Cat : ಪ್ರಾಣಿಗಳು ಅದರಲ್ಲಿಯೂ ಬೆಕ್ಕು ನಾಯಿಗಳು ಎಳೆಯ ಮಕ್ಕಳೊಂದಿಗೆ ನಡೆದುಕೊಳ್ಳುವ ರೀತಿಯೇ ಬೇರೆ, ದೊಡ್ಡವರೊಂದಿಗೆ ನಡೆದುಕೊಳ್ಳುವ ರೀತಿಯೇ ಬೇರೆ. ಬೆಕ್ಕುಗಳಂತೂ ಎಳೆಯ ಮಕ್ಕಳನ್ನು ಅದೆಷ್ಟು ಸೂಕ್ಷ್ಮವಾಗಿ ನೋಡಿಕೊಳ್ಳುತ್ತವೆ ಎಂಬುದಕ್ಕೆ ಇಲ್ಲಿರುವ ವಿಡಿಯೋ ಸಾಕ್ಷಿ. ಅಂಬೆಗಾಲಿಟ್ಟುಕೊಂಡು ಬರುವ ಈ ಮಗು ಇನ್ನೇನು ಮೆಟ್ಟಿಲುಗಳ ತುದಿಗೆ ಬರುತ್ತಿದ್ದಂತೆ ಅಕ್ಷರಶಃ ಸಿನೆಮಾದಲ್ಲಿ ಹೀರೋ ಬಂದು ಹೀರೋಯಿನ್ ಅನ್ನು ಕಾಪಾಡುವುದಿಲ್ಲವೆ? ಅದೇ ರೀತಿ ಬೆಕ್ಕು ಮಗುವನ್ನು ರಕ್ಷಿಸಿದೆ. ಇದು ಹಳೆಯ ವಿಡಿಯೋ ಆದರೂ 3 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಹೌ ಥಿಂಗ್ಸ್ ವರ್ಕ್ ಎಂಬ ಟ್ವಿಟರ್ ಪುಟದಲ್ಲಿ ಈ ವಿಡಿಯೋ ನೋಡಬಹುದಾಗಿದೆ.
ವಿಡಿಯೋ ನೋಡಿ.
Hero cat rushes to save toddler from falling down stairs ?? pic.twitter.com/wven5sXmML
— H0W_THlNGS_W0RK (@wowinteresting8) August 11, 2022
ಮನೆಯೊಳಗೆ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ನೆಟ್ಟಿಗರ ಮನಸೆಳೆದಿದೆ. ಈ ಬೆಕ್ಕು ರಿಯಲ್ ಬೇಬಿ ಸಿಟ್ಟರ್ ಎಂದು ಪ್ರಶಂಸಿಸಿದ್ದಾರೆ. ನಿಜ ಅಲ್ಲವೆ? ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿರುವ ಇಂಥದೊಂದು ಬೆಕ್ಕು ನಿಮಗೂ ಬೇಕು ಅನ್ನಿಸುತ್ತಲ್ಲವೆ? ನಿಜವಾದ ಕಾಳಜಿ ಎನ್ನುವುದು ಈವತ್ತು ಬಹಳ ತುಟ್ಟಿ!
ಇನ್ನಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 9:42 am, Sat, 13 August 22