ಸಾಮಾಜಿಕ ಜಾಲತಾಣ(Social Media)ದಲ್ಲಿ ಪ್ರತಿದಿನ ಸಾಕಷ್ಟು ಪೋಸ್ಟ್ಗಳು, ವಿಡಿಯೋಗಳು ಹರಿದಾಡುತ್ತಿರುತ್ತದೆ. ಆದರಲ್ಲಿ ಕೆಲವೊಂದು ಭಾರೀ ಚರ್ಚೆಯಲ್ಲಿರುತ್ತದೆ. ಇತ್ತೀಚೆಗೆ ಹಳೆಯ ಸಿನಿಮಾ ಟಿಕೇಟುಗಳು, 1985ರ ರೆಸ್ಟೋರೆಂಟ್ ಬಿಲ್ ಮತ್ತು 1937ರ ಸೈಕಲ್ ಬಿಲ್, 1986 ರ ಬುಲೆಟ್ 350cc ಬಿಲ್, 1987ರಲ್ಲಿ ಖರೀದಿಸಿದ ಗೋಧಿಯ ಬೆಲೆ ಬಿಲ್ಗಳು ಸಾಕಷ್ಟು ಮಟ್ಟಿಗೆ ಸದ್ದು ಮಾಡಿತ್ತು. ಅಂತದ್ದೇ ಇದೀಗಾ ಟ್ವಿಟರ್ ಖಾತೆಯಲ್ಲಿ 92 ವರ್ಷದ ಹಿಂದಿನ ಬ್ರಿಟಿಷ್ ಆಡಳಿತ ಸಮಯದಲ್ಲಿನ ಅಪರೂಪದ ಭಾರತೀಯ ಪಾಸ್‌ಪೋರ್ಟ್‌ನ ಫೋಟೋವೊಂದನ್ನು ಹಂಚಿಕೊಂಡಿದ್ದಾನೆ.
ತನ್ನ ಅಜ್ಜನ 92 ವರ್ಷದ ಹಿಂದಿನ ಬ್ರಿಟಿಷ್ ಆಡಳಿತ ಸಮಯದಲ್ಲಿನ ಅಪರೂಪದ ಭಾರತೀಯ ಪಾಸ್‌ಪೋರ್ಟ್‌ನ ಫೋಟೋವನ್ನು ಅಂಶುಮಾನ್ ಸಿಂಗ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಬ್ರಿಟಿಷ್ ಭಾರತ ಸರ್ಕಾರ ನೀಡಿದ ಪಾಸ್‌ಪೋರ್ಟ್‌ನ ಹಲವಾರು ಫೋಟೋಗಳಿವೆ. ಆ ಪೋಸ್ಟ್ ಇಲ್ಲಿದೆ ನೋಡಿ.
My Grandfather’s “British Indian Passport”, issued at Lahore in 1931. He must’ve been 31 years old then. pic.twitter.com/KzGja0gnKB
— Anshuman Singh (@anshumansingh75) January 7, 2023
ಇದನ್ನೂ ಓದಿ: 1987ರಲ್ಲಿ ಒಂದು ಕೆಜಿ ಗೋಧಿ ಬೆಲೆ ಎಷ್ಟಿತ್ತು ಗೊತ್ತಾ?
ಬ್ರಿಟಿಷ್ ಇಂಡಿಯಾದ ಲಾಹೋರ್‌ನಲ್ಲಿ ನೀಡಲಾದ ಅಪರೂಪದ ಪಾಸ್‌ಪೋರ್ಟ್ ಇದೀಗಾ ಸಾಕಷ್ಟು ಮಟ್ಟಿಗೆ ವೈರಲ್ ಆಗಿದೆ. ಹಳೆಯ ಇತಿಹಾಸಗಳನ್ನು ಖಂಡಿತಾ ವಾಗಿಯೂ ಈ ಪೋಸ್ಟ್ ಇಷ್ಟ ಪಡುತ್ತಾರೆ.ಇದು ನನ್ನ ಅಜ್ಜ 1931 ರಲ್ಲಿ ಪಡೆದುಕೊಂಡಿರುವ ಪಾಸ್‌ಪೋರ್ಟ್. ಅವರಿಗೆ 31 ವರ್ಷ ವಯಸ್ಸಿನವರಾಗಿದ್ದಾಗ ನೀಡಲಾಗಿತ್ತು. ಪಾಸ್‌ಪೋರ್ಟ್ ಕವರ್‌ನಲ್ಲಿ ಬ್ರಿಟಿಷ್ ಸರ್ಕಾರದ ಅಧಿಕೃತ ಮುದ್ರೆಯನ್ನು ಹೊಂದಿದೆ ಮತ್ತು ಭಾರತದ ವಸಾಹತುಗಳಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಈಗೀನ ವರೆಗೂ ಅದನ್ನು ಸಂಗ್ರಹಿಸಿಟ್ಟಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ. ನನ್ನ ಅಜ್ಜನಿಗೆ ಬ್ರಿಟಿಷ್ ಇಂಡಿಯನ್ ಪಾಸ್‌ಪೋರ್ಟ್ 1931 ರಲ್ಲಿ ಲಾಹೋರ್‌ನಲ್ಲಿ ನೀಡಲಾಯಿತು. ಆಗ ಅವರಿಗೆ 31 ವರ್ಷ ವಯಸ್ಸಾಗಿರಬೇಕು” ಎಂದು ಶೀರ್ಷಿಕೆಯನ್ನು ಹಾಕಿದ್ದಾರೆ. ಈ ಪೋಸ್ಟ್ ಈಗೀನ ವರೆಗೆ 1,97,200ರಷ್ಟು ಜನರು ವೀಕ್ಷಿಸಿದ್ದಾರೆ. ಜೊತೆಗೆ 278 ಜನರು ರಿಟ್ವಿಟ್ ಮಾಡಿದ್ದಾರೆ. ಸಾಕಷ್ಟು ಕಾಮೆಂಟ್ಗಳನ್ನು ಕೂಡ ಕಾಣಬಹುದು.
ಇನ್ನಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: