ಕ್ಯಾಬ್ ಡ್ರೈವರ್​​​ನ್ನು ನೋಡಿ ಶಾಕ್ ಆದ ಮಹಿಳೆ, ಅಸಲಿ ಕಥೆ ಇಲ್ಲಿದೆ ನೋಡಿ

ಬೆಂಗಳೂರಿನಂತಹ ನಗರದಲ್ಲಿ ಕೈ ತುಂಬಾ ಸಂಬಳವಿದ್ದರೂ ಜೀವನ ನಡೆಸುವುದು ತುಂಬಾನೇ ಕಷ್ಟ. ಹೀಗಾಗಿ ಕೆಲವರು ಕೈಯಲ್ಲಿ ಉದ್ಯೋಗವಿದ್ದರೂ ಕೂಡ ಪಾರ್ಟ್ ಟೈಮ್ ಆಗಿ ಮತ್ತೊಂದು ಕೆಲಸವನ್ನು ನೆಚ್ಚಿಕೊಂಡಿರುತ್ತಾರೆ. ಇದೀಗ ಬೆಂಗಳೂರಿನ ಮಹಿಳೆಯೊಬ್ಬರು ಕ್ಯಾಬ್ ಬುಕ್ ಮಾಡಿದ್ದು, ಈ ವೇಳೆಯಲ್ಲಿ ಕ್ಯಾಬ್ ಡ್ರೈವರ್ ತನ್ನ ಕಂಪೆನಿಯ ಟೀಮ್ ಲೀಡ್ ಎಂದು ತಿಳಿದು ಶಾಕ್ ಆಗಿದ್ದಾರೆ. ಈ ಕುರಿತಾದ ಪೋಸ್ಟ್‌ವೊಂದು ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಕ್ಯಾಬ್ ಡ್ರೈವರ್​​​ನ್ನು ನೋಡಿ ಶಾಕ್ ಆದ ಮಹಿಳೆ, ಅಸಲಿ ಕಥೆ ಇಲ್ಲಿದೆ ನೋಡಿ
ವೈರಲ್ ಪೋಸ್ಟ್‌
Image Credit source: Twitter

Updated on: May 28, 2025 | 10:50 AM

ಬೆಂಗಳೂರು, ಮೇ 28 : ಬೆಂಗಳೂರಿ (Bengaluru)ನಂತಹ ನಗರಗಳಲ್ಲಿ ದುಡಿಯುವವರ ಪಾಡು ಹೇಳತೀರದು. ಎಷ್ಟೇ ಒತ್ತಡವಿರಲಿ, ಕುಟುಂಬದ ಜವಾಬ್ದಾರಿ ಹಾಗೂ ಅನಿವಾರ್ಯತೆ ಕಾರಣಗಳಿಂದ ದುಡಿಯುವುದು ಅನಿವಾರ್ಯವಾಗಿರುತ್ತದೆ. ಕೆಲವರಂತೂ ಇರುವ ಸ್ವಲ್ಪ ಸಮಯದಲ್ಲಿ ಎರಡೆರಡು ಕಡೆಯಲ್ಲಿ ಉದ್ಯೋಗ ಮಾಡುತ್ತಾ ಎಲ್ಲವನ್ನು ಸಂಭಾಳಿಸಿಕೊಂಡು ಹೋಗುತ್ತಾರೆ. ಹೀಗಿರುವಾಗ ಬೆಂಗಳೂರಿನ ಮಹಿಳೆಯೊಬ್ಬರು ಕ್ಯಾಬ್ ಬುಕ್ ಮಾಡಿದ ವೇಳೆಯಲ್ಲಿ ಡ್ರೈವರ್ (Driver) ಆಗಿ ಬಂದ ವ್ಯಕ್ತಿಯನ್ನು ಕಂಡು ಶಾಕ್ ಆಗಿದ್ದಾರೆ. ತನಗಾದ ಅನುಭವವನ್ನು ತನ್ನ ಸ್ನೇಹಿತನೊಂದಿಗೆ ಹಂಚಿಕೊಂಡಿದ್ದು ಈ ಪೋಸ್ಟ್‌ವೊಂದು  ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

@epicnephrin ಹೆಸರಿನ ಖಾತೆಯಲ್ಲಿ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದು ಇದರಲ್ಲಿ ಮಹಿಳೆಯೊಬ್ಬರು ತನ್ನ ಸ್ನೇಹಿತನಿಗೆ ಮಾಡಿರುವ ಮೆಸೇಜ್‌ನ್ನು ಕಾಣಬಹುದು. ಈ ಮೆಸೇಜ್‌ನಲ್ಲಿ,  ತಮಾಷೆಯ ಸಂಗತಿ ನಡೆಯಿತು. ನಾನು ಊಬರ್ ಬುಕ್ ಮಾಡಿದೆ, ಆದರೆ ನನ್ನ ಪಿಕಪ್ ಮಾಡಲು ಬಂದವರು ನಾನು ಕೆಲಸ ಮಾಡುವ ಕಂಪೆನಿಯ ಟೀಮ್ ಲೀಡ್ ಎಂದಿರುವುದನ್ನು ನೋಡಬಹುದು. ಈ ವ್ಯಕ್ತಿಯೂ ಈ ಊಬರ್ ಡ್ರೈವಿಂಗ್ ಮಾಡುವುದರ ಹಿಂದಿನ ಕಾರಣ ಬಿಚ್ಚಿಟ್ಟಿದ್ದು, ನಾನು ನನ್ನ ಸಂತೋಷಕ್ಕಾಗಿ ಹಾಗೂ ಬೇಸರವನ್ನು ಕಡಿಮೆ ಮಾಡಲು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿರುವ ಬಗ್ಗೆ ಈ ಮಹಿಳೆ ಸ್ನೇಹಿತನೊಂದಿಗೆ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ
ಮಡದಿಗೆ ನೈಲ್ ಪಾಲಿಶ್ ಹಚ್ಚಿದ ವೃದ್ಧ
ಪತ್ನಿ ಹೆರಿಗೆ ನೋವು ಅನುಭವಿಸುವುದನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಪತಿ
ಕರೆಂಟ್ ಬೇಲಿ ದಾಟಲು ಆನೆ ಬಳಸಿದ ಈ ಟ್ರಿಕ್, ನಿಮಗೂ ಉಪಯೋಗಕ್ಕೆ ಬರಬಹುದು
ರಸ್ತೆಯಲ್ಲಿ ಹೋಗುತ್ತಿದ್ದ ಬುರ್ಖಾದಾರಿ ಮಹಿಳೆಗೆ ಕಿಸ್​​ ಮಾಡಿ ಹೋದ ಯುವಕ

ಇದನ್ನೂ ಓದಿ : ದೇಹಕ್ಕೆ ಮಾತ್ರ ವಯಸ್ಸು, ನಮ್ಮ ಪ್ರೀತಿ, ಕಾಳಜಿಗಳಲ್ಲ, ಮಡದಿಗೆ ನೈಲ್ ಪಾಲಿಶ್ ಹಚ್ಚಿದ ವೃದ್ಧ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದಂತೆ ಇಪ್ಪತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವ್ಯಕ್ತಿಯ ಟ್ಯಾಲೆಂಟ್‌ನ್ನು ಮೆಚ್ಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು, ಬೆಂಗಳೂರಿನ ಜನರಿಗೆ ಅಷ್ಟೊಂದು ಸಮಯವಿದೆ ಎಂದಿದ್ದಾರೆ. ಇನ್ನೊಬ್ಬರು, ಯಾರು ಕೂಡ ಎರಡು ಉದ್ಯೋಗವನ್ನು ಬೇಸರ ಕಳೆಯಲು ಮಾಡುವುದಿಲ್ಲ. ಅವರು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿರಬಹುದು ಎಂದಿದ್ದಾರೆ. ಮತ್ತೊಬ್ಬರು, ಟೀಮ್ ಲೀಡರ್ ಇಷ್ಟೊಂದು ಫ್ರೀ ಆಗಿರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ