Video Viral: ಅಂಗಡಿಯ ಶಟರ್‌ಗೆ ಸಿಲುಕಿದ ಮಹಿಳೆಯ ಶರ್ಟ್; ಮುಂದೆ ಆಗಿದ್ದೇನು ನೋಡಿ
ಮಹಿಳೆ ಅಂಗಡಿಯ ಮುಂದೆ ಸ್ವಚ್ಛಗೊಳಿಸುತ್ತಿರುವ ವೇಳೆ ಆಕಸ್ಮಿಕವಾಗಿ ಮಹಿಳೆಯ ಬಟ್ಟೆ ಅಂಗಡಿಯ ಶಟರ್‌ಗೆ ಸಿಲುಕಿದೆ. ಅಂಗಡಿಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಆಸ್ಟ್ರೇಲಿಯದ ಸೌತ್ ವೇಲ್ಸ್‌ನ ಪಾಂಟಿಪ್ರಿಡ್‌ನಲ್ಲಿರುವ ಬೆಸ್ಟ್ ಒನ್ ಆಫ್-ಲೈಸೆನ್ಸ್‌ನಲ್ಲಿ ಅನ್ನಿ ಹ್ಯೂಸ್ (71) ಎಂಬ ಮಹಿಳೆ ಅಂಗಡಿಯ ಮುಂದೆ ಸ್ವಚ್ಛಗೊಳಿಸುತ್ತಿರುವ ವೇಳೆ ಆಕಸ್ಮಿಕವಾಗಿ ಮಹಿಳೆಯ ಬಟ್ಟೆ ಅಂಗಡಿಯ ಶಟರ್‌ಗೆ ಸಿಲುಕಿದೆ. ಅದೇ ಸಮಯದಲ್ಲಿ ಶಟರ್ ಮಿಷನ್ ಅಂಗಡಿ ತೆರೆಯಲು ಆನ್ ಆಗಿದ್ದು, ಮಹಿಳೆಯ ಸಮೇತ ಶಟರ್ ಮೇಲೆ ಹೋಗಿದೆ. ಮಹಿಳೆ ಶಟರ್ಹೆ ಸಿಲುಕಿ ನೇತಾಡುತ್ತಿರುವುದು ಅಂಗಡಿಯ ಮುಂಭಾಗದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಮವಾರ(ಮಾ.08) ಬೆಳಗ್ಗೆ 8ಗಂಟೆಯ ವೇಳೆಗೆ ನಡೆದಿದೆ.
ತಕ್ಷಣ ಮಹಿಳೆಯ ಕಿರುಚಾಟದ ಸದ್ದು ಕೇಳಿ ಅಂಗಡಿಯ ಮಾಲೀಕ ಅಮೆದ್ ಅಕ್ರಂ (44) ಓಡೋಡಿ ಬಂದು ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಬಳಿಕ ಅಂಗಡಿಯ ಮಾಲೀಕ ಶಟರ್ ಅನ್ನು ಕೆಳಗಡೆ ಎಳೆದಿದ್ದಾರೆ. ಬಳಿಕ ಮಹಿಳೆಯನ್ನು ಎತ್ತಿ ಕೆಳಗೆ ಇಳಿಸಲಾಗಿದೆ.
ಇದನ್ನೂ ಓದಿ: ಮದುವೆಗೆ ಯಾಕೆ ಕರೆದಿಲ್ಲ?; ಮುಕೇಶ್ ಅಂಬಾನಿಯನ್ನು ಪ್ರಶ್ನಿಸಿದ ರಾಖಿ ಸಾವಂತ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
This woman was lifted into the air by the shop shutters while waiting to get into work pic.twitter.com/Vx41HFAuOb
— Crazed (@crazednet) March 6, 2024
ಅದೃಷ್ಟವಶಾತ್ ಘಟನೆಯಲ್ಲಿ ಆಕೆಗೆ ಯಾವುದೇ ಗಾಯಗಳಾಗಿಲ್ಲ. ಅಂಗಡಿ ಮಾಲೀಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.ಅಂಗಡಿಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ. @crazednet ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ