Viral Video: ಸಖತ್​​​ ಐಷಾರಾಮಿ ಜೀವನ ನಡೆಸುತ್ತಿದೆ ಈ ಶ್ವಾನ; ಲೈಫ್​​​​ ಸ್ಟೈಲ್​​ ಹೆಂಗಿದೆ ನೋಡಿ

|

Updated on: Mar 08, 2024 | 12:19 PM

​​​​ಈ ಶ್ವಾನ ಇನ್‌ಸ್ಟಾಗ್ರಾಮ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದೆ.ಈ ಶ್ವಾನ ತನ್ನ ಫ್ಯಾಷನ್ ಶೈಲಿಯಿಂದಲೇ ಫ್ಯಾಶನ್​​ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಈಗಾಗಲೇ 1 ಲಕ್ಷ 66 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​​ಗಳನ್ನು ಹೊಂದಿದೆ.

Viral Video: ಸಖತ್​​​ ಐಷಾರಾಮಿ ಜೀವನ ನಡೆಸುತ್ತಿದೆ ಈ ಶ್ವಾನ; ಲೈಫ್​​​​ ಸ್ಟೈಲ್​​ ಹೆಂಗಿದೆ ನೋಡಿ
bao dog
Image Credit source: instagram
Follow us on

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸಖತ್​​ ಫೇಮಸ್​​​ ಆಗುವವರ ಸಂಖ್ಯೆ ಹೆಚ್ಚಾಗಿ ಬಿಟ್ಟಿದೆ. ಇದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಸೋಶಿಯಲ್​​​ ಮೀಡಿಯಾ ಫ್ಲಾಟ್​​​ ಫಾಮ್ ಮೂಲಕ ನಾಯಿ, ಬೆಕ್ಕು ಇತರ ಸಾಕು ಪ್ರಾಣಿಗಳು ಕೂಡ ಸಖತ್​​ ಫೇಮಸ್​​ ಆಗುತ್ತಿದೆ. ಅದರಂತೆ ಇಲ್ಲೊಂದು ನಾಯಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದು, ಸಾಮಾಜಿಕ ಜಾಲತಾಣಗಳಿಂದಲೇ ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸುತ್ತಿದೆ. ಇದರ ಲೈಫ್​​​​ ಸ್ಟೈಲ್​​ ನೋಡಿದ್ರೆ ನಿಮಗೆ ಏನ್​ ಪುಣ್ಯ ಮಾಡಿತ್ತೋ ಅಂತ ಅನಿಸುವುದು ಸಹಜ.

ಕೇವಲ ಮೂರು ವರ್ಷದ ಈ ಶ್ವಾನ ತನ್ನ ಅದ್ದೂರಿ ಜೀವನಕ್ಕಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಚಿಹೋವಾ ತಳಿಯ ಈ ನಾಯಿ ತನ್ನ ಮಾಲೀಕರೊಂದಿಗೆ ದೇಶ ಮತ್ತು ವಿದೇಶಗಳಲ್ಲಿ ಪ್ರಯಾಣಿಸುವುದಲ್ಲದೆ ಐಷಾರಾಮಿ ಹೋಟೆಲ್‌ಗಳಲ್ಲಿ ತಂಗುತ್ತದೆ. ಈ ಶ್ವಾನವು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ತನ್ನದೇ ಆದ ವಾರ್ಡ್ರೋಬ್ ಅನ್ನು ಹೊಂದಿದೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ. ಇದಲ್ಲದೇ ಬೆಲೆಬಾಳುವ ಬಟ್ಟೆಗಳನ್ನು ಧರಿಸಿ ಫೋಟೋಗಳಿಗೆ ಪೋಸ್​​​ ಕೊಡುತ್ತದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಮತ್ತಷ್ಟು ಓದಿ: Video Viral: ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಮೊದಲ ಪುರುಷ ರೋಬೋಟ್

ಈ ಶ್ವಾನ ಇನ್‌ಸ್ಟಾಗ್ರಾಮ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದೆ.ಈ ಶ್ವಾನ ತನ್ನ ಫ್ಯಾಷನ್ ಶೈಲಿಯಿಂದಲೇ ಫ್ಯಾಶನ್​​ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಈಗಾಗಲೇ 1 ಲಕ್ಷ 66 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​​ಗಳನ್ನು ಹೊಂದಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ