ಇಂದಿನ ಕಾಲದಲ್ಲಿ ಗ್ಯಾಸ್ ಸ್ಟವ್ ಇಲ್ಲದ ಮನೆಗಳೇ ಇಲ್ಲ. ಕಟ್ಟಿಗೆ ಒಲೆಯ ಬದಲು ಪ್ರತಿಯೊಬ್ಬರೂ ಈ ಗ್ಯಾಸ್ ಒಲೆಯಲ್ಲಿಯೇ ಅಡುಗೆ ಮಾಡುತ್ತಾರೆ. ಆದರೆ ಈ ಗ್ಯಾಸ್ ಯಾವಾಗ ಖಾಲಿ ಆಗುತ್ತೆ ಅನ್ನೋದೇ ಬಹುದೊಡ್ಡ ಸಮಸ್ಯೆ. ಅದೆಷ್ಟೋ ಗೃಹಿಣಿಯರು ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್ ಖಾಲಿಯಾಗಿ, ಈ ಗ್ಯಾಸ್ ಇನ್ಯಾವಾಗ ಬರುತ್ತೋ, ಮಧ್ಯಾಹ್ನದ ಊಟಕ್ಕೆ ಹೇಗಪ್ಪಾ ಅಡುಗೆ ಬೇಯಿಸೋದು ಎಂದು ಸಂಕಷ್ಟಕ್ಕೆ ಸಿಳುಕಿದ್ದೂ ಉಂಟು. ಗ್ಯಾಸ್ ಖಾಲಿಯಾದರೆ ಯಾವುದೇ ಟೆನ್ಷನ್ ಮಾಡಿಕೊಳ್ಳಬೇಡಿ, ಸರಿಯಾದ ಸಮಯಕ್ಕೆ ಊಟ ಬೇಕೆಂದರೆ ನೀವು ವಾಟರ್ ಹೀಟರ್ ರಾಡ್ ನಿಂದಲೂ ಅಡುಗೆಯನ್ನು ಮಾಡಿಕೊಳ್ಳಬಹುದು ಎಂಬುದನ್ನು ಇಲ್ಲೊಬ್ಬ ವ್ಯಕ್ತಿ ತೋರಿಸಿಕೊಟ್ಟಿದ್ದಾನೆ. ಈತನ ಜುಗಾಡ್ ಐಡಿಯಾವನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದೇಸಿ ಜುಗಾಡ್ ಉಪಾಯಗಳ ಕುರಿತ ಒಂದಲ್ಲಾ ಒಂದು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಸದ್ಯ ಅದೇ ರೀತಿಯ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಗ್ಯಾಸ್ ಖಾಲಿಯಾಯಿತೆಂದು ವ್ಯಕ್ತಿಯೊಬ್ಬ ವಾಟರ್ ಹೀಟರ್ ರಾಡ್ ಸಹಾಯದಿಂದ ಸಾಂಬಾರ್ ಬೇಯಿಸಿದ್ದಾನೆ. ಈ ವಿಡಿಯೋವನ್ನು @sahoo_341 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಅಡುಗೆ ಮಾಡುವ ಸಮಯದಲ್ಲಿ ಗ್ಯಾಸ್ ಖಾಲಿಯಾಗಿ ಹೋಗುತ್ತೆ. ಈ ಸಾಂಬಾರ್ ಅನ್ನು ಇನ್ನೂ ಹೇಗಪ್ಪಾ ಬೇಯಿಸೋದು ಎಂದು ಯೋಚಿಸಿದ ಆತ, ತನ್ನ ಜುಗಾಡ್ ಐಡಿಯಾವನ್ನು ಉಪಯೋಗಿಸಿಕೊಂಡು ವಾಟರ್ ಹೀಟರ್ ರಾಡ್ ಸಹಾಯದಿಂದ ಸಾಂಬಾರ್ ಬೇಯಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕೋಪ ತಂದ ಆಪತ್ತು, ಸಿಗರೇಟ್ ಕೊಡಲಿಲ್ಲವೆಂದು ಕಾರನ್ನೇ ಸುಟ್ಟು ಹಾಕಿದ ಸೈಕೋ ಮಹಿಳೆ
ಫೆಬ್ರವರಿ 03 ರಂದು ಹಂಚಿಕೊಳ್ಳಲಾದ ಈ ವಿಡಿಯೋ 15.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ನಾಲ್ಕುವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನಮ್ಮ ಭಾರತದಲ್ಲಿ ಇಂತಹ ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ವ್ಯಕ್ತಿ ಅಡುಗೆಯಲ್ಲಿ ಪಿ.ಹೆಚ್.ಡಿ ಮಾಡಿದ್ದಾನೆʼ ಎಂಬ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ತಂತ್ರಜ್ಞಾನ ಭಾರತ ಬಿಟ್ಟು ಹೊರಗೆ ಹೋಗಬಾರದುʼ ಎಂಬ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ