Viral: ಇದು ಪರ್ಫೆಕ್ಟ್ ಮಾರ್ಕೆಟಿಂಗ್‌ ತಂತ್ರ; ಬೆಂಗಳೂರಿನ ಸೀರೆ ಮಳಿಗೆಯಲ್ಲಿ ಗಮನ ಸೆಳೆದ ಚಾಟ್ ಜಿಪಿಟಿ ಪ್ರೇರಿತ ಜಾಹೀರಾತು

ಪ್ರತಿಯೊಂದು ಮಳಿಗೆಗಳು, ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ವಿಶಿಷ್ಟ ರೀತಿಯ ಮಾರುಕಟ್ಟೆ ತಂತ್ರಗಳನ್ನು ಬಳಸುತ್ತವೆ. ಆದರೆ ಬೆಂಗಳೂರಿನ ನಾವೀನ್ಯತೆಯನ್ನು ಪ್ರದರ್ಶಿಸುವ ಈ ಸೀರೆ ಅಂಗಡಿಯೂ ಗ್ರಾಹಕರನ್ನು ಸೆಳೆಯಲು ತಂತ್ರಜ್ಞಾನವನ್ನು ಬಳಸಿಕೊಂಡು ವಿಶಿಷ್ಟವಾಗಿ ಜಾಹೀರಾತು ನೀಡಿದೆ. ಚಾಟ್ ಜಿಪಿಟಿ ಪ್ರೇರಿತ ಮೊಬೈಲ್ ಡಿಸ್ಪ್ಲೇ ವಿನ್ಯಾಸ ಹೊಂದಿರುವ ಜಾಹೀರಾತನ್ನು ಬಳಸಿಕೊಂಡು ಗ್ರಾಹಕರ ಗಮನ ಸೆಳೆದಿದೆ. ಇದೀಗ ಕೃತಕ ಬುದ್ಧಿ ಮತ್ತೆ ಆಧಾರಿತ ಡಿಸ್ಪ್ಲೇ ಜಾಹೀರಾತು ತಂತ್ರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Viral: ಇದು ಪರ್ಫೆಕ್ಟ್ ಮಾರ್ಕೆಟಿಂಗ್‌ ತಂತ್ರ; ಬೆಂಗಳೂರಿನ ಸೀರೆ ಮಳಿಗೆಯಲ್ಲಿ ಗಮನ ಸೆಳೆದ ಚಾಟ್ ಜಿಪಿಟಿ ಪ್ರೇರಿತ ಜಾಹೀರಾತು
ವೈರಲ್‌ ಪೋಸ್ಟ್‌
Image Credit source: Twitter

Updated on: Aug 06, 2025 | 2:57 PM

ಬೆಂಗಳೂರು, ಆಗಸ್ಟ್ 06: ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದು ಬ್ರ್ಯಾಂಡ್‌ (brand) ಮಾರುಕಟ್ಟೆಯಲ್ಲಿ ಜನರಿಗೆ ಹತ್ತಿರವಾಗಬೇಕೆಂದು ನಾನಾ ರೀತಿಯ ಕಸರತ್ತು ಮಾಡುತ್ತವೆ. ಬಗೆ ಬಗೆಯ ಕ್ರಿಯೇಟಿವ್‌ ಮಾರುಕಟ್ಟೆ ತಂತ್ರಗಳನ್ನು ಅನುಸರಿಸುತ್ತದೆ. ಗ್ರಾಹಕರನ್ನು ಆಕರ್ಷಿಸಲು ವಿಭಿನ್ನ ರೀತಿಯ ಜಾಹೀರಾತನ್ನು ನೀಡುತ್ತವೆ. ಆದರೆ ಇಂದಿನ ತಂತ್ರಜ್ಞಾನದ ಯುಗದಲ್ಲಿ ಬೆಂಗಳೂರಿನ ಸೀರೆ ಅಂಗಡಿಯೊಂದು (Bengaluru Saree Store’s)  ಚಾಟ್ ಜಿಪಿಟಿಯನ್ನೇ (Chat GPT) ಜಾಹೀರಾತಿನ ಭಾಗವಾಗಿ ಬಳಸಿಕೊಂಡಿವೆ. ಅದೇಗೆ ಅಂತೀರಾ?. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಾಟ್ ಜಿಪಿಟಿ ಪ್ರೇರಿತ ಮೊಬೈಲ್ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿರುವ ವಿಶಿಷ್ಟ ಜಾಹೀರಾತಿನ ಮೂಲಕ ಗ್ರಾಹಕರ ಗಮನ ಸೆಳೆಯುವ ಪ್ರಯತ್ನ ಮಾಡಿದೆ. ಈ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

@os7borne ಹೆಸರಿನ ಎಕ್ಸ್ ಖಾತೆಯಲ್ಲಿ ಜಾಹೀರಾತಿನ ಈ ಫೋಟೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ChatGPT ಪರದೆಯಲ್ಲಿ “ವರಮಹಾಲಕ್ಷ್ಮಿ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ?” ಎಂದು ಹೇಳುವ ChatGPT ಮೊಬೈಲ್ ಇಂಟರ್ಫೇಸ್ ಬಳಸಿರುವುದನ್ನು ನೀವಿಲ್ಲಿ ನೋಡಬಹುದು. ತಂತ್ರಜ್ಞಾನವನ್ನೇ ಬಳಸಿಕೊಂಡು ಗ್ರಾಹಕರ ಗಮನ ಸೆಳೆಯುವ ಪ್ರಯತ್ನವಿದು ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ.

ಇದನ್ನೂ ಓದಿ
ಆಟೋ ಓಡಿಸಿಕೊಂಡು ಈ ಚಾಲಕ ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ
ಗೇಲಿ ಮಾಡಿದ ಸಂಬಂಧಿಕರಿಗೆ ತಕ್ಕ ಉತ್ತರ ನೀಡಿದ ಯುವಕ, ಏನ್‌ ಮಾಡಿದ ನೋಡಿ
ಈ ಕೆಲಸ ಗೊತ್ತಿದ್ರೆ 30 ನಿಮಿಷಕ್ಕೆ 2000 ರೂ ದುಡಿಯಬಹುದಂತೆ
ಗ್ರಾಹಕರಿಗೆ ವಿಶೇಷ ಸೂಚನೆ : ಚಹಾ ಅಂಗಡಿಯ ಗೋಡೆಯ ಮೇಲೆ ವಿಶಿಷ್ಟ ಪೋಸ್ಟರ್

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಫೋಟೋ ಹಂಚಿಕೊಂಡ ಬಳಕೆದಾರ ಬೆಂಗಳೂರಿನ ಸ್ಥಳೀಯ ಸೀರೆ ಅಂಗಡಿಯಲ್ಲಿ ಜಾಹೀರಾತಿಗಾಗಿ ChatGPT ಮೊಬೈಲ್ ಇಂಟರ್ಫೇಸ್ ಬಳಸುವುದು ಇದೇ ಮೊದಲು. ಇದಕ್ಕೂ ಮೊದಲು, ಇದು Google ಹುಡುಕಾಟ ಪಟ್ಟಿಯ ವಿನ್ಯಾಸವಾಗಿತ್ತು. ಇಂತಹದ್ದೆಲ್ಲವನ್ನು ಬೆಂಗಳೂರಿನಲ್ಲಿ ಮಾತ್ರ ಸಾಧ್ಯ ಎಂದು ನಾನು ಭಾವಿಸುತ್ತೇನೆ” ಎಂದು ಹೀಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Viral: ಇಲ್ಲಿ ಯಾವ ಪೇನು ಇಲ್ಲ, ದುಡ್ಡು ಕೊಡು ಬೋಂಡಾ ತಿನ್ನು, ದುಡ್ಡು ಕೊಡು ಟೀ ಕುಡಿ, ಗ್ರಾಹಕರಿಗೆ ವಿಶೇಷ ಸೂಚನೆ

ಬಳಕೆದಾರರ ಕಾಮೆಂಟ್‌ಗಳು ಹೀಗಿವೆ

ಈ ಪೋಸ್ಟ್ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಅದ್ಭುತ, ಇಂತಹ ಬದಲಾವಣೆಯೂ ಬೆಂಗಳೂರಿನಲ್ಲಿ ಆರಂಭವಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಸ್ಥಳೀಯರು ಸೀರೆ ಅಂಗಡಿಗೆ ನಿಯಮಿತವಾಗಿ ಭೇಟಿ ನೀಡುವುಸದನ್ನು ಪ್ರೋತ್ಸಾಹಿಸುವುದೇ ಇದರ ಮೂಲ ಉದ್ದೇಶ ಎಂದು ಕಾಮೆಂಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತ್ರ ಸೀರೆ ಅಂಗಡಿ ಹಾಗೂ ಆಟೋ ಚಾಲಕ ಈ ರೀತಿ ತಂತ್ರಜ್ಞಾನ ಬಳಸಿ ವೈರಲ್ ಆಗಬಹುದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ