Viral Video: ಗೋಲ್​ಗಪ್ಪಾ ಪ್ರಿಯೆ ವಧುವಿಗೆ ಪುರಿಯದ್ದೇ ಹಾರ.. ಕಿರೀಟ; ವಧುವಿಗೆ ಖುಷಿಯೋ ಖುಷಿ

| Updated By: shruti hegde

Updated on: Jul 06, 2021 | 1:05 PM

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ದಕ್ಷಿಣ ಭಾರತ ವಧು ಪಾನಿಪುರಿಯಿಂದ ಸಿಂಗಾರಗೊಂಡಿದ್ದಾಳೆ. ಅಷ್ಟು ಇಷ್ಟದ ಪಾನಿ ಪುರಿ ಹಾರ ನೋಡಿ ಅವಳ ಮುಖದಲ್ಲಿ ಖುಷಿಯೋ ಖುಷಿ.

Viral Video: ಗೋಲ್​ಗಪ್ಪಾ ಪ್ರಿಯೆ ವಧುವಿಗೆ ಪುರಿಯದ್ದೇ ಹಾರ.. ಕಿರೀಟ; ವಧುವಿಗೆ ಖುಷಿಯೋ ಖುಷಿ
ಗೋಲ್​ಗಪ್ಪಾ ಪ್ರಿಯೆ ವಧುವಿಗೆ ಪುರಿಯದ್ದೇ ಹಾರ.. ಕಿರೀಟ
Follow us on

ಗೋಲ್​ಗಪ್ಪಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಈಗಿನ ಯುವತಿಯರಿಗಂತೂ ಪಾನಿಪುರಿ ಅಂದ್ರೆ ಎಲ್ಲಿಲ್ಲದ ಆನಂದ. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಸಹ ಪಾನಿ ಪುರಿ ರುಚಿ ಸವಿಯದವರೇ ಇಲ್ಲ. ರಸ್ತೆಯ ಅಂಚಿನಲ್ಲಿ ಪಾನಿಪುರಿ ಸವಿಯಲು ಸಾಲು ಸಾಲಲ್ಲಿ ನಿಂತಿರುವುದನ್ನು ನೋಡಿಯೇ ಇರುತ್ತೀರಿ. ಇಲ್ಲಿ ವಧುವಿಗೂ ಕೂಡಾ ಪಾನಿಪುರಿ ಅಂದ್ರೆ ಎಷ್ಟಿಷ್ಟ ಎಂಬುದು ಕಾಣಿಸುತ್ತಿದೆ. ವಧುವಿಗೆ ಪಾನಿಪುರಿಯ ಕಿರೀಟ ಮಾಡಿ ಮುಡಿಗೇರಿಸಿದ್ದಾರೆ. ಅದರದ್ದೇ ಹಾರ ತಯಾರಿಸಿ ಕೊರಳಿಗೆ ಹಾಕಿದ್ದಾರೆ. ಪಾನಿ ಪುರಿ ನೋಡಿದಾಕ್ಷಣ ನೆಟ್ಟಿಗರು ಖುಷಿ ಪಟ್ಟಿದ್ದಾರೆ.

ಪಾನಿಪುರಿ ಎಂಬ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರುರುತ್ತೆ! ಅದೆಷ್ಟು ದಿನಗಳಾಯ್ತು ಅಲ್ವೇ? ರಸ್ತೆಯ ಬದಿಯಲ್ಲಿ ನಿಂತು ಸ್ನೇಹಿತರೊಡನೆ ಪೈಪೋಟಿಯೊಂದಿಗೆ ಪಾನಿ ಪುರಿ ತಿನ್ನದೇ.. ರಸ್ತೆ ಬದಿಯಲ್ಲಿ ಇರುವ ಗೂಡಂಗಡಿಗಳಿಂದ ಹಿಡಿದು ಬಣ್ಣದ ಲೈಟಿಂಗ್ಸ್​ನೊಂದಿಗೆ ಕಂಗೊಳಿಸುವ ದೊಡ್ಡ ದೊಡ್ಡ ಹೋಟೆಲ್​ಗಳಲ್ಲಿಯೂ ಪಾನಿಪುರಿ ಅಷ್ಟು ಫೇಮಸ್​! ಅದೆಷ್ಟೋ ದುಡ್ಡುಕೊಟ್ಟು ವಿವಿಧ ಖಾದ್ಯಗಳನ್ನು ಸವಿದರೂ ಸಹ 25-30 ರೂಪಾಯಿ ಒಳಗೆ ಸಿಗುವ ಪಾನಿಪುರಿಯಷ್ಟು ಸ್ವಾದ ಇನ್ನೆಲ್ಲೂ ಸಿಗಲ್ಲ ಅಂತಾರೆ ನಮ್ಮ ಪಾನಿಪುರಿ ಪ್ರಿಯರು. ಇದೀಗ ಪಾನಿಪುರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ದಕ್ಷಿಣ ಭಾರತ ವಧು ಪಾನಿಪುರಿಯಿಂದ ಸಿಂಗಾರಗೊಂಡಿದ್ದಾಳೆ. ಅಷ್ಟು ಇಷ್ಟದ ಪಾನಿ ಪುರಿ ಹಾರ ನೋಡಿ ಅವಳ ಮುಖದಲ್ಲಿ ಖುಷಿಯೋ ಖುಷಿ. ಅವಳ ಎದುರಿರುವ ಊಟದ ತಟ್ಟೆಯ ಸುತ್ತಲೂ ಪಾನಿಪುರಿಯನ್ನು ಇರಿಸಲಾಗಿದೆ. ಸರ್ಪ್ರೈಸ್​ ಆಗಿ ತಯಾರಿಸಿದ ಈ ಡಿಸೈನ್​ ನೋಡಿದ ವಧು ಸಂತೋಷಗೊಂಡಿದ್ದಾಳೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಪಾನಿಪುರಿ ನೋಡಿದ ನೆಟ್ಟಿಗರು ಬಾಯಲ್ಲಿ ನೀರುರುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಹುಡುಗಿಯರಿಗೆ ಪಾನಿಪುರಿ ಅಂದ್ರೆ ಎಷ್ಟು ಇಷ್ಟ ಅಲ್ವಾ.. ಎಂದು ಹೇಳಿದ್ದಾರೆ. ಇನ್ನು ಕೆಲವು ಬಳಕೆದಾದರು ಮಿಸ್​​ ಯು ಪಾನಿಪುರಿ ಎಂದು ತಮ್ಮ ರುಚಿಯಾದ ತಿಂಡಿಯ ಕುರಿತಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಪಾನಿಪುರಿ ಇಷ್ಟ ಪಡುವ ತಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಟ್ಯಾಗ್​ ಮಾಡುತ್ತಿದ್ದಾರೆ.

ಇದನ್ನೂ ಓದಿ:

Viral Video: ಮದುವೆ ಮನೆಯಲ್ಲಿ ಪಾನಿಪುರಿ ರಸದೌತಣ! ನೀವೂ ಮಿಸ್​ ಮಾಡಿಕೊಳ್ಳುತ್ತಿದ್ದೀರಾ?

Viral Video: ಪಾನಿಪುರಿ ಮಹಿಮೆಯೆ ಹೀಗೆ.. ನೋಡಿದಾಕ್ಷಣ ಹಸುಗಳ ಬಾಯಲ್ಲೂ ನೀರು! ವಿಡಿಯೋ ನೋಡಿ