Video: ವಿಕಲಚೇತನ ವ್ಯಕ್ತಿಯ ಮೇಲೆ ದರ್ಪ ತೋರಿದ ರೈಲ್ವೆ ಗಾರ್ಡ್

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 15, 2024 | 3:15 PM

ಭಾರತೀಯ ರೈಲ್ವೇ ತನ್ನ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತದೆ ನಿಜ. ಆದ್ರೆ ಕೆಲವೊಂದು ರೈಲ್ವೆ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ನಡೆದುಕೊಳ್ಳುವ ರೀತಿ ನಿಜಕ್ಕೂ ಬೇಸರ ತರಿಸುತ್ತದೆ. ಇದೀಗ ಅಂತಹದೇ ಅಘಾತಕಾರಿ ಘಟನೆಯೊಂದು ನಡೆದಿದ್ದು, ರೈಲ್ವೆ ಗಾರ್ಡ್ ತನ್ನ ಅಧಿಕಾರದ ಮದದಿಂದ ವಿಕಲ ಚೇತನ ಪ್ರಯಾಣಿಕನ ಮೇಲೆ ಕೈ ಮಾಡಿದ್ದು ಮಾತ್ರವಲ್ಲದೆ, ಆತನ ಕತ್ತಿನ ಪಟ್ಟಿ ಹಿಡಿದು ರೈಲಿನಿಂದ ಹೊರ ದಬ್ಬಿದ್ದಾನೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಗಾರ್ಡ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಅಗ್ರಹಿಸಿದ್ದಾರೆ.

Video: ವಿಕಲಚೇತನ ವ್ಯಕ್ತಿಯ ಮೇಲೆ ದರ್ಪ ತೋರಿದ ರೈಲ್ವೆ ಗಾರ್ಡ್
ವೈರಲ್​​​ ವಿಡಿಯೋ
Follow us on

ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಲು ರೈಲುಗಳು ಅತ್ಯುತ್ತಮ ಸಾರಿಗೆ ಸೌಕರ್ಯವಾಗಿದೆ. ರೈಲ್ವೇಯೂ ಅಷ್ಟೇ ತನ್ನ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತದೆ. ಇದಕ್ಕಾಗಿಯೇ ಹೆಚ್ಚಿನವರು ರೈಲಿನಲ್ಲಿಯೇ ಪ್ರಯಾಣಿಸಲು ಇಷ್ಟಪಡ್ತಾರೆ. ಆದ್ರೆ ಕೆಲವು ರೈಲ್ವೆ ನೌಕರರು ಅಥವಾ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ನಡೆದುಕೊಳ್ಳುವ ರೀತಿ ಮನಸ್ಸಿಗೆ ನೋವುಂಟು ಮಾಡುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ರೈಲ್ವೆ ಗಾರ್ಡ್ ತನ್ನ ಅಧಿಕಾರದ ಮದದಿಂದ ವಿಕಲ ಚೇತನ ಪ್ರಯಾಣಿಕನ ಮೇಲೆ ಕೈ ಮಾಡಿದ್ದು ಮಾತ್ರವಲ್ಲದೆ, ಆತನ ಕತ್ತಿನ ಪಟ್ಟಿ ಹಿಡಿದು ರೈಲಿನಿಂದ ಹೊರ ತಳ್ಳಿದ್ದಾನೆ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ವಿಕಲ ಚೇತನ ವ್ಯಕ್ತಿಯ ಮೇಲೆ ದರ್ಪ ತೋರಿದ ಗಾರ್ಡ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಈ ಘಟನೆ ಬಿಹಾರದ ಸಮಸ್ತಿಪುರ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ವೈಶಾಲಿ ಸೂಪರ್‌ಫಾಸ್ಟ್‌ ರೈಲಿನ ಅಂಗವಿಕಲ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವಿಕಲಚೇತನ ಪ್ರಯಾಣಿಕರೊಬ್ಬರ ಜೊತೆ ಗಾರ್ಡ್ ಅನುಚಿತವಾಗಿ ವರ್ತಿಸಿ ಬೋಗಿಯಿಂದ ಹೊರಗೆ ತಳ್ಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಘಟನೆಯ ನಂತರ ಸಮಸ್ತಿಪುರ ಡಿಆರ್‌ಎಂ ವಿನಯ್ ಶ್ರೀವಾಸ್ತವ ಅವರು ಈ ವಿಷಯದ ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದಾರೆ. ಮತ್ತು ಘಟನೆ ಕುರಿತು ಪ್ರತಿಕ್ರಿಯಿಸಿರುವ ಅವರು, ಈ ಘಟನೆ ಅತ್ಯಂತ ದುಃಖಕರವಾಗಿದೆ. ಯಾವುದೇ ಪ್ರಯಾಣಿಕರೊಂದಿಗೆ ಈ ರೀತಿಯ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್ ಒಂದನ್ನು Samastipur Town ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ವಿಕಲ ಚೇತನ ವ್ಯಕ್ತಿಯ ಮೇಲೆ ರೈಲ್ವೆ ಗಾರ್ಡ್ ದರ್ಪ ತೋರಿಸುತ್ತಿರುವ ದೃಶ್ಯವನ್ನು ಕಾಣಬಹುದು. ಮುಜಾಫರ್‌ಪುರಕ್ಕೆ ಹೋಗಲು ವಿಕಲ ಚೇತನ ವ್ಯಕ್ತಿ ಸಮಸ್ತಿಪುರ ನಿಲ್ದಾಣದಲ್ಲಿ ವೈಶಾಲಿ ಸೂಪರ್ ಫಾಸ್ಟ್ ರೈಲು ಏರುತ್ತಾರೆ. ಆ ಸಂದರ್ಭದಲ್ಲಿ ಗಾರ್ಡ್ ಆ ವ್ಯಕ್ತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಮಾತ್ರವಲ್ಲದೇ ಕತ್ತಿನ ಪಟ್ಟಿ ಹಿಡಿದು ಬಲವಂತವಾಗಿ ಬೋಗಿಯಿಂದ ಕೆಳಕ್ಕೆ ತಳ್ಳಿದ್ದಾನೆ.

ಇದನ್ನೂ ಓದಿ: 2 ನಿಮಿಷ ತಡವಾಗಿ ಬಂದಿದ್ದಕ್ಕೆ ನೀಟ್ ಪಿಜಿ ಆಕಾಂಕ್ಷಿಗೆ ಪರೀಕ್ಷೆ ಬರೆಯಲು ನಿರಾಕರಣೆ, ಗೋಳಾಡಿದ ಅಭ್ಯರ್ಥಿ

ಆಗಸ್ಟ್ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 40 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇಂತಹ ಮೂರ್ಖರನ್ನು ಅಮಾನತು ಮಾಡಬೇಕು’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಯಾರೇ ಆಗಿರಲಿ, ಗಾರ್ಡ್‌ನ ಕೋಚ್‌ಗೆ ಹತ್ತುವಂತಿಲ್ಲ. ಆದ್ರೆ ಗಾರ್ಡ್ ಸಂಯಮವನ್ನು ಕಳೆದುಕೊಳ್ಳಬಾರದಿತ್ತು’ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ