
ಬೆಂಗಳೂರು, ಸೆಪ್ಟೆಂಬರ್ 07: ಅಪ್ಪ ಅಂದ್ರೆನೇ ಹಾಗೆ, ಸಂಸಾರದ ಜವಾಬ್ದಾರಿ ತನ್ನ ಹೆಗಲ ಮೇಲೆ ಇದ್ರೂ ತನ್ನ ಮಕ್ಕಳ ನಗುವನ್ನೇ ಕಂಡು ಎಲ್ಲವನ್ನು ಮರೆಯುತ್ತಾನೆ. ರಾತ್ರಿ ಹಗಲು ಎನ್ನದೇ ದುಡಿಯುವ ತಂದೆಗೆ ತನ್ನ ಹೆಂಡತಿ ಮಕ್ಕಳೇ ಪ್ರಪಂಚ. ಇಲ್ಲೊಬ್ಬ ಬೆಂಗಳೂರಿನ ಆಟೋ ಚಾಲಕ (Bengaluru auto driver) ತನ್ನ ಬದುಕಿನ ಬಂಡಿಯನ್ನು ಸಾಗಿಸಲು ಮಾಡಿರುವ ಕೆಲಸ ನೋಡಿದ್ರೆ ಕರುಳು ಚುರ್ ಎನ್ನುತ್ತೆ. ಎದೆ ಮೇಲೆ ಕಂದಮ್ಮನನ್ನು ಮಲಗಿಸಿಕೊಂಡಿರುವ ವ್ಯಕ್ತಿಯೂ ಆಟೋ ಓಡಿಸಿ ತನ್ನ ಜೀವನವನ್ನು ಸಾಗಿಸುತ್ತಿದ್ದಾನೆ. ರಿತು (Rithu) ಎಂಬ ಮಹಿಳೆ ಮಹಿಳೆ ಹಂಚಿಕೊಂಡಿರುವ ಈ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
rithuuuuuu ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋಗೆ ಈ ಆಟೋ ಚಾಲಕ ಜೀವನ ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ರೂ, ತನ್ನ ಜೀವವೇ ಆಗಿರುವ ಕಂದಮ್ಮನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ತನ್ನ ಮಗುವನ್ನು ಎದೆಗೆ ಅಪ್ಪಿಕೊಂಡು ಆಟೋ ಓಡಿಸುತ್ತಿರುವ ದೃಶ್ಯವನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ:Video: ಈ ಅಪ್ಪ ಎಷ್ಟು ಖತರ್ನಾಕ್ ನೋಡಿ; ಉಪಾಯದಿಂದ ಪುಟಾಣಿಯನ್ನು ಶಾಲಾ ಬಸ್ ಹತ್ತಿಸಿದ ತಂದೆ
ಈ ವಿಡಿಯೋ ಏಳು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ನಿಮಗೆ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ವೈಯುಕ್ತಿಕವಾಗಿ ಭಾವನಾತ್ಮಕ ವಿಡಿಯೋ ಆಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಅತ್ಯಂತ ಪ್ರಭಾವಶಾಲಿ ಹಾಗೂ ಸೂಪರ್ ಡ್ಯಾಡ್ ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ವಿಡಿಯೋ ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:02 pm, Sun, 7 September 25