಟೆ. ಆದರೆ ಈ ಸ್ಪರ್ಧಾತ್ಮಕ ಯುಗದಲ್ಲಿ ಈ ಭಾಷೆ ಕಲಿಯುವುದು ಅನಿವಾರ್ಯ ಕೂಡ. ಹೀಗಾಗಿ ಕೆಲವರು ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಸೇರಿದಂತೆ ಇನ್ನಿತ್ತರ ಕೋರ್ಸ್ ಗಳಿಗೆ ತೆರಳಿ ಕಷ್ಟ ಪಟ್ಟು ಈ ಭಾಷೆ ಕಲಿಯುತ್ತಾರೆ. ಕೆಲವರು ಶಾಲೆಗೆ ಹೋಗದೇ ಪಟಪಟನೆ ಈ ಆಂಗ್ಲ ಭಾಷೆಯಲ್ಲಿ ಮಾತನಾಡುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಇಲ್ಲೊಬ್ಬಳು ಭಿಕ್ಷೆ ಬೇಡುವ ಬಾಲಕಿಯೊಬ್ಬಳು ಇಂಗ್ಲಿಷ್ ಮಾತನಾಡುವ ರೀತಿ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ವಿದೇಶಿಗನೊಂದಿಗೆ ಭಿಕ್ಷೆ ಬೇಡುವ ಬಾಲಕಿಯೊಬ್ಬಳು ಇಂಗ್ಲಿಷ್ ನಲ್ಲಿ ಮಾತನಾಡುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋವನ್ನು @azizkavish ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ತಾನು ರಾಜಸ್ತಾನದವಳು. ಬಡತನದ ಕಾರಣದಿಂದ ನನಗೆ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಆದರೆ ತನಗೂ ಶಾಲೆಗೆ ಹೋಗಬೇಕು ಎನ್ನುವ ಇಚ್ಛೆ ಇದೆ ಎಂದು ಇಂಗ್ಲಿಷ್ ನಲ್ಲಿಯೇ ಹೇಳಿಕೊಂಡಿದ್ದಾಳೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಹುಡುಗಿ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವುದನ್ನು ನೋಡಿ ಶಾಕ್ ಆಗಿರುವ ವಿದೇಶಿಗನು, ಯಾಕೆ ನೀನು ಭಿಕ್ಷೆ ಬೇಡುತ್ತಿದ್ದೀಯಾ? ಇಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಿ. ನಿನಗೆ ಕೆಲಸ ಸಿಗುತ್ತದೆ ಎಂದಿದ್ದಾನೆ. ಅದಕ್ಕೆ ಬಾಲಕಿಯು, ‘ನಾನು ಶಾಲೆಗೆ ಹೋಗಿಲ್ಲ. ಹೀಗಾಗಿ ಯಾರು ನನಗೆ ಕೆಲಸ ಕೊಡುವುದಿಲ್ಲ. ನಾನು ಬಡ ಕುಟುಂಬದಿಂದ ಬಂದಿದ್ದು, ತನ್ನ ಕುಟುಂಬವನ್ನು ಸಾಕಲು ನಾನು ಭಿಕ್ಷಾಟನೆ ಮಾಡಬೇಕಾಗಿದೆ ‘ ಎಂದು ಹೇಳಿದ್ದಾಳೆ. ಕೊನೆಗೆ, ‘ನಾನು ನಿನ್ನನ್ನು ಶಾಲೆಗೆ ಕಳುಹಿಸಿದರೆ ನೀನು ಹೋಗುತ್ತೀಯಾ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಹುಡುಗಿ ಹೌದು ಖಂಡಿತಾ ಹೋಗುತ್ತೇನೆ ಎಂದಿದ್ದಾಳೆ..

ಇದನ್ನೂ ಓದಿ: ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ರೈಲ್ವೇ ಸಿಬ್ಬಂದಿಯನ್ನು ಹೊಡೆದು ಕೊಂದ ಪ್ರಯಾಣಿಕರು

ಇದನ್ನು ಕೇಳಿದ ವಿದೇಶಿಗನು ಫೌಂಡೇಶನ್ ಮೂಲಕ ಅವಳಿಗೆ ಸಹಾಯ ಮಾಡುವುದಾಗಿ ಈ ವಿಡಿಯೋದಲ್ಲಿ ತಿಳಿಸಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ. ಈ ವಿಡಿಯೋವನ್ನು ನೆಟ್ಟಿಗರು ವೀಕ್ಷಿಸಿದ್ದು, ಮೆಚ್ಚುಗೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನೆಟ್ಟಿಗನೊಬ್ಬರು, ಆಕೆಯ ಆತ್ಮವಿಶ್ವಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಮತ್ತೊಬ್ಬನು,’ ಪ್ರತಿಭೆ ಯಾವುದೇ ಸಂದರ್ಭದಲ್ಲೂ ಮರೆಯಾಗಲು ಸಾಧ್ಯವಿಲ್ಲ. ಸರಿಯಾದ ನಿರ್ದೇಶನ ಮತ್ತು ಬೆಂಬಲದ ಅಗತ್ಯವಿದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾನೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ