
ಬೆಂಗಳೂರು, ನವೆಂಬರ್ 26: ಇತ್ತೀಚೆಗಿನ ದಿನಗಳಲ್ಲಿ ಓದಿದ ಯುವಕರೂ ಕೂಡ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಬೆಂಗಳೂರಿನ (Bengaluru) ಯುವಕನು ಬೆಳಗಿನ ವಾಕಿಂಗ್ಗೆಂದು ಮನೆಯಿಂದ ಹೊರಟಿದ್ದಾರೆ. ಆದರೆ ಏಕಾಏಕಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಮುಂದಾಗಿದ್ದಾನೆ. ಹೌದು, ಈ ಯುವಕ ಡೆಲಿವರಿ ಬಾಯ್ ಆಗಿ ಬದಲಾದದ್ದರ ಹಿಂದೆ ಕಾರಣವಿದೆ. ಈ ಹೃದಯ ಸ್ಪರ್ಶಿ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಯುವಕನ ಒಳ್ಳೆತನಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಆರ್/ ಬೆಂಗಳೂರು ಸೋಶಿಯಲ್ (r/Bangalore Social) ಹೆಸರಿನ ರೆಡ್ಡಿಟ್ ನಲ್ಲಿ ಯುವಕ ಪೋಸ್ಟ್ ಹಂಚಿಕೊಂಡಿದ್ದು ಈ ಘಟನೆಯ ಬಗ್ಗೆ ವಿವರಿಸಿದ್ದಾನೆ. ಈ ಪೋಸ್ಟ್ ನಲ್ಲಿ ಬೆಳಗ್ಗೆ 11:30ರ ಸುಮಾರಿಗೆ ಗೆಳೆಯನ ಮನೆಯಿಂದ ತಮ್ಮ ಮನೆಗೆ ನಡೆದುಕೊಂಡು ಬರುತ್ತಿದ್ದೆ. ಆ ವೇಳೆ ರಸ್ತೆಯಲ್ಲಿ ಫುಡ್ ಡೆಲಿವರಿ ಬಾಯ್ ಒಬ್ಬರು ಅಪಘಾತಕ್ಕೀಡಾಗಿ ಬಿದ್ದಿರುವುದನ್ನು ನೋಡಿದೆ. ಹಿಂದೆ ಮುಂದೇ ನೋಡದೇ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆ. ಆದರೆ ಏನು ತೊಂದರೆಯಾಗಿರಲಿಲ್ಲ. ಸಣ್ಣ ಅಪಘಾತದಿಂದಾಗಿ ಗ್ರಾಹಕರಿಗೆ ಆರ್ಡರ್ ತಲುಪಿಸಲು ಡೆಲಿವರಿ ಬಾಯ್ ಗೆ ಸಾಧ್ಯವಿರಲಿಲ್ಲ. ಬಾಕಿ ಇದ್ದ ಆರ್ಡರ್ ಗಳನ್ನು ನೋಡಿದ ನಾನು, ಈ ಆರ್ಡರ್ ಗಳನ್ನು ತಲುಪಿಸಲೇ ಎಂದು ಕೇಳಿದೆ. ಕೊನೆಗೆ ಈ ವಿಳಾಸ ಹುಡುಕಿಕೊಂಡು ಹೋಗಿ ಬಾಕಿ ಉಳಿದಿದ್ದ ಆರ್ಡರ್ ಗಳನ್ನು ನಾನೇ ತಲುಪಿಸಿ ಬಂದೆ ಎಂದು ಹೇಳಿದ್ದಾನೆ.
Went out for a walk and somehow ended up delivering food orders today 😂
by
u/BassOwn1919 in
BangaloreSocial
ಗಾಯಗೊಂಡಿದ್ದ ಡೆಲಿವರಿ ಬಾಯ್ ನನ್ನು ನಾನೇ ಮನೆಗೆ ಡ್ರಾಪ್ ಮಾಡಲು ಮುಂದಾದೆ. ಇದೇ ವೇಳೆ ಆತನ ಜತೆಗೆ ಮಾತನಾಡುತ್ತಿದ್ದ ವೇಳೆ ಕೆಲವು ಅಚ್ಚರಿ ವಿಚಾರ ತಿಳಿಯಿತು. ತಾನು ಫುಡ್ ಡೆಲಿವರಿ ಕೆಲಸದಿಂದ ತಿಂಗಳಿಗೆ ಸುಮಾರು 50,000 ರಿಂದ 60,000 ರೂ ಸಂಪಾದಿಸುತ್ತೇನೆ ಎಂದು ಡೆಲಿವರಿ ಬಾಯ್ ನನಗೆ ಹೇಳಿದ. ಒಮ್ಮೆ ಅಚ್ಚರಿಯಾದ್ರು ಶ್ರಮಕ್ಕೆ ತಕ್ಕ ಪ್ರತಿಫಲ ಎಂದುಕೊಂಡೆ. ಈ ಪೋಸ್ಟ್ ನ ಕೊನೆಗೆ ಗಾಯಗೊಂಡಿದ್ದ ಡೆಲಿವರಿ ಬಾಯ್ ಆರೋಗ್ಯವಾಗಿದ್ದಾನೆ ಎಂದು ಭಾವಿಸುತ್ತೇನೆ ಎಂದು ಹೇಳಿರುವುದನ್ನು ಕಾಣಬಹುದು.
ಇದನ್ನೂ ಓದಿ: ತಿಂಗಳ ಸಂಪಾದನೆ 40 ಸಾವಿರ ರೂ, ಟೈಮಿಂಗ್ಸ್ ಫಿಕ್ಸ್; ಇದು ಬೆಂಗಳೂರಿನಲ್ಲಿ ಅಡುಗೆ ಮನೆ ಕೆಲಸ ಮಾಡುವ ಮಹಿಳೆಯ ವರ್ಕ್ ಲೈಫ್
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸುವುದು ಸಹಜ, ಆದರೆ ಆತನ ಕೆಲಸವನ್ನು ತಾವು ಮಾಡಿದ್ದು ನಿಜಕ್ಕೂ ಮೆಚ್ಚುವಂತಹದ್ದು ಎಂದಿದ್ದಾರೆ. ಇನ್ನೊಬ್ಬರು, ನೀವು ಎಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅದ್ಭುತ ಕೆಲಸ ಮಾಡಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ