Viral: ಕಡಿಮೆ ಸಂಬಳ, ಬೆಂಗಳೂರಿನಲ್ಲಿ ಬದುಕೋದು ಕಷ್ಟ ಎಂದ ಯುವಕ

ಉದ್ಯೋಗ ಅರಸಿಕೊಂಡು ಬೆಂಗಳೂರಿನ ಬರುವ ಅನೇಕರಿಗೆ ಈ ಮಾಯನಗರಿಯ ಬಗ್ಗೆ ಕಹಿ ಅಭಿಪ್ರಾಯಗಳಿರುತ್ತವೆ. ಆದರೆ ಅನಂತರದ ದಿನಗಳಲ್ಲಿ ಈ ಅಭಿಪ್ರಾಯಗಳು ಬದಲಾದದ್ದು ಇದೆ. ಕೆಲವರು ಬೆಂಗಳೂರಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳುವ ಮೂಲಕ ಬೇಸರ ವ್ಯಕ್ತಪಡಿಸುವುದಿದೆ. ಇದೀಗ ಇಲ್ಲೊಬ್ಬ ಯುವಕನು ಬೆಂಗಳೂರು ಸೇಫ್ ಅಲ್ಲ ಎಂದು ಬೇಸರ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾನೆ. ಈ ಕುರಿತಾದ ಮಾಹಿಟೀ ಇಲ್ಲಿದೆ.

Viral: ಕಡಿಮೆ ಸಂಬಳ, ಬೆಂಗಳೂರಿನಲ್ಲಿ ಬದುಕೋದು ಕಷ್ಟ ಎಂದ ಯುವಕ
ವೈರಲ್‌ ಪೋಸ್ಟ್‌
Image Credit source: Pinterest

Updated on: Jul 31, 2025 | 12:05 PM

ಬಹುತೇಕರಿಗೆ ಬೆಂಗಳೂರು (Bengaluru) ಅಂದ್ರೆ ದುಬಾರಿ, ಇಲ್ಲಿ ಜೀವನ ನಡೆಸೋದು ಕಷ್ಟ ಎನ್ನುತ್ತಾರೆ. ಹೀಗಾಗಿ ಕೆಲಸಕ್ಕೆಂದು ಇಲ್ಲಿಗೆ ಬರುವವರು ದುಡಿದ ಸಂಪಾದನೆಯಲ್ಲಿ ಅಷ್ಟೋ ಇಷ್ಟೋ ಖರ್ಚು ಮಾಡಿ ತಮ್ಮ ಇತಿಮಿತಿಯಲ್ಲಿ ಇರುತ್ತಾರೆ. ಆದರೆ ಇಲ್ಲಿ ಜೀವನ ನಡೆಸೋದು ತುಂಬಾನೇ ತುಂಬಾ ಕಷ್ಟ ಎಂದು ಇಲ್ಲಿಗೆ ಬಂದು ನೆಲೆಸಿದವರಿಗೆ ಅನಿಸಿದ್ದು ಇದೆ. ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದ ನೋಯ್ಡಾದ (Noida) ಯುವಕನೊಬ್ಬನಿಗೆ ಈ ರೀತಿಯ ಅನುಭವವಾಗಿದೆ. ಇಲ್ಲಿನ ಕಳಪೆ ಗುಣಮಟ್ಟದ ಸೇವೆಗಳು, ಸುರಕ್ಷತೆ ಇಲ್ಲ ಹಾಗೂ ದುಬಾರಿ ಜೀವನಶೈಲಿ ಹೀಗಾಗಿ ಇಲ್ಲಿನ ಜೀವನವು ನಿರಾಶದಾಯಕವಾಗಿದೆ ಎಂದು ಹೇಳಿಕೊಂಡಿದ್ದಾನೆ.

ರೆಡ್ಡಿಟ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡ ನೋಯ್ಡಾದ ಯುವಕನು, ನಾನು ನೋಯ್ಡಾದಲ್ಲಿ 26 ವರ್ಷಗಳಿಂದ ವಾಸಿಸುತ್ತಿದ್ದೇನೆ. ಆದರೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಬಳಿಕ ಪ್ರತಿದಿನವೂ ನನಗೆ ಇಲ್ಲಿಂದ ಮರಳಿ ಹೋಗಬೇಕು ಎಂದೆನಿಸಿದೆ. ಇಲ್ಲಿ ಸಿಗುವ ಕಡಿಮೆ ಸಂಬಳದಿಂದ ಇಲ್ಲಿ ಬದುಕಲು ಸಾಧ್ಯವಿಲ್ಲ ಎಂದೆನಿಸಿತು. ಪ್ರಾರಂಭದಲ್ಲಿ ಸಾಕಷ್ಟು ಭರವಸೆಗಳೊಂದಿಗೆ ಇಲ್ಲಿಗೆ ಬಂದಿದ್ದೆ. ನಗರವು ಸಾಕಷ್ಟು ಹೆಸರು ಮಾಡಿರುವುದರಿಂದ ಉತ್ತಮ ಅವಕಾಶಗಳನ್ನು ನಿರೀಕ್ಷಿಸಿದ್ದೆ. ಆದರೆ ಇಲ್ಲಿನ ಜನರಿಗೆ ರೀಲ್ ಲೈಫ್ ಬಗ್ಗೆ ಕಾಳಜಿ ಹೆಚ್ಚು, ನಿಜ ಜೀವನದ ಬಗ್ಗೆ ಅಲ್ಲ. ಎಲ್ಲರೂ ತಮ್ಮಲ್ಲಿ ಇರುವುದನ್ನು ಪ್ರದರ್ಶಿಸಲು ಇಷ್ಟ ಪಡುತ್ತಾರೆ.

ಈ ಬೆಂಗಳೂರಿನಲ್ಲಿ ಸುಮಾರು 2,000 ರೂ. ಖರ್ಚು ಮಾಡಿದರೂ ರೆಸ್ಟೋರೆಂಟ್‌ನಲ್ಲಿ ತೃಪ್ತಿಕರ ಊಟ ಸಿಗುವ ಸಿಗುವುದೇ ಇಲ್ಲ.ರೆಸ್ಟೋರೆಂಟ್ ಒಳಗೆ ಹೋಗುವ ಮೊದಲೇ ಬುಕ್ಕಿಂಗ್ ಮಾಡುವುದು ಕಡ್ಡಾಯ. ವಾರಾಂತ್ಯದಲ್ಲಿ ಇಲ್ಲಿ ನಡೆಯಲು ಸಾಧ್ಯವೇ ಇಲ್ಲ. ಆಹಾರವು ತಕ್ಕ ಮಟ್ಟಿಗೆ ಇರುತ್ತದೆ. ಉತ್ತಮ ಕೆಫೆಗಳಿದ್ದರೂ ಅರ್ಧ ಗಂಟೆ ಸರತಿ ಸಾಲಿನಲ್ಲಿ ನಿಲ್ಲಲೇಬೇಕು.

ಇದನ್ನೂ ಓದಿ
ವಾಕಿಂಗ್‌ ಹೊರಟಿದ್ದ ಮಹಿಳೆಯ ಮೇಲೆ ಏಕಾಏಕಿ ದಾಳಿ ಮಾಡಿದ ಸಾಕು ನಾಯಿ
16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಉಪಯೋಗಿಸುವಂತಿಲ್ಲ
ಭಿಕ್ಷೆ ಬೇಡಿ ಈ ವ್ಯಕ್ತಿ ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?
ನಡು ರಸ್ತೆಯಲ್ಲಿಯೇ ಬಾಲಕಿಗೆ ಮುತ್ತಿಟ್ಟು ಎಸ್ಕೇಪ್‌ ಆದ ವ್ಯಕ್ತಿ

ಇನ್ನು ಆಟೋ ಸಿಕ್ಕರೆ ಅದೊಂದು ದೊಡ್ಡ ಪವಾಡ. ಕೇವಲ 2 ಕಿಲೋಮೀಟರ್‌ಗಳಿಗೆ 300 ರೂ. ಗಳನ್ನು ಕೇಳುತ್ತಾರೆ. ಇಲ್ಲಿ ಕ್ಯಾಬ್ ಆಟೋಗಿಂತ ಅಗ್ಗವಾಗಿದೆ. ಹೀಗಗಿ ಸಾರಿಗೆ ವ್ಯವಸ್ಥೆ ದುಬಾರಿ ಎನ್ನುವಂತಾಗಿದೆ. ಇನ್ನು ನಗರದ ಸ್ವಚ್ಛತೆಯ ಬಗ್ಗೆ ಕೇಳುವುದೇ ಬೇಡ. ಪ್ರತಿ ನೂರು ಕಿಲೋಮೀಟರ್ ಗಳಿಗೊಮ್ಮೆ ಕಸದ ರಾಶಿಯಿದೆ. ಇದು ನಿರಂತರ ದುರ್ವಾಸನೆ ಬೀರುತ್ತದೆ. ನೈರ್ಮಲ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಈ ಬೆಂಗಳೂರು ಯಾವುದೇ ರೀತಿಯಲ್ಲಿ ಸುರಕ್ಷಿತವಾಗಿಲ್ಲ. ಇಲ್ಲಿ ನನಗೆ ಅಸುರಕ್ಷಿತ ಭಾವನೆ ಮೂಡಿಸುವ ಅಹಿತಕರ ಘಟನೆಗಳು ನಡೆದಿದೆ. ರಸ್ತೆಗಳು ತುಂಬಾ ಕೆಟ್ಟದಾಗಿದೆ. ಟ್ರಾಫಿಕ್ ಜಾಮ್ ಬಗ್ಗೆ ಹೇಳುವುದೇ ಬೇಡ. ಬೆಂಗಳೂರನ್ನು ಇಷ್ಟಪಡಲು ಕೇವಲ ಒಂದು ಕಾರಣ ಎಂದರೆ ಇಲ್ಲಿನ ಹವಾಮಾನ. ನನಗೆ ಅದು ಇಷ್ಟವಾಗಿದೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾನೆ.

ಇದನ್ನೂ ಓದಿ: Video: ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿಯಲು ವರ್ಷದಲ್ಲಿ 2 ಬಾರಿ ಅಮೆರಿಕದಿಂದ ಬೆಂಗಳೂರಿಗೆ ಬರುವ ವಿದೇಶಿ ಉದ್ಯಮಿ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡಿ ಇವರ ಮಾತನ್ನು ಒಪ್ಪಿಕೊಂಡಿದ್ದಾರೆ. ಒಬ್ಬ ಬಳಕೆದಾರರು, ಯಾರನ್ನು ಇಲ್ಲಿ ಇರಲು ಬಲವಂತ ಮಾಡುತ್ತಿಲ್ಲ. ಈ ಊರು ಸುರಕ್ಷಿತವಲ್ಲ ಎಂದೆನಿಸಿದರೆ ದಯವಿಟ್ಟು ಇಲ್ಲಿಗೆ ಬರಬೇಡಿ ಎಂದಿದ್ದಾರೆ. ಇನ್ನೊಬ್ಬರು, ಯಾವುದೇ ನಗರವು ಪರಿಪೂರ್ಣವಲ್ಲ, ವೈಯುಕ್ತಿಕ ಅನುಭವವು ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತೇವೆ. ಕೆಲಸ ಹುಡುಕಿಕೊಂಡು ಬಂದವರು ಈ ನಗರಕ್ಕೆ ಹೊಂದಿಕೊಳ್ಳುವುದು ಅನಿವಾರ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 am, Thu, 31 July 25