
ಬೆಂಗಳೂರಿನಂತಹ ನಗರಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ ಕಾರಣ ಮನೆಯ ಕೆಲಸವನ್ನು ಮಾಡಲು ಸಮಯವಿಲ್ಲ. ಹೀಗಾಗಿ ದಿನನಿತ್ಯದ ಕೆಲಸವನ್ನು ಮಾಡಲು ಕೆಲಸದಾಕೆಯನ್ನು ಇಟ್ಟುಕೊಂಡಿರುತ್ತಾರೆ. ಒಂದು ವೇಳೆ ಮನೆಕೆಲಸ ದಾಕೆಗೆ ಒಂದು ದಿನ ರಜೆ ಹಾಕಿದ್ರೆ ಮುಗಿದೇ ಹೋಯಿತು. ಎಲ್ಲವನ್ನು ಮ್ಯಾನೇಜ್ ಮಾಡಿಕೊಂಡು ಹೋಗುವುದು ಕಷ್ಟ. ಅದಲ್ಲದೇ, ಕೆಲಸದಾಕೆ ರಜೆ ಹಾಕಿದ್ರೆ ಸಂಬಳ ಹೇಗೆ ಕೊಡೋದು ಎನ್ನುವ ಗೊಂದಲಗಳು ಮೂಡುತ್ತವೆ. ಇದೀಗ ಇಂತಹದ್ದೆ ಗೊಂದಲದಲ್ಲಿ ಮಹಿಳೆಯೊಬ್ಬರು ತನ್ನ ಮನೆಕೆಲಸದಾಕೆಯೂ ಹತ್ತು ದಿನಗಳ ಕಾಲ ರಜೆ ಹಾಕಿದ್ದು, ಸಂಬಳ ಕಡಿತಗೊಳಿಸಬೇಕೇ ಅಥವಾ ಬೇಡವೇ ಎಂದು ರೆಡ್ಡಿಟ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯ ಸಲಹೆಗಳನ್ನು ನೀಡಿದ್ದಾರೆ.
ಮಹಿಳೆಯೂ ಪೋಸ್ಟ್ ನಲ್ಲಿ, ‘ನಾನು ನಿಜವಾಗಿಯೂ ನನ್ನನ್ನು ನ್ಯಾಯಯುತ ವ್ಯಕ್ತಿ ಎಂದು ಪರಿಗಣಿಸುತ್ತೇನೆ. ನಾನು ಅವಳಿಗೆ ಆರೋಗ್ಯ ವಿಮೆ ಪಡೆಯಲು ಸಹಾಯ ಮಾಡಿದ್ದೇನೆ ಮತ್ತು ಅವಳಿಗೆ ಬೋನಸ್‌ಗಳು ಮತ್ತು ಅವಳು ಕೇಳುವ ಎಲ್ಲಾ ವಸ್ತುಗಳನ್ನು ನೀಡಿದ್ದೇನೆ. ಒಂದೆರಡು ದಿನಗಳ ರಜೆ ನೀಡಲು ನನಗೆ ಅಭ್ಯಂತರವಿಲ್ಲ. ಇದು ಸಾಮಾನ್ಯ – ಎಲ್ಲರಿಗೂ ವಿರಾಮ ಬೇಕು – ಆದರೆ ಅವಳು 10 ದಿನಗಳು ರಜೆ ತೆಗೆದುಕೊಂಡಾಗ, ಸಂಬಳ ಕಡಿತವು ಸಮಂಜಸವಲ್ಲವೇ, ಈ ರಜೆಯೂ ತಿಂಗಳ ಮೂರನೇ ಒಂದು ಭಾಗಕ್ಕೆ ಸಮಾನ’ ಎಂದು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ.
Do people ever cut their maid’s salary?
byu/theparadoxicalnaari inbangalore
‘ಬೇರೆ ಯಾರೂ ನನ್ನ ಸಂಬಳವನ್ನು ಕಡಿತಗೊಳಿಸಲಿಲ್ಲ, ನೀವು ಅದನ್ನು ಏಕೆ ಕಡಿತಗೊಳಿಸಿದ್ದೀರಿ (ಪ್ರತಿ ತಿಂಗಳು ಅವಳ ಸಂಬಂಧಿಕರು ಆಸ್ಪತ್ರೆಯಲ್ಲಿರುತ್ತಾರೆ ಇಲ್ಲದಿದ್ದರೆ ಸಾಯುತ್ತಿರುತ್ತಾರೆ) ಎಂದು ಕೇಳಿದಾಗ ನನಗೆ ಅಪರಾಧಿ ಭಾವನೆ ಕಾಡುತ್ತದೆ. ನಾನು ಅವಳ ಕುಟುಂಬಕ್ಕೆ ಔಷಧಿಗಳನ್ನು ಖರೀದಿಸಿದ್ದೇನೆ, ಅವಳ ಮನೆಗೆ ಅವಳನ್ನು ಡ್ರಾಪ್ ಮಾಡಿದ್ದೇನೆ. ವಿಮೆಯನ್ನು ಹೇಗೆ ಬಳಸಬೇಕೆಂದು ಅವಳಿಗೆ ಹೇಳಿದ್ದೇನೆ’ ಎಂದಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಕೆಲವೇ ಕ್ಷಣಗಳಲ್ಲಿ ಪತ್ನಿಗೆ ಕಪಾಳಮೋಕ್ಷ ಮಾಡಿದ ಪೊಲೀಸಪ್ಪ; ವಿಡಿಯೋ ವೈರಲ್
ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಉತ್ಸಾಹಭರಿತ ಚರ್ಚೆಗೆ ಕಾರಣವಾಗಿದೆ. ಬಳಕೆದಾರರು ಈ ಮಹಿಳೆಯ ಸಮಸ್ಯೆಗೆ ಸೃಜನಶೀಲ ಪರಿಹಾರಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು, ಕೆಲಸದಾಕೆಯ ಗೈರುಹಾಜರಿಯನ್ನು ಇತರ ಯಾವುದೇ ಕೆಲಸದಂತೆ, ನಿಗದಿತ ನಿಯಮಗಳು ಮತ್ತು ನಿರೀಕ್ಷೆಗಳೊಂದಿಗೆ ಪರಿಗಣಿಸಿ ಎಂದಿದ್ದಾರೆ. ಮತ್ತೊಬ್ಬರು, ಕೆಲಸದಾಕೆ ರಜೆ ತೆಗೆದುಕೊಂಡಾಗ ಬದಲಿ ಕೆಲಸಕ್ಕಾಗಿ ವ್ಯವಸ್ಥೆ ಮಾಡಿ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಇದು ಉದ್ಯೋಗದಾತ ಹಾಗೂ ಉದ್ಯೋಗಿ ಸಂಬಂಧ, ಆದ್ದರಿಂದ ಅದನ್ನು ಹಾಗೆಯೇ ಪರಿಗಣಿಸಿ. ನ್ಯಾಯಯುತ ಉದ್ಯೋಗದಾತರಾಗಿರಿ ಮತ್ತು ಉಳಿದವುಗಳನ್ನು ನೀವು ತಪ್ಪಿತಸ್ಥ ಭಾವನೆಯಿಲ್ಲದೆ ಮಾಡಬಹುದು ” ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ