ಪಾಪಾಸುಕಳ್ಳಿಗಿಡಗಳ ಮಧ್ಯೆ ಹಸಿರು ಸೇಬು ಅಡಗಿದೆ, ಕಂಡುಹಿಡಿಯುವಿರಾ?

| Updated By: ಶ್ರೀದೇವಿ ಕಳಸದ

Updated on: May 03, 2023 | 4:16 PM

Viral Optical Illusion : ನೂರಾರು ಪಾಪಾಸುಕಳ್ಳಿಗಳ ಮಧ್ಯೆ ಹೇಗಪ್ಪಾ ಸೇಬು ಹುಡುಕುವುದು? ಮಹಾಕಷ್ಟ ಎಂದು ಹಲವರು, ಅಯ್ಯೋ ಇದು ತುಂಬಾ ಸರಳ ಎಂದು ಕೆಲವರು. ನಿಮಗೆ?

ಪಾಪಾಸುಕಳ್ಳಿಗಿಡಗಳ ಮಧ್ಯೆ ಹಸಿರು ಸೇಬು ಅಡಗಿದೆ, ಕಂಡುಹಿಡಿಯುವಿರಾ?
ಪಾಪಾಸುಕಳ್ಳಿಗಿಡಗಳ ಮಧ್ಯೆ ಒಂದು ಸೇಬು ಅಡಗಿದೆ, ಹುಡುಕುವಿರಾ?
Follow us on

Viral Brain Teaser : ನಿಮಗೀಗ ಕೆಲಸ ಮಾಡಿ ಸುಸ್ತಾಗಿದೆ. ಬಿಸಿಬಿಸಿ ಚಹಾನೋ ಕಾಫೀನೋ ಹೀರುತ್ತಾ ಸ್ವಲ್ಪ ಹೊತ್ತು ಹಾಯಾಗಿರಬೇಕು ಅನ್ನಿಸುತ್ತಿದೆ. ಯಾಕೆ ನೀವು ಈ ಬ್ರೇನ್​ ಟೀಸರ್​ನೆಡೆ ಒಮ್ಮೆ ಕಣ್ಣು ಹಾಯಿಸಬಾರದು? ನೋಡಲು ತುಂಬಾ ಸರಳ ಎನ್ನಿಸುವ ಆದರೆ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಅಷ್ಟೇ ಸಂಕೀರ್ಣ ಎನ್ನಿಸುವ ಇಂಥ ಚಿತ್ರಗಳೆಂದರೆ ನಿಮಗೆ ತುಂಬಾ ಇಷ್ಟ ಎನ್ನುವುದು ಗೊತ್ತಾಗಿದೆ. ಆದ್ದರಿಂದಲೇ ಹೊಸಾ ಚಿತ್ರದೊಂದಿಗೆ ನಾವು ನಿಮ್ಮನ್ನು ತಲುಪಿದ್ದೇವೆ.

ಬಣ್ಣಬಣ್ಣದ ಕುಂಡಗಳಲ್ಲಿ ನೂರಾರು ಪಾಪಾಸುಕಳ್ಳಿಗಳಿವೆ. ಇವೆಲ್ಲವುಗಳ ಮಧ್ಯೆ ಒಂದು ಸೇಬು ಅಡಗಿ ಕುಳಿತಿದೆ. ಹತ್ತು ಸೆಕೆಂಡುಗಳಲ್ಲಿ ಅದನ್ನು ಕಂಡುಹಿಡಿಯುವಿರಾ? ತುಂಬಾ ಕಷ್ಟವಾಗುತ್ತಿದೆಯಾ? ಹಾಗಿದ್ದರೆ ಸುಳಿವು ಬೇಕೆ, ಕೆಂಪು ಸೇಬು ಅದಲ್ಲ. ಹಸಿರು ಸೇಬು.

ಇದನ್ನೂ ನೋಡಿ : Optical Illusion : ಈ ಕಾಡಿನಲ್ಲಿ ನರಿ ಅಡಗಿದೆ, 20 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈಗ ನಿಮಗೆ ಬಹುಶಃ ಸೇಬು ಕಂಡುಹಿಡಿಯುವುದು ಸುಲಭ! ಒಂದು ಕುಂಡದಲ್ಲಿ ಅದು ಸುಮ್ಮನೇ ಕುಳಿತಿದೆ. ಈಗಲೂ ಸಿಗುತ್ತಿಲ್ಲವಾ? ಹಾಗಿದ್ದರೆ ಸುಳಿವು ಎರಡು, ಸೇಬು ಈ ಚಿತ್ರದಲ್ಲಿ ಕೆಳಸಾಲುಗಳಲ್ಲಿದೆ. ಈಗಲೂ ಕಾಣಲಿಲ್ಲವಾ ಹಾಗಿದ್ದರೆ ಕೆಳಗಿನ ಚಿತ್ರವನ್ನು ನೋಡಿ.

ಸುಳಿವು ಕೊಟ್ಟ ಮೇಲೆ ಸಮಸ್ಯೆಗೆ ಉತ್ತರ ಹುಡುಕುವುದು ಬಹಳೇ ಸುಲಭ ಅಲ್ಲವಾ? ಆದರೂ ನಿಮ್ಮಲ್ಲಿ ಕೆಲವರು ಸುಳಿವನ್ನು ಗಮನಿಸದೇ ಹುಡುಕಿದ್ದೀರಿ, ಅವರಿಗೆ ಅಭಿನಂದನೆ. ಮತ್ತೊಂದು ಹೊಸ ಬ್ರೇನ್​ ಟೀಸರ್​ನೊಂದಿಗೆ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇವೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ