ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಲವಾರು ಪ್ರಸಿದ್ಧ ಹೋಟೆಲ್‌ಗಳಿವೆ. ಅಂತಹ ಹೋಟೆಲ್‌ಗಳಲ್ಲಿ CTR (ಶ್ರೀ ಸಾಗರ್ ಸೆಂಟ್ರಲ್ ಟಿಫಿನ್ ರೂಮ್) ಕೂಡಾ ಒಂದು. ಮಲ್ಲೇಶ್ವರಂನಲ್ಲಿರುವ ಈ ಹೋಟೆಲ್ ರುಚಿಕರವಾದ ಮಾಸಾಲೆ ದೋಸೆಗೆ ಹೆಸರುವಾಸಿಯಾಗಿದೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನವರರೆಗೆ ಹೆಚ್ಚಿನವರು ದಕ್ಷಿಣ ಭಾರತೀಯ ಭಕ್ಷ್ಯಗಳನ್ನು ಸವಿಯಲು ಇಲ್ಲಿಗೆ ಭೇಟಿ ನೀಡುತ್ತಾರೆ. ಮತ್ತು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ತಮ್ಮಿಷ್ಟದ ಖಾದ್ಯ ಸವಿದು ಹೋಗ್ತಾರೆ. ಇಲ್ಲೊಬ್ರು ಮಹಿಳೆ CTR ಮುಂದೆ ಯಾರಪ್ಪಾ ಗಂಟೆಗಟ್ಟಲೆ ಕಾಯ್ತರೆ ಎನ್ನುತ್ತಾ ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ CTR ಮುಂದೆ ನಿಂತು ಅದೇ ಹೋಟೆಲ್‌ನಿಂದ ಥಟ್ಟನೆ ಝೊಮ್ಯಾಟೊದಿಂದ ಬೆಣ್ಣೆ ದೋಸೆ ಆರ್ಡರ್ ಮಾಡಿ ಸವಿದಿದ್ದಾರೆ. ಈ ಕುರಿತ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ CTR ಮುಂದೆ ಜನ ಕ್ಯೂನಲ್ಲಿ ನಿಂತಿರ್ತಾರೆ. ಹೀಗೆ ಕಾದು ಕಾದು ಹೋಟೆಲ್‌ಗೆ ಹೋದ್ರು ಆರ್ಡರ್ ಮಾಡಿದ ದೋಸೆ ಬರೋದಕ್ಕೆ ಸುಮಾರು 40 ನಿಮಿಷಗಳಾದ್ರೂ ತಗುಲುತ್ತದೆ. ಹೀಗಾದ್ರೆ ಖಂಡಿತವಾಗಿಯೂ ನಾವು ಸಿನಿಮಾ ಥಿಯೇಟರ್‌ಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಿಲ್ಲ ಎಂದು ಬುದ್ಧಿವಂತಿಕೆಯನ್ನು ಉಪಯೋಗಿಸಿದ ಮಹಿಳೆಯೊಬ್ಬರು CTR ಮುಂದೆಯೇ ನಿಂತು ಝೊಮ್ಯಾಟೊದಲ್ಲಿ ಬೆಣ್ಣೆ ದೋಸೆ ಆರ್ಡರ್ ಮಾಡಿ ಸವಿದಿದ್ದಾರೆ. ಆರ್ಡರ್ ಮಾಡಿದ ಕೇವಲ 20 ನಿಮಿಷಗಳ ಒಳಗೆ ಬೆಣ್ಣೆ ದೋಸೆ ಡೆಲಿವರಿ ಆಗಿದ್ದು, ಸ್ನೇಹಿತರೊಂದಿಗೆ ಕಾರಿನಲ್ಲಿ ಕುಳಿತು ಆಕೆ ಬೆಣ್ಣೆ ದೋಸೆ ಸವಿದಿದ್ದಾರೆ.
Yesterday we had a @peakbengaluru moment:
– The queue was too long at CTR and we would be late for our #UiTheMovie if we had waited in the line.
– Opened Zomato, ordered BeNNe masale dosae and Kharabath to a location just outside CTR to minimise inconvenience to the driver
— Anubha (@artbyahbuna) December 26, 2024
arbyahbuna ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ 88 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಐಡಿಯಾ ಮಸ್ತ್ ಆಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇನ್ನು ಮುಂದೆ ನಾವು ಕೂಡಾ ಇದೇ ಐಡಿಯಾವನ್ನು ಅಳವಡಿಸುತ್ತೇವೆʼ ಎಂದು ಹೇಳಿದ್ದಾರೆ.
ವೈರಲ್ ಸುಸ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Mon, 30 December 24